ಈ ತಿಂಗಳು ಈ ರಾಶಿಯವರ ಮನೆಯಲ್ಲಿ ಹರಿಯುವುದು ಸಂತಸದ ಹೊನಲು ! ಸಂಗಾತಿಗೆ ಪದೋನ್ನತಿ ಭಾಗ್ಯ

Monthly Horoscope :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗನುಗುಣವಾಗಿ ಜೂನ್ ನಲ್ಲಿ ಕೌಟುಂಬಿಕ ಭವಿಷ್ಯ ಹೇಗಿರಲಿದೆ ಎಂದು ನೋಡುವುದಾದರೆ ಕೆಲವು ರಾಶಿಯವರ ರಾಶಿ ಭವಿಷ್ಯ ಶುಭ ಫಲಗಳನ್ನು ನೀಡಲಿದೆ.

Written by - Ranjitha R K | Last Updated : Jun 2, 2023, 01:52 PM IST
  • ಹೊಸ ಮಾಸದಲ್ಲಿ ಹೇಗಿರಲಿದೆ ರಾಶಿ ಭವಿಷ್ಯ
  • ಯಾರಿಗೆ ಸಿಹಿ ಯಾರಿಗೆ ಕಹಿ
  • ಹೇಗಿರಲಿದೆ ಸಂಸಾರ ಜೀವನ
 ಈ ತಿಂಗಳು ಈ ರಾಶಿಯವರ ಮನೆಯಲ್ಲಿ ಹರಿಯುವುದು ಸಂತಸದ ಹೊನಲು ! ಸಂಗಾತಿಗೆ ಪದೋನ್ನತಿ ಭಾಗ್ಯ  title=

Monthly Horoscope : ಹೊಸ ಮಾಸ ಆರಂಭವಾಗಿದೆ. ಹೊಸ ಮಾಸದಲ್ಲಿ ಹೇಗಿರಲಿದೆ ರಾಶಿ ಭವಿಷ್ಯ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗನುಗುಣವಾಗಿ ಜೂನ್ ನಲ್ಲಿ ಕೌಟುಂಬಿಕ ಭವಿಷ್ಯ ಹೇಗಿರಲಿದೆ ಎಂದು ನೋಡುವುದಾದರೆ ಕೆಲವು ರಾಶಿಯವರ ರಾಶಿ ಭವಿಷ್ಯ ಶುಭ ಫಲಗಳನ್ನು ನೀಡಲಿದೆ.  ಕುಟುಂಬ ಸದಸ್ಯರೊಂದಿಗೆ ಹೊಂದಿ ಕೊಂಡು ಹೋದರೆ ಇಡೀ ತಿಂಗಳು ಸಂತೋಷದಿಂದ ಸಾಗುವುದು. 

ಮೇಷ ರಾಶಿ : ಜೀವನ ಸಂಗಾತಿಯು ನಿರಂತರವಾಗಿ ನಿಮ್ಮ ಮುಂದೆ ಇಡುತ್ತಿದ್ದ ಬೇಡಿಕೆಯನ್ನು ಪೂರೈಸುವ ಸಮಯ ಇದು. ಸಂಗಾತಿಯು ತನ್ನ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೇಳಿದರೆ  ಕಸಿವಿಸಿಯಾಗದೆ ಎಚ್ಚರಿಕೆಯಿಂದ ಆಲಿಸಿ ಸಲಹೆಗಳನ್ನು ನೀಡಿ. ನಿಮ್ಮ ತಾಯಿಯ ಆರೋಗ್ಯ ಹಠಾತ್ ಕ್ಷೀಣಿಸುವ ಸಾಧ್ಯತೆಯಿದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

ಇದನ್ನೂ ಓದಿ : Lucky Stone: ಶುಕ್ರ, ಶನಿ ಮತ್ತು ಬುಧ ಈ ರತ್ನಗಳಿಂದ ಬಲಶಾಲಿಯಾಗುತ್ತಾರೆ.. ಅಪಾರ ಹಣ, ಜೀವನದಲ್ಲಿ ಯಶಸ್ಸು ಗ್ಯಾರೆಂಟಿ!

ಮಿಥುನ ರಾಶಿ : ಕುಟುಂಬ ಸದಸ್ಯರ ಇಷ್ಟ-ಅನಿಷ್ಟಗಳ ಬಗ್ಗೆ ಕಾಳಜಿ ವಹಿಸಿ. ಯಾವುದೇ ಸಮಸ್ಯೆಯಿದ್ದರೆ, ಅದನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ. ತಾಯಿ ಅಥವಾ ತಾಯಿಯ ಸ್ಥಾನದಲ್ಲಿ ಇರುವವರಿಗೆ ಉಡುಗೊರೆ ನೀಡಿದೆ.  ನಿಮ್ಮ ಕೆಲಸ ಕಾರ್ಯಗಳಿಗೆ ಅವರ ಆಶೀರ್ವಾದ ಅಗತ್ಯ.

ಕರ್ಕ ರಾಶಿ : ಈ ತಿಂಗಳು, ಕರ್ಕಾಟಕ ರಾಶಿಯವರ ಸಂಬಂಧಗಳು ಗಟ್ಟಿಯಾಗಿರುತ್ತದೆ. ಮನೆಯವರೂ ನಿಮ್ಮಿಂದ ಈ ತಿಂಗಳು ಸಹಾಯದ ನಿರೀಕ್ಷೆಯಲ್ಲಿರುತ್ತಾರೆ. ನಿಮಗೆ ಸಾಧ್ಯವಾದರೆ ಸಹಾಯ ಮಾಡಿ. ಇಲ್ಲವಾದರೆ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು  ಹುಟ್ಟಿಕೊಳ್ಳಬಹುದು. 

ವೃಶ್ಚಿಕ ರಾಶಿ : ಮಕ್ಕಳ ಕಾರಣದಿಂದ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಜಗಳಗಳು ಉಂಟಾಗಬಹುದು. ಆದ್ದರಿಂದ ಮಕ್ಕಳ ತಪ್ಪುಗಳನ್ನು  ಪ್ರೋತ್ಸಾಹಿಸಬೇಡಿ. ಸಂಗಾತಿಗೆ ಉದ್ಯೋಗದಲ್ಲಿ ಪ್ರಗತಿ ಸಿಗುವ ಎಲ್ಲಾ ಸಾಧ್ಯತೆಗಳು ಇವೆ.  

ಇದನ್ನೂ ಓದಿ ಕನಸಿನಲ್ಲಿ ʼಕಪ್ಪು ಚೇಳುʼ ಕಾಣಿಸಿಕೊಂಡರೆ ಶುಭವೋ.. ಅಶುಭವೋ..?

ಧನು ರಾಶಿ : ವೈವಾಹಿಕ ಜೀವನದಲ್ಲಿ ಕೆಲವು ಒತ್ತಡಗಳನ್ನು ಎದುರಿಸಬೇಕಾಗಬಹುದು. ತಾಳ್ಮೆ ಮತ್ತು ತಿಳುವಳಿಕೆಯಿಂದ ಸಂದರ್ಭಗಳನ್ನು ನಿಯಂತ್ರಿಸಿ. ಈ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟಿನ ಅಸಹಾಯಕತೆಯನ್ನು ಅನುಭವಿಸುವವರಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ  ಸಹಾಯ ಮಾಡಿ. 

ಮೀನ ರಾಶಿ : ಮನೆಯ ಸದಸ್ಯರೊಂದಿಗೆ ಸೌಹಾರ್ದಯುತವಾಗಿ ಬಾಳಬೇಕಾಗುವುದು. ಕುಟುಂಬ ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳು  ಉಂಟಾಗಬಹುದು. ಕೆಲವು ಕೌಟುಂಬಿಕ ವಿಚಾರಗಳಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಪ್ಪನೊಂದಿಗೆ ಜಗಳವಾಗುವ ಸಾಧ್ಯತೆಯಿದೆ. 

ಇದನ್ನೂ ಓದಿ : Astro Tips: ಅದೃಷ್ಟವನ್ನೇ ಬದಲಾಯಿಸುವ ‘ಬೆಳ್ಳಿ ಉಂಗುರ’ ಭಿಕ್ಷುಕನೂ ರಾಜನಾಗುತ್ತಾನೆ!

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News