ಮಹಾಶಿವರಾತ್ರಿಯಿಂದ ರೂಪುಗೊಳ್ಳುವ ವಿಶೇಷ ಯೋಗದಿಂದ ಆರು ರಾಶಿಯವರಿಗೆ ಲಾಭ

ಈ ಬಾರಿ ಫೆಬ್ರವರಿ 19 ರಂದು ಶಿವರಾತ್ರಿ ಹಬ್ಬ ಬರುತ್ತದೆ. ಈ ದಿನದಂದು ವಿಶೇಷವಾದ ಯೋಗ ಕೂಡಾ ನಿರ್ಮಾಣವಾಗುತ್ತಿದೆ.  ಈ ಬಾರಿಯ ಶಿವರಾತ್ರಿಯಿಂದ ಆರು ರಾಶಿಯವರ ಅದೃಷ್ಟ ಹೊಳೆಯಲಿದೆ. 

Written by - Ranjitha R K | Last Updated : Jan 31, 2023, 11:15 AM IST
  • ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ.
  • ಮಹಾಶಿವರಾತ್ರಿಯ ಈ ದಿನ ಮಹಾದೇವನ ಭಕ್ತರಿಗೆ ಬಹಳ ವಿಶೇಷವಾದದ್ದು.
  • ಈ ಬಾರಿ ಫೆಬ್ರವರಿ 19 ರಂದು ಶಿವರಾತ್ರಿ ಹಬ್ಬ ಬರುತ್ತದೆ
ಮಹಾಶಿವರಾತ್ರಿಯಿಂದ ರೂಪುಗೊಳ್ಳುವ ವಿಶೇಷ ಯೋಗದಿಂದ ಆರು ರಾಶಿಯವರಿಗೆ ಲಾಭ title=

ಬೆಂಗಳೂರು : ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಮಹಾಶಿವರಾತ್ರಿಯ ಈ ದಿನ ಮಹಾದೇವನ ಭಕ್ತರಿಗೆ ಬಹಳ ವಿಶೇಷವಾದದ್ದು. ಈ ದಿನದಂದು  ಶಿವ ಮತ್ತು ತಾಯಿ ಪಾರ್ವತಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಮಹಾಶಿವರಾತ್ರಿಯ ದಿನ  ಶಿವ ಭಕ್ತರು ಉಪವಾಸ ವೃತ ಆಚರಿಸುತ್ತಾರೆ. ಈ ಬಾರಿ ಫೆಬ್ರವರಿ 19 ರಂದು ಶಿವರಾತ್ರಿ ಹಬ್ಬ ಬರುತ್ತದೆ. ಈ ದಿನದಂದು ವಿಶೇಷವಾದ ಯೋಗ ಕೂಡಾ ನಿರ್ಮಾಣವಾಗುತ್ತಿದೆ. ಈ ಬಾರಿಯ ಶಿವರಾತ್ರಿಯಿಂದ ಆರು ರಾಶಿಯವರ ಅದೃಷ್ಟ ಹೊಳೆಯಲಿದೆ. 

ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿ ಹಬ್ಬವು ಮೇಷ ರಾಶಿಯವರಿಗೆ ಬಹಳ ವಿಶೇಷವಾಗಿರುತ್ತದೆ. ಈ ದಿನದಂದು ಶಿವನು ಮೇಷ ರಾಶಿಯವರನ್ನು ವಿಶೇಷವಾಗಿ ಹರಸುತ್ತಾನೆ. ಮಹಾದೇವನ ಅನುಗ್ರಹದಿಂದ, ಈ ರಾಶಿಯವರು ಪ್ರತಿ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ವೃತ್ತಿಜೀವನದಲ್ಲಿ ಬೆಳವಣಿಗೆಯ ಸಾಧ್ಯತೆಯಿದೆ. 

ಇದನ್ನೂ ಓದಿ :Shani Udaya 2023: ಶನಿ ಉದಯಿಸುತ್ತಿದ್ದಂತೆ ನಿರ್ಮಾಣಗೊಳ್ಳಲಿದೆ 'ಧನ ರಾಜಯೋಗ' ಈ ರಾಶಿಗಳ ಮೇಲೆ ಶುಭ ದೃಷ್ಟಿ

ವೃಷಭ ರಾಶಿ :
ವೃಷಭ ರಾಶಿಯವರ ಮೇಲೆ ಕೂಡಾ ಶಿವನ ಆಶೀರ್ವಾದ ಸ್ವಲ್ಪ ಹೆಚ್ಚೇ ಇರುತ್ತದೆ. ಈ ಸಮಯದಲ್ಲಿ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಪೂರ್ಣಗೊಳ್ಳದೆ ನಿಂತು ಹೋಗಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣವಾಗುವುದು. ಶಿವನ ಕೃಪೆಯಿಂದ ಸಂಪತ್ತು ವೃದ್ಧಿಯಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. 

ಮಿಥುನ ರಾಶಿ :
ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಮಿಥುನ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಶಿವನ ಆಶೀರ್ವಾದದಿಂದ ಎಲ್ಲದಕ್ಕೂ ಮುಕ್ತಿ ಸಿಗಲಿದೆ. ಉದ್ಯೋಗಿಗಳಿಗೆ ಈ ಸಮಯವು ಅತ್ಯುತ್ತಮವಾಗಿರುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗದ ಆಫರ್ ಬರಬಹುದು. 

ಇದನ್ನೂ ಓದಿ : ಅಶ್ವಿನಿ ನಕ್ಷತ್ರದಲ್ಲಿ ರಾಹು ಪ್ರವೇಶ, ಈ ಮೂರು ರಾಶಿಗಳ ಜನರಿಗೆ ಅಪಾರ ಧನ, ಸ್ಥಾನಮಾನ ಪ್ರಾಪ್ತಿ!

ಧನು ರಾಶಿ : 
ಮಹಾಶಿವರಾತ್ರಿಯಂದು ಧನು ರಾಶಿಯವರ ಮೇಲೆ ಈಶ್ವರನ ವಿಶೇಷ ಆಶೀರ್ವಾದವಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಲ್ಲಿಯವರೆಗೆ ಈಡೇರದ ಬಯಕೆಯನ್ನು ಈ ಹೊತ್ತಿನಲ್ಲಿ ನೆರವೇರುವುದು. ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. 

ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಈ ರಾಶಿಯ ನಾಲ್ಕನೇ ಮನೆಯಲ್ಲಿ ವಿಶೇಷ ಯೋಗವು ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಸಂತೋಷಗಳು ಹೆಚ್ಚಾಗುತ್ತವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಶಿವನ ಕೃಪೆಯಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ.

ಕುಂಭ ರಾಶಿ :
ಮಹಾಶಿವರಾತ್ರಿಯ ದಿನದಂದು ನಿರ್ಮಾಣವಾಗುತ್ತಿರುವ ಅಪರೂಪದ  ಯೋಗದಿಂದ ಕುಂಭ ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಈ ಸಮಯದಲ್ಲಿ, ಈ ಜನರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ನಿಂತು ಹೋಗಿದ್ದ ಕೆಲಸ ಚುರುಕು ಪಡೆಯಲಿದೆ. 

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News