ಭಿಕ್ಷುಕನನ್ನು ರಾಜನನ್ನಾಗಿಸುತ್ತದೆ ಕಾಳ ಸರ್ಪ ಯೋಗ!ಕಾಳ ಸರ್ಪ ಯೋಗ ಮತ್ತು ದೋಷಕ್ಕಿದೆ ವ್ಯತ್ಯಾಸ

ಯಾರ ಜಾತಕದಲ್ಲಿ ಕಾಳಸರ್ಪ ದೋಷವಿರುತ್ತದೆಯೋ ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದರೆ ಕಾಲ ಸರ್ಪ ಯೋಗ ಹಾಗಲ್ಲ.

Written by - Ranjitha R K | Last Updated : Jul 15, 2024, 05:52 PM IST
  • ಜೀವನದಲ್ಲಿ ಏನು ನಡೆಯುತ್ತದೆ ಎನ್ನುವುದು ನಮ್ಮ ಹಣೆ ಬರಹ
  • ಹುಟ್ಟುವ ದಿನಾಂಕ, ಸಮಯಗಳಿಗೆ ಅನುಗುಣವಾಗಿ ಕುಂಡಲಿ ಅಥವಾ ಜಾತಕ ಬರೆಯಲಾಗುತ್ತದೆ
  • ಇಲ್ಲಿ ಕೆಲವು ಯೋಗಗಳು, ದೋಷಗಳು ಎಲ್ಲವೂ ಗೋಚರಿಸುತ್ತವೆ.
ಭಿಕ್ಷುಕನನ್ನು ರಾಜನನ್ನಾಗಿಸುತ್ತದೆ ಕಾಳ ಸರ್ಪ ಯೋಗ!ಕಾಳ ಸರ್ಪ ಯೋಗ ಮತ್ತು ದೋಷಕ್ಕಿದೆ ವ್ಯತ್ಯಾಸ title=

ಬೆಂಗಳೂರು : ನಂಬಿಕೆಗಳ ಪ್ರಕಾರ ಹೇಳುವುದಾದರೆ ನಮ್ಮ ಜೀವನದಲ್ಲಿ ಏನು ನಡೆಯುತ್ತದೆ ಎನ್ನುವುದು ನಮ್ಮ ಹಣೆ ಬರಹವನ್ನು ನಿರ್ಧರಿಸಿ ಇರುತ್ತದೆಯಂತೆ. ಅಂದರೆ ನಾವು ಹುಟ್ಟುವ ದಿನಾಂಕ, ಸಮಯಗಳಿಗೆ ಅನುಗುಣವಾಗಿ ಕುಂಡಲಿ ಅಥವಾ ಜಾತಕ ಬರೆಯಲಾಗುತ್ತದೆ.ಇಲ್ಲಿ ಕೆಲವು ಯೋಗಗಳು, ದೋಷಗಳು ಎಲ್ಲವೂ ಗೋಚರಿಸುತ್ತವೆ. ಯೋಗ ಎಂದ ಕೂಡಲೇ ಎಲ್ಲವೂ ಒಳ್ಳೆಯದೇ ಎಂದಲ್ಲ.ಇಲ್ಲಿ ಕೆಟ್ಟ ಯೋಗಗಳೂ ಇರಬಹುದು. ಕೆಲವು ಯೋಗಗಳು ಮಿಶ್ರ ಫಲಿತಾಂಶಗಳನ್ನು ನೀಡುವಂಥದ್ದಾಗಿರಲೂ ಬಹುದು. ಅಂತಹ  ಯೋಗವೇ ಕಾಳಸರ್ಪ ಯೋಗ.

ಯಾರ ಜಾತಕದಲ್ಲಿ ಕಾಳಸರ್ಪ ದೋಷವಿರುತ್ತದೆಯೋ ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಆದರೆ ಕಾಲ ಸರ್ಪ ಯೋಗ ಹಾಗಲ್ಲ. ಈ ಯೋಗವು ಕಡು ಬಡವನನ್ನು ಕೂಡಾ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು. 

ಇದನ್ನೂ ಓದಿ : Weekly Horoscope: ಜುಲೈ ತಿಂಗಳ ಮೂರನೇ ವಾರ ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಹೇಗಿದೆ?

ಕಾಳಸರ್ಪ ಯೋಗ : 
 ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ರಾಹು-ಕೇತು ಗ್ರಹಗಳಿಗೆ ಎರಡು ಧ್ರುವಗಳು.ರಾಹುವಿನದ್ದು ಉತ್ತರ ಧ್ರುವವಾದರೆ ಕೇತುವಿನದ್ದು ದಕ್ಷಿಣ ಧ್ರುವ. ರಾಹು ಹಾವಿನ ತಲೆಯನ್ನು ಹೊಂದಿದ್ದರೆ, ಕೇತುವಿನ ಹಾವಿನ ಬಾಲವನ್ನು ಹೊಂದಿರುತ್ತಾನೆ.ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತು ಗ್ರಹಗಳು ಹಿಮ್ಮುಖವಾಗಿಯೇ ಚಲಿಸುತ್ತದೆ. ಹೀಗೆ ರಾಹು ಮತ್ತು ಕೇತು ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಇತರ ಗ್ರಹಗಳು ನಡುವೆ ಬಂದರೆ,ಆಗ ಕಾಲ ಸರ್ಪ ದೋಷವನ್ನು ಎದುರಿಸಬೇಕಾಗುತ್ತದೆ. ಈ ಕಾಲ ಸರ್ಪ ಯೋಗದಲ್ಲಿ 12 ವಿಧಗಳಿವೆ.

ಕಾಲ ಸರ್ಪ ಯೋಗದ ಲಾಭವೇನು ? :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಪಂಚದ ಎಲ್ಲಾ ಪ್ರಸಿದ್ಧ ಮತ್ತು ಪ್ರಭಾವಿ ವ್ಯಕ್ತಿಗಳ ಜಾತಕದಲ್ಲಿ ಕಾಲ ಸರ್ಪ ಯೋಗವನ್ನು ಕಾಣಬಹುದು. ಯಾವ ವ್ಯಕ್ತಿಯ ಜಾತಕದಲ್ಲಿ ಈ ಎರಡೂ ಛಾಯಾಗ್ರಹಗಳು ಅಂದರೆ ರಾಹು ಮತ್ತು ಕೇತು ಶುಭ ಸ್ಥಾನದಲ್ಲಿದೆಯೋ, ಆ ವ್ಯಕ್ತಿ ಎಲ್ಲಾ ಕಷ್ಟಗಳನ್ನೂ ಮೀರಿ ಹಣ ಗಳಿಸುತ್ತಾನೆ, ಶ್ರೀಮಂತನಾಗುತ್ತಾನೆ. ಆದರೆ ಎರಡೂ ಗ್ರಹಗಳು ಅಶುಭ ಸ್ಥಾನದಲ್ಲಿದ್ದಾಗ, ಜೀವನದಲ್ಲಿ ಕಡು ಕಷ್ಟ ನೋಡಬೇಕಾಗುತ್ತದೆ. ವ್ಯಕ್ತಿ ರಾಜನಿಂದ ಭಿಕ್ಷುಕನಾಗಬೇಕಾಗುತ್ತದೆ.  

ಇದನ್ನೂ ಓದಿ :ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ ಈ ದೇವಾಲಯದ ದೇವಿ !ಕೆಂಪು ಬಣ್ಣಕ್ಕೆ ತಿರುಗುತ್ತದೆ ದೇವಸ್ಥಾನ ಸಮೀಪದ ನದಿ

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News