Fact Check: ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಮುಕ್ತಾಯಕ್ಕೆ ಇನ್ನೆರಡು ವಾರಗಳಷ್ಟೇ ಬಾಕಿ ಇದೆ. ಆದರೆ ಈ ಬೆನ್ನಲ್ಲೇ ಪೋಸ್ಟ್ ಒಂದು ವೈರಲ್ ಆಗಿದ್ದು ಅಚ್ಚರಿ ಮೂಡಿಸಿದೆ. ಆ ಪೋಸ್ಟ್ನಲ್ಲಿ "ಬಿಗ್ ಬಾಸ್ ಫಿನಾಲೆಗೆ ಮೂರು ವಾರ ಬಾಕಿ ಇರುವಾಗಲೇ ಪೊಲೀಸರು ಬೀಗ ಹಾಕಿದ್ದಾರೆ" ಎಂಬರ್ಥದಲ್ಲಿ ಬರೆಯಲಾಗಿತ್ತು, ಇದನ್ನು ಕಂಡ ಜನರು ಶಾಕ್ ಆಗಿದ್ದಾರೆ.
ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಉಪಯೋಗವಾಗುತ್ತೋ.. ಅಷ್ಟೇ ಮಟ್ಟದಲ್ಲಿ ಫೇಕ್ ಸುದ್ದಿಗಳನ್ನೂ ನೀಡುತ್ತಿದೆ. ಇದರ ಬಗ್ಗೆ ವಿಶೇಷವಾಗಿ ತಿಳಿಸಿಕೊಡುವ ಅವಶ್ಯಕತೆಯಿಲ್ಲ. ಇದೀಗ ಅಂತಹದ್ದೇ ಒಂದು ಸಂಗತಿ ಬಿಗ್ ಬಾಸ್ ಶೋ ಮೇಲೂ ಬಿದ್ದಿದೆ. ಇದರ ಸತ್ಯಾಸತ್ಯತೆ ಏನೆಂಬುದನ್ನು ಮುಂದೆ ತಿಳಿಯೋಣ.
ಬಿಗ್ ಬಾಸ್ ಸ್ಪರ್ಧಿಗಳ ಕುರಿತಾಗಿ ಸಾಕಷ್ಟು ಫೇಕ್ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಈ ಬಾರಿ ಹರಿದಾಡಿರುವುದು ಬಿಗ್ ಬಾಸ್ ಮನೆಯ ಬಗ್ಗೆಯೇ. ಬಿಗ್ ಬಾಸ್ ಮನೆಗೆ ಪೊಲೀಸರು ಬೀಗ ಹಾಕಿದ್ದಾರೆ ಶೋ ಸ್ಥಗಿತವಾಗಿದೆ ಎಂಬ ನಕಲಿ ಸುದ್ದಿಯಿರುವ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ʼಕರುನಾಡ ಸುದ್ದಿʼ ಎಂಬ ಫೇಸ್ಬುಕ್ ಪೇಜ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೋಟೋ ಹಾಗೂ ಬಿಗ್ ಬಾಸ್ ಮನೆಯ ಹೊರಾಂಗಣದಲ್ಲಿ ಪೊಲೀಸರು ನಿಂತಿರುವ ಫೋಟೋವನ್ನು ಹಾಕಿದ್ದಲ್ಲದೆ, "ಬಿಗ್ಬಾಸ್ ಮನೆಗೆ ಬೀಗ ಹಾಕಿದ ಪೊಲೀಸರು, ಕಾರಣ ಕೇಳಿ ಸ್ವತಃ ಕಿಚ್ಚ ಸುದೀಪ್ ಶಾಕ್" ಎಂದು ಬರೆದಿದ್ದಾರೆ.
Kannada KET24 ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ವಿಡಿಯೋ ಹಾಕಲಾಗಿದೆ. ಆ ವಿಡಿಯೋದಲ್ಲಿ ಮುಖಪುಟಕ್ಕೆ "ಇನ್ನು 3 ವಾರ ಬಾಕಿ ಇರುವಾಗಲೇ ಬಿಗ್ಬಾಸ್ ಮನೆಗೆ ಬೀಗ... ಆಗಿದ್ದೇನು?" ಎಂದು ಬರೆಯಾಗಿದ್ದು, ಇದನ್ನು ಪೋಸ್ಟ್ ಮಾಡಲಾಗಿದೆ.
ಇನ್ನು ಪೋಸ್ಟ್ನ ಸತ್ಯಾಸತ್ಯತೆಯನ್ನು ಸಜಗ್ ತಂಡವು ತನಿಖೆ ನಡೆಸಿ ಬಹಿರಂಗಗೊಳಿಸಿದೆ. ಜನವರಿ 9 ರಂದು ಮಾಳಿಗೊಂಡನಹಳ್ಳಿ ಸರ್ವೆ ನಂ.128/1ರ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ರದ್ದು ಮಾಡಿದ್ದು, ಶೋ ಸ್ಥಗಿತಗೊಳಿಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಪಂ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವೂ ಆಗಿತ್ತು. ಮುಂದುವರೆದು ತನಿಖೆ ನಡೆಸಿದಾಗ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೋ ಪ್ರಸಾರವಾಗುತ್ತಿದೆ. ಅಷ್ಟೇ ಅಲ್ಲದೆ, ವಾಹಿನಿಗೆ ಸಂಬಂಧಪಟ್ಟ ಸೋಶಿಯಲ್ ಮೀಡಿಯಾ ಪೇಜ್ಗಳು ಕೂಡ ಆಕ್ಟೀವ್ ಆಗಿದೆ. ಹೀಗಿರುವಾಗ ಇದು ಸುಳ್ಳುಸುದ್ದಿ ಎಂದು ಸಜಗ್ ತನಿಖೆಯಲ್ಲಿ ಬಹಿರಂಗವಾಗಿದೆ.
ಅಷ್ಟೇ ಅಲ್ಲದೆ, ಇದರ ಹೊರತಾಗಿ ಸಜಗ್ ತಂಡವು ಕಲರ್ಸ್ ವಾಹಿನಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಹೊರತು ಪೊಲೀಸರು ಬಿಗ್ ಬಾಸ್ ಮನೆಗೆ ಆಗಮಿಸಿ ಶೋ ಸ್ಥಗಿತ ಮಾಡಿಲ್ಲ ಎಂದು ತಿಳಿದುಬಂದಿದೆ. ಈ ಸುದ್ದಿ ದಿಕ್ಕು ತಪ್ಪಿಸುವಂತಿದ್ದು, ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಚ್ಚಲು ಕೊಯ್ದ ಪ್ರಕರಣಕ್ಕೆ ಕಾಂಗ್ರೆಸ್ ಸರ್ಕಾರದ ಧೋರಣೆಯೇ ಕಾರಣ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.
ಬಿಗ್ ಬಾಸ್ ಮನೆ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮಕ್ಕೆ ಸೂಚನೆ ನೀಡಿರುವುದು ಹಾಗೂ ಈ ಹಿಂದೆ ಪೊಲೀಸರು ಆಗಮಿಸಿದ್ದ ಫೋಟೋ ಇದಾಗಿದೆ ಎಂಬುದು ಸಹ ಈ ವೇಳೆ ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ