ಇನ್ನು ಮುಂದೆ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ! ಹಿಂಬಾಲಿಸುವುದು ಯಶಸ್ಸು, ಧನ ಸಂಪತ್ತು

ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳು ಶನಿಯ ನಂತರ ಇಡೀ ಜಗತ್ತನ್ನು ಹೆದರಿಸುವಂತಹ ಗ್ರಹಗಳಾಗಿವೆ. ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. 

Written by - Ranjitha R K | Last Updated : Mar 13, 2023, 04:26 PM IST
  • ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 9 ಗ್ರಹಗಳನ್ನು ಉಲ್ಲೇಖಿಸಲಾಗಿದೆ.
  • ರಾಹು ಮತ್ತು ಕೇತು ಎರಡೂ ಛಾಯಾ ಗ್ರಹಗಳಾಗಿವೆ.
  • ರಾಹುವಿನ ಸಂಚಾರವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.
ಇನ್ನು ಮುಂದೆ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ! ಹಿಂಬಾಲಿಸುವುದು ಯಶಸ್ಸು, ಧನ ಸಂಪತ್ತು  title=

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 9 ಗ್ರಹಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ರಾಹು ಮತ್ತು ಕೇತು ಎರಡೂ ಛಾಯಾ  ಗ್ರಹಗಳಾಗಿವೆ. ಈ ಗ್ರಹಗಳು ಜ್ಯೋತಿಷ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿಲ್ಲವಾದರೂ, ಆದರೆ ಈ ಗ್ರಹಗಳು ಯಾವುದಾದರೊಂದು ಗ್ರಹದ  ಜೊತೆ ಸಂಯೋಜನೆಗೊಂಡಾಗ ವಿಶೇಷವಾಗಿ  ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಗ್ರಹ ಬಿಟ್ಟರೆ, ಎಲ್ಲರನ್ನೂ ಅತಿ ಹೆಚ್ಚು ಹೆದರಿಸುವ ಗ್ರಹಗಳಾಗಿವೆ. 

ರಾಹು ಸುಮಾರು ಒಂದೂವರೆ ವರ್ಷಗಳವರೆಗೆ ಒಂದೇ ರಾಶಿಯಲ್ಲಿ ಇರುತ್ತಾನೆ. ಪಂಚಾಂಗದ ಪ್ರಕಾರ,  ಅಕ್ಟೋಬರ್ 30, 2023 ರಂದು ಮಧ್ಯಾಹ್ನ 1.33 ಕ್ಕೆ ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. 

ಇದನ್ನೂ ಓದಿ : Mangal Gochar 2023: ಕೆಲವೇ ಗಂಟೆಗಳಲ್ಲಿ ಮಂಗಳ ಪಥ ಬದಲಾಯಿಸುತ್ತಿದ್ದಂತೆ ಈ ಜನರ ಜೀವನದಲ್ಲಿ ನಡೆಯುತ್ತೆ ಆಘಾತಕಾರಿ ಘಟನೆಗಳು!

ಮೇಷ ರಾಶಿ : 
ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುವುದರೊಂದಿಗೆ ಈ ರಾಶಿಯವರ ಒಳ್ಳೆಯ ಸಮಯ ಪ್ರಾರಂಭವಾಗಲಿದೆ. ರಾಹು ಸಂಚಾರದಿಂದ ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಮೇಷ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ವಿಶೇಷ ಲಾಭಗಳಾಗುವುದು. 

ಕರ್ಕಾಟಕ ರಾಶಿ :
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರ ಅದೃಷ್ಟ ಬದಲಾಯಿಸಲಿದೆ. ಆದರೆ, ಯಾವುದೇ ಕೆಲಸವನ್ನು ಮಾಡುವಾಗ ತಾಳ್ಮೆ ವಹಿಸಬೇಕಾಗುತ್ತದೆ. ರಾಹು ಸಂಕ್ರಮಣದ ಪ್ರಭಾವದಿಂದ ಕರ್ಕಾಟಕ ರಾಶಿಯವರು ತಮ್ಮ ವ್ಯವಹಾರದಲ್ಲಿ ಯಶಸ್ಸು ಪಡೆಯುತ್ತಾರೆ. ಮನೆ, ವಾಹನ ಖರೀದಿಗೆ ಅವಕಾಶವಿದೆ. 

ಇದನ್ನೂ ಓದಿ : Shani Gochar 2023 : ಶನಿಯು ರಾಹು ರಾಶಿಗೆ ಪ್ರವೇಶ, ಇದರಿಂದ ಈ ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!

ಮೀನ ರಾಶಿ :
ರಾಹುವಿನ ರಾಶಿಯ ಬದಲಾವಣೆಯಿಂದಾಗಿ, ಅವರಿಗೆ ಹಣ ಹರಿದು ಬರುವ ಸಾಧ್ಯತೆಗಳಿವೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಾಲ ಕೊಟ್ಟ ಹಣ ಹಿಂತಿರುಗಿ ಬರಬಹುದು. ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News