ಮಹಾಶಿವರಾತ್ರಿಯ ಪೂಜೆಯ ವೇಳೆ ಈ ತಪ್ಪುಗಳಾಗದಂತೆ ಎಚ್ಚರ ವಹಿಸಿ!

Mahashivaratri 2023 : ಶಿವನ ಪೂಜೆಯಲ್ಲಿ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳಬೇಕು. ಮಹಾಶಿವರಾತ್ರಿಯ ದಿನದಂದು  ಶಿವನನ್ನು ಪೂಜಿಸುವಾಗ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲಿಸಬೇಕು.

Written by - Ranjitha R K | Last Updated : Feb 16, 2023, 04:05 PM IST
  • ಶಿವನ ಕೃಪೆಗೆ ಪಾತ್ರರಾಗಲು ಇರುವ ವಿಶೇಷ ದಿನ ಶಿವರಾತ್ರಿ
  • ಶಾಸ್ತ್ರಗಳ ಪ್ರಕಾರ ಶಿವರಾತ್ರಿ ದಿನ ಶಿವ ಪಾರ್ವತಿ ವಿವಾಹ ನೆರವೇರಿತ್ತಂತೆ
  • ಶಿವನನ್ನು ಪೂಜಿಸುವಾಗ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಮಹಾಶಿವರಾತ್ರಿಯ ಪೂಜೆಯ ವೇಳೆ ಈ ತಪ್ಪುಗಳಾಗದಂತೆ ಎಚ್ಚರ ವಹಿಸಿ!  title=

ಬೆಂಗಳೂರು : ಭಕ್ತರ ಭಕ್ತಿಗೆ ಬಹಳ ಬೇಗನೆ ಒಲಿಯುವ ದೇವನೆಂದರೆ ಅದು ಈಶ್ವರ ಎಂದು ಹೇಳಲಾಗುತ್ತದೆ.  ಶಿವನ ಕೃಪೆಗೆ ಪಾತ್ರರಾಗಲು ಇರುವ ವಿಶೇಷ ದಿನ ಶಿವರಾತ್ರಿ, ಈ ದಿನ ಶಿವನನ್ನು ಆರಾಧಿಸಿದರೆ ಶಿವ ಬಹಳ ಬೇಗ ಒಲಿಯುತ್ತಾನೆ ಮಾತ್ರವಲ್ಲ ನಮ್ಮ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನುವುದು ನಂಬಿಕೆ. ಶಾಸ್ತ್ರಗಳ ಪ್ರಕಾರ ಶಿವರಾತ್ರಿ ದಿನ ಶಿವ  ಪಾರ್ವತಿ ವಿವಾಹ ನೆರವೇರಿತ್ತಂತೆ. ಈ ದಿನ ಭಕ್ತರು ಉಪವಾಸ, ಜಾಗರಣೆ ಮಾಡಿ ಶಿವನ ಪೂಜೆಯಲ್ಲಿ ತಲ್ಲೀನರಾಗುತ್ತಾರೆ. ಆದರೆ ಶಿವನ ಪೂಜೆಯಲ್ಲಿ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳಬೇಕು. ಮಹಾಶಿವರಾತ್ರಿಯ ದಿನದಂದು  ಶಿವನನ್ನು ಪೂಜಿಸುವಾಗ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲಿಸಬೇಕು. 

ಶಿವನ ಪೂಜೆಯಲ್ಲಿ ಈ ತಪ್ಪುಗಳನ್ನು  ಮಾಡಲೇಬಾರದು : 
ಶಿವನ ಆರಾಧನೆಯ ವೇಳೆ ಈ ತಪ್ಪುಗಳನ್ನು ಮಾಡಿದರೆ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ. ಇದರಿಂದ ಮನಸ್ಸಿನ ಇಷ್ಟಾರ್ಥಗಳು ಈಡೇರುವುದಿಲ್ಲ. ಶಿವನ ಆರಾಧನೆಯ ಮೂಲಕ ಎಲ್ಲಾ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಪೂರೈಸಿಕೊಳ್ಳು ವಂತಾಗಲು ಪೂಜೆಯ ವೇಳೆ ಕೆಲವು  ಈ ತಪ್ಪುಗಳಾಗದಂತೆ ನೋಡಿಕೊಳ್ಳಿ. 

ಇದನ್ನೂ ಓದಿ : Akshaya Tritiya 2023 : ಅಕ್ಷಯ ತೃತೀಯ ದಿನ ಈ ವಸ್ತು ದಾನ ಮಾಡಿ, ಹೊಸ ಕೆಲಸ ಪ್ರಾರಂಭಿಸಿ ಯಶಸ್ವಿಯಾಗುತ್ತೀರಿ!

ಅಭಿಷೇಕ ಬಹಳ ಮುಖ್ಯ : 
ಮಹಾಶಿವರಾತ್ರಿಯ ದಿನ ಶಿವಲಿಂಗದ ಅಭಿಷೇಕಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ದೇವರಿಗೆ ನೀರು, ಹಾಲು ಅಥವಾ ಸಾಧ್ಯವಾದರೆ ಪಂಚಾಮೃತದಿಂದ ಅಭಿಷೇಕ ಮಾಡಿ. ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ತಾಮ್ರ, ಹಿತ್ತಾಳೆ, ಕಂಚು, ಬೆಳ್ಳಿ ಅಥವಾ ಅಷ್ಟಧಾತುಗಳಿಂದ ಮಾಡಿದ ಪಾತ್ರೆಯನ್ನು ಬಳಸಬೇಕು. ಯಾವುದೇ ಕಾರಣಕ್ಕೂ ಕಬ್ಬಿಣ ಅಥವಾ ಉಕ್ಕಿನಿಂದ ಮಾಡಿದ ಪಾತ್ರೆಯನ್ನು ಬಳಸಬೇಡಿ. 

ಹಸುವಿನ ಹಾಲು ಬಳಸಿ : 
ಮಹಾಶಿವರಾತ್ರಿಯ ದಿನದಂದು ಹಸುವಿನ ಹಾಲಿನಿಂದ ದೇವರಿಗೆ ಅಭಿಷೇಕ ಮಾಡಬೇಕು. ಅಭಿಷೇಕಕ್ಕೆ ಎಮ್ಮೆಯ ಹಾಲನ್ನು ಬಳಸುವುದರಿಂದ ಅದರ ಫಲ ಸಿಗುವುದಿಲ್ಲ. 

ಕುಂಕುಮ ಹಚ್ಚಬಾರದು : 
ಶಿವನ ಆರಾಧನೆಯಲ್ಲಿ ಕೆಲವು ವಸ್ತುಗಳ ಬಳಕೆ ಮಾಡಲೇ ಬಾರದು.  ಶಿವಲಿಂಗಕ್ಕೆ ಅರಶಿನ ಕುಂಕುಮ ಹಚ್ಚಬಾರದು. ಶಿವಲಿಂಗಕ್ಕೆ ಶ್ರೀಗಂಧವನ್ನು ಅರ್ಪಿಸಿ. 

ಒಡೆದ ಅಕ್ಕಿ ಬಳಕೆ ನಿಶಿದ್ದ : 
 ಶಿವನ ಆರಾಧನೆಯಲ್ಲಿ ಅಕ್ಷತೆಯನ್ನು ಬಳಸಲಾಗುತ್ತದೆ. ಆದರೆ ಅಕ್ಷತೆಗೆ ಬಳಸುವ ಅಕ್ಕಿ ಒಡೆದಿರಬಾರದು. ಇಡಿ ಇರುವ ಅಕ್ಕಿಯನ್ನೇ ಅಕ್ಷತೆಯಾಗಿ ಬಳಸಬೇಕು. ಆದರೆ ಅಕ್ಕಿ ಒಡೆಯದಂತೆ ನೋಡಿಕೊಳ್ಳಿ. 

ಇದನ್ನೂ ಓದಿ : Astro Tips: ಅಪಾರ ಹಣ-ಸಂಪತ್ತು ಪಡೆಯಲು ಇಂದೇ ಈ ಸುಲಭ ಪರಿಹಾರ ಮಾಡಿ

ತುಳಸಿ ಎಲೆ ಅರ್ಪಿಸಬಾರದು :
ಬಿಲ್ವ ಪತ್ರೆ, ದಾತುರ, ಎಕ್ಕಡ ಹೂವು -ಹಣ್ಣು , ಶಮಿ ಎಲೆಗಳನ್ನು ಶಿವನಿಗೆ ಅರ್ಪಿಸುವುದರಿಂದ ಶಿವನು ಬೇಗ ಸಂತುಷ್ಟನಾಗುತ್ತಾನೆ. ಆದರೆ ತುಳಸಿಯನ್ನು ಶಿವನಿಗೆ ಅರ್ಪಿಸುವ ತಪ್ಪನ್ನು ಮಾಡಬೇಡಿ. ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವಂತಿಲ್ಲ. 

 

(ಸೂಚನೆ: ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News