Horoscope Today January 27 2025: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ ತ್ರಯೋದಶಿ ತಿಥಿಯ ಈ ದಿನ ಸೋಮವಾರ, ಮೂಲಾ ನಕ್ಷತ್ರ, ಹರ್ಷಣ ಯೋಗ, ಗರಜ ಕರಣ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಹಣಕಾಸಿನ ವಿಷಯಗಳು ಹಠಾತ್ ತಿರುವು ಪಡೆದುಕೊಳ್ಳಬಹುದು. ಕಳೆದ ಕೆಲವು ದಿನಗಳಿಂದ ಉದ್ದೇಶಪೂರ್ವಕವಾಗಿ ನಿಮ್ಮ ಹಣ ನೀಡದವರು ಇಂದು ತಾವಾಗಿಯೇ ಬಂದು ಹಣ ಮರಳಿಸುವರು. ವೃತ್ತಿ ಬದುಕಿನಲ್ಲಿ ಕೆಲವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಸ್ನೇಹಿತರಲ್ಲಿ ಒಬ್ಬರಿಗೆ ಇಂದು ನಿಮ್ಮ ಸಹಾಯದ ಅಗತ್ಯವಿದ್ದು, ಅವರ ಮಿಷನ್ ಪೂರ್ಣಗೊಳಿಸುವಲ್ಲಿ ನಿಮ್ಮ ಪಾತ್ರ ಸ್ಮರಣೀಯವಾಗಿ ಉಳಿಯಲಿದೆ. ವ್ಯವಹಾರದಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳುವುದನ್ನು ಮುಂದೂಡಬೇಕಾಗುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ವೃತ್ತಿಪರರು ಬದಲಾಗುತ್ತಿರುವ ಟ್ರೆಂಡ್‌ಗಳಿಗೆ ಅಂಗುಣವಾಗಿ ಹೊಸ ಕೋರ್ಸ್‌ಗಳನ್ನು ಕಲಿಯಲು ಪ್ರಯತ್ನಿಸುವುದು ಒಳಿತು. ಇದಲ್ಲದೆ, ತಾಂತ್ರಿಕ ಜ್ಞಾನಕ್ಕೆ ನಿಮ್ಮನ್ನು ನೀವು ಒಡ್ಡಿಕೊಳ್ಳುವ ಅಗತ್ಯವಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಪಾಲುದಾರಿಕೆ ವ್ಯಾಪಾರವು ಇಂದು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಇಂದು ಚರ್ಚೆಯಲ್ಲಿ ತೊಡಗಬಹುದು. ನಿಮ್ಮ ಆಲೋಚನೆಗಳನ್ನು ಬೇರೆಯವರು ಒಪ್ಪಿಕೊಳ್ಳುವಂತೆ ಮಾಡಲು ಹೆಣಗಾಡಬೇಕಾಗಬಹುದು. ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವಾಗ ತಾಳ್ಮೆ ಅಗತ್ಯವಾಗಿದೆ.
ಇದನ್ನೂ ಓದಿ- ಮೌನಿ ಅಮಾವಾಸ್ಯೆಯಲ್ಲಿ ಅರ್ಧಕೇಂದ್ರ ರಾಜಯೋಗ: ಶನಿ ಪ್ರಭಾವ, ಬುಧನಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಪರಿಚಯವಿಲ್ಲದ ಊರಿನಲ್ಲಿ ಹೊಸ ಮುಖಗಳೊಂದಿಗೆ ಹೊಂದಿಕೊಳ್ಳುವುದು ನಿಮಗೆ ಕೊಂಚ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಕೆಲಸದ ಸ್ಥಳದಲ್ಲಿ ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡುವವರನ್ನು ಹುಡುಕಲು ಪ್ರಯತ್ನಿಸಿ. ಸುತ್ತಮುತ್ತಲಿನ ಜನರೊಂದಿಗೆ ಜಾಗರೂಕರಾಗಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ದತಿಯ ಬಗ್ಗೆ ವಿಶೇಷ ಕಾಳಜಿವಹಿಸಿ. ಹೊರಗಿನ ಆಹಾರ ಸೇವನೆ ತಪ್ಪಿಸಿ. ಶುಕ್ರನ ಪ್ರಭಾವದಿಂದ ಇಂದು ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಕೆಲವು ಪ್ರಮುಖ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಮನಸ್ಸು ಚಂಚಲಗೊಳ್ಳಲು ಬಿಡಬೇಡಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಚಂಚಲತೆಯಿಂದ ಕೂಡಿದ ದಿನ. ಇಂದು ಯಾವುದೋ ಪ್ರಮುಖ ವಿಚಾರದ ಸಮಸ್ಯೆ ನಿಭಾಯಿಸುವಲ್ಲಿ ನೀವು ಸಂದಿಗ್ಡತೆಯನ್ನು ಎದುರಿಸಬೇಕಾಗಬಹುದು. ದೊಡ್ಡ ರಹಸ್ಯವೊಂದನ್ನು ಹಿಡಿದಿಟ್ಟುಕೊಳ್ಳಲು ನೀವು ಪರಿತಪಿಸಬಹುದು. ಕುಟುಂಬದಲ್ಲಿ ಕಠಿಣ ಮಾತುಗಳು ನಿಮ್ಮ ಪ್ರೀತಿಪಾತ್ರರನ್ನು ನೋಯಿಸಬಹುದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಅತ್ಯುತ್ತಮ ಯೋಜನೆಯ ಅನುಷ್ಠಾನದಿಂದ ನಿಮ್ಮ ನಿಯಮಿತ ವೃತ್ತಿಪರ ಅಥವಾ ವ್ಯಾಪಾರದಲ್ಲಿ ಲಾಭಗಳು ಹೆಚ್ಚಾಗಬಹುದು. ಹೊಸ ಹೊಸ ಅವಕಾಶಗಳು ನಿಮ್ಮ ದಾರಿಯಲ್ಲಿ ಬರಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಣನೀಯವಾಗಿ ಹೆಚ್ಚಾಗಲಿದ್ದು ತೃಪ್ತಿದಾಯಕ ದಿನವನ್ನು ಅನುಭವಿಸುವಿರಿ.
ಧನು ರಾಶಿಯವರ ಭವಿಷ್ಯ (Sagittarius Horoscope):
ಹೊಸ ಜನರೊಂದಿಗೆ ಹೊಸ ಕೆಲಸವನ್ನು ಆರಂಭಿಸಲು ಇಂದಿನ ದಿನ ತುಂಬಾ ಪ್ರಾಶಸ್ತ್ಯವಾಗಿದೆ. ನಿಮ್ಮ ಜೀವನದಲ್ಲಿ ತಲೆದೂರಿದ್ದ ಅಸ್ವಸ್ಥತೆಯ ಭಾವನೆ ಕೊನೆಗೊಳ್ಳುತ್ತದೆ. ಕೆಲಸದಲ್ಲಿ ಸಕಾರಾತ್ಮಕ ಭಾವನೆಯಿಂದ ಮುಂದುವರೆಯುವುದು ತುಂಬಾ ಒಳ್ಳೆಯದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ನೀವು ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡುವ ಸಣ್ಣ ವ್ಯಾಪಾರಿಯಾಗಿದ್ದರೆ ದಿನವು ಹೆಚ್ಚು ಅನುಕೂಲಕರವಾಗಿರುತ್ತದೆ. ನಿಸ್ಸಂದೇಹವಾಗಿ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭವನ್ನು ಗಳಿಸುವಿರಿ. ಆದಾಯ ಹೆಚ್ಚಳದಿಂದ ಮನಸ್ಸಿಗೆ ಸಂತೋಷವಾಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಉದ್ಯೋಗ ಹುಡುಕುವ ಪ್ರಯತ್ನವನ್ನು ಬಿಟ್ಟು ಹೊಸ ವ್ಯಾಪಾರ ಆರಂಭಿಸುವವರಿಗೆ ಶುಭ ದಿನ. ಕೆಲಸ ಯಾವುದೇ ಇರಲಿ ನಿಮ್ಮ ಸೋಮಾರಿತನವನ್ನು ಬಿಟ್ಟು ಮುಂದುವರೆದರೆ ಮಾತ್ರ ಜಯ ಗಳಿಸಲು ಸಾಧ್ಯವಾಗುತ್ತದೆ. ನಿಮ್ಮ ಕನಸನ್ನು ನನಸಾಗಿಸಲು ನಿರ್ದಿಷ್ಟ ಗುರಿ ಹೊಂದಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಇಂದು ಗಮನಹರಿಸುವುದು ತುಂಬಾ ಅಗತ್ಯವಾಗಿದೆ. ಆರೋಗ್ಯವನ್ನು ನಿರ್ಲಕ್ಷಿಸಿದರೆ ಇದು ಗಂಭೀರ ಸ್ಥಿತಿ ಎದುರಾಗಬಹುದು. ಇದರ ಹೊರತಾಗಿ ಹಣಕಾಸಿನ ವಿಷಯಗಳು ಇಂದು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.