ಈ ರಾಶಿಯಲ್ಲಿ ಹಂಸ ರಾಜ ಯೋಗ! ಕಣ್ಣು ಮಿಟುಕಿಸುವಷ್ಟರಲ್ಲಿ ಬದಲಾಗುವುದು ಅದೃಷ್ಟ

ಗುರು ಉದಯದೊಂದಿಗೆ ಹಂಸ ರಾಜಯೋಗ  ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಹಂಸ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಕರೆಯಲಾಗುತ್ತದೆ.

Written by - Ranjitha R K | Last Updated : Jan 30, 2023, 04:45 PM IST
  • ಗುರು ಗ್ರಹ ಒಂದು ವರ್ಷದ ಬಳಿಕ ತಮ್ಮ ರಾಶಿಯನ್ನು ಬದಲಾಯಿಸುತ್ತದೆ.
  • ಏಪ್ರಿಲ್ 1, 2023 ರ ಸಂಜೆ ಅಸ್ತಮಿಸಲಿರುವ ಗುರು
  • ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಗುರು ಉದಯ
ಈ ರಾಶಿಯಲ್ಲಿ ಹಂಸ ರಾಜ ಯೋಗ! ಕಣ್ಣು ಮಿಟುಕಿಸುವಷ್ಟರಲ್ಲಿ ಬದಲಾಗುವುದು ಅದೃಷ್ಟ  title=

ಬೆಂಗಳೂರು : ಗುರು ಗ್ರಹ ಒಂದು ವರ್ಷದ ಬಳಿಕ ತಮ್ಮ ರಾಶಿಯನ್ನು ಬದಲಾಯಿಸುತ್ತದೆ. 2023 ರ ಏಪ್ರಿಲ್ 22 ರಂದು, ಗುರು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಆದರೆ ಅದಕ್ಕೂ ಮೊದಲು ಏಪ್ರಿಲ್ 1, 2023 ರ ಸಂಜೆ ಗುರು ಅಸ್ತಮಿಸುತ್ತಾನೆ. ಗುರುವು ಮೀನರಾಶಿಯಲ್ಲಿಯೇ ಅಸ್ತಮಿಸುತ್ತಾನೆ. ಇದಾದ 28 ದಿನಗಳ ಬಳಿಕ ಮೇಷ ರಾಶಿಯಲ್ಲಿ ಮತ್ತೆ  ಉದಯಿಸುತ್ತಾನೆ. ಗುರು ಉದಯದೊಂದಿಗೆ ಹಂಸ ರಾಜಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಹಂಸ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಕರೆಯಲಾಗುತ್ತದೆ. ಗುರುವಿನ ಉದಯದಿಂದಾಗಿ ನಿರ್ಮಾಣವಾಗುವ ಈ ರಾಜಯೋಗ ಕೆಲವು ರಾಶಿಯವರಿಗೆ ಶುಭ ಫಲಿತಾಂಶವನ್ನೇ ನೀಡಲಿದೆ.  

ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ ಗುರು ಉದಯ : 
ಕರ್ಕ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಗುರು ಉದಯದಿಂದ ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಬಹಳ ಸಮಯದಿಂದ ಕಾಯುತ್ತಿದ್ದ ಉದ್ಯೋಗದ ಆಫರ್ ಬರಬಹುದು. ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. 

ಇದನ್ನೂ ಓದಿ : Holi 2023: ಹೋಳಿ ಹಬ್ಬದ ಬಳಿಕ ಈ ಮೂರು ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ, ಕಾರಣ ಇಲ್ಲಿದೆ

ಧನು ರಾಶಿ : ಹಂಸ ರಾಜಯೋಗವು ಧನು ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರುತ್ತದೆ. ಈ  ರಾಶಿಯವರಿಗೆ ಇದ್ದಕ್ಕಿದ್ದಂತೆ ಆರ್ಥಿಕ ಲಾಭವಾಗಬಹುದು.   ಯಾರಿಗಾದರೂ ಸಾಲ ನೀಡಿದ್ದರೆ,  ಆ ಹಣ ಹಿಂತಿರುಗಿ ಕೈ ಸೇರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆಸ್ತಿ-ಕಾರು ಖರೀದಿಸಬಹುದು. 

ಮೀನ ರಾಶಿ : ಗುರುಗ್ರಹದ ಉದಯವು ಮೀನ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಹಂಸ ರಾಜಯೋಗವು  ಈ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಮಾಡುವ ಕೆಲಸಗಳಿಗೆ ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ಹಣ ಪಡೆಯಲು ಹೊಸ ಮಾರ್ಗಗಳು  ಹುಟ್ಟಿಕೊಳ್ಳುತ್ತವೆ. ವ್ಯವಹಾರದಲ್ಲಿ ದೊಡ್ಡ ಆಫರ್ ಸಿಗಬಹುದು. 

ಇದನ್ನೂ ಓದಿ : ಈ ದಿನಾಂಕದಂದು ಜನಿಸಿದ ಮಕ್ಕಳು ಉನ್ನತ ಹುದ್ದಗೆ ಏರುವುದು ಗ್ಯಾರಂಟಿಯಂತೆ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News