ಜೀವನದಲ್ಲಿ ನೀವು ಮಾಡುವ ಈ ತಪ್ಪುಗಳು ತಾಯಿ ಲಕ್ಷ್ಮಿಯ ಕೋಪಕ್ಕೆ ಕಾರಣ... ಎಚ್ಚರ!

Goddess Lakshmi Tips:  ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ಶ್ರದ್ಧಾ-ಭಕ್ತಿಯಿಂದ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ತೇಜಸ್ಸು, ಐಶ್ವರ್ಯ, ಸುಖ, ಸಮೃದ್ಧಿ ಹೆಚ್ಚಾಗುತ್ತದೆ.  (Spiritual News In Kannada)  

Written by - Nitin Tabib | Last Updated : Dec 10, 2023, 09:59 PM IST
  • ಸಾಮಾನ್ಯವಾಗಿ ಜನರು ಬಾಯಿಯಲ್ಲಿರುವ ಉಗುಳು ಅಥವಾ ಲಾಲಾರಸವನ್ನು ಬಳಸಿ ಎಣಿಕೆ ಮಾಡುತ್ತಾರೆ.
  • ಆದರೆ ಈ ರೀತಿ ಮಾಡುವುದು ತಾಯಿ ಲಕ್ಷ್ಮಿಗೆ ಅವಮಾನವೆಸಗಿದಂತಾಗುತ್ತದೆ.
  • ಆದ್ದರಿಂದ ಈ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ನೋಟುಗಳನ್ನು ಎಣಿಸಲು ಯಾವಾಗಲೂ ಪೌಡರ್ ಅಥವಾ ನೀರನ್ನು ಬಳಸಿ.
ಜೀವನದಲ್ಲಿ ನೀವು ಮಾಡುವ ಈ ತಪ್ಪುಗಳು ತಾಯಿ ಲಕ್ಷ್ಮಿಯ ಕೋಪಕ್ಕೆ ಕಾರಣ... ಎಚ್ಚರ! title=

ಬೆಂಗಳೂರು:  ದುಡ್ಡು ಯಾರಿಗೆ ಬೇಡ ಹೇಳಿ. ಪ್ರತಿಯೊಬ್ಬರೂ ತಮ್ಮ ವಾಲೆಟ್ ಮತ್ತು ಮನೆಯ ತಿಜೋರಿ ದುಡ್ಡಿನಿಂದ ತುಂಬಿರಬೇಕು ಎಂದು ಬಯಸುತ್ತಾರೆ. ಹಿಂದೂ ಧರ್ಮದಲ್ಲಿ, ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎಂದು ಕರೆಯಲಾಗುತ್ತದೆ. ಶ್ರದ್ಧಾ-ಭಕ್ತಿಯಿಂದ ತಾಯಿ ಲಕ್ಷ್ಮಿಯನ್ನು ಪೂಜಿಸುವುದರಿಂದ ತೇಜಸ್ಸು, ಐಶ್ವರ್ಯ, ಸುಖ, ಸಮೃದ್ಧಿ ಹೆಚ್ಚಾಗುತ್ತದೆ.  ಆದರೆ ಒಂದು ವೇಳೆ ತಾಯಿ ಲಕ್ಷ್ಮಿ ಮುನಿಸಿಕೊಂಡರೆ ರಾಜನಾದವನೂ ಕೂಡ ಬೀದಿಗೆ ಬರಲು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಸಂಪತ್ತಿನ ಅಧಿದೇವತೆಯಾಗಿರುವ ತಾಯಿ ಲಕುಮಿ ಯಾವಾಗಲು ಸ್ವಚ್ಚವಾದ ಸ್ಥಳದಲ್ಲಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತಾಯಿ ಲಕ್ಷ್ಮಿಯು ಕೊಳೆಯಿಂದ ಕೂಡಿರುವ  ಮನೆಯಿಂದ ಹೊರ ಹೋಗುತ್ತಾಳೆ ಮತ್ತು ನಂತರ ಮನೆಯಲ್ಲಿ ಬಡತನ ತಾಂಡವವಾಡುತ್ತದೆ. ನಾವು ನಮಗೆ ಅರಿವಿಲ್ಲದೆ ಕೆಲ ಕೆಲಸಗಳನ್ನು ಮಾಡುತ್ತೇವೆ ಮತ್ತು ಇದರಿಂದಾಗಿ ನಾವು ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಮತ್ತು ಬಿಕ್ಕಟ್ಟಿನಿಂದ ಹೊರಬರಲು ನಮಗೆ ಕಷ್ಟವಾಗುತ್ತದೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.(Spiritual News In Kannada)

1. ನೀವು ಯಾವುದೇ ಬಡವರಿಗೆ ಅಥವಾ ನಿರ್ಗತಿಕರಿಗೆ ಹಣವನ್ನು ನೀಡಿದರೆ, ಹಣ ನೀಡುವಾಗ ಹಣದ ಘನತೆ-ಗೌರವವನ್ನು ಕಾಪಾಡಿ.  ಒಂದು ವೇಳೆ ನೀವು ಅವರ ಮುಂದೆ ಹಣವನ್ನು ಎಸೆದರೆ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.

2. ಸಾಮಾನ್ಯವಾಗಿ ಜನರು ಬಾಯಿಯಲ್ಲಿರುವ ಉಗುಳು ಅಥವಾ ಲಾಲಾರಸವನ್ನು ಬಳಸಿ ಎಣಿಕೆ ಮಾಡುತ್ತಾರೆ. ಆದರೆ ಈ ರೀತಿ ಮಾಡುವುದು ತಾಯಿ ಲಕ್ಷ್ಮಿಗೆ ಅವಮಾನವೆಸಗಿದಂತಾಗುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ತಕ್ಷಣ ಬಿಟ್ಟುಬಿಡಿ. ನೋಟುಗಳನ್ನು ಎಣಿಸಲು ಯಾವಾಗಲೂ ಪೌಡರ್ ಅಥವಾ ನೀರನ್ನು ಬಳಸಿ.

3. ಲಕ್ಷ್ಮಿ ದೇವಿಯು ಹಣದಲ್ಲಿ ನೆಲೆಸಿರುವ ಕಾರಣ, ರಸ್ತೆಯಲ್ಲಿ ಎಲ್ಲೋ ಹಣ ಬಿದ್ದಿರುವುದನ್ನು ಕಂಡರೆ, ಅದನ್ನು ಎತ್ತಿಕೊಂಡು ಮೊದಲು ನಿಮ್ಮ ಹಣೆಯ ಮೇಲೆ ಇಟ್ಟು ನಮಸ್ಕರಿಸಿ.

4. ಹಾಸಿಗೆ ಅಥವಾ ದಿಂಬಿನ ಮೇಲೆ ಹಣವನ್ನು ಎಂದಿಗೂ ಇಡಬೇಡಿ. ಅವುಗಳನ್ನು ಸ್ವಚ್ಛವಾದ ಸ್ಥಳದಲ್ಲಿ ಅಥವಾ ಬೀರುವಿನಲ್ಲಿ ಇರಿಸಿ. ಲಕ್ಷ್ಮಿಯ ನಾಣ್ಯವನ್ನು ಅದರೊಂದಿಗೆ ಇಡುವುದು ಮತ್ತಷ್ಟು ಉತ್ತಮ. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-ಶತಮಾನದ ಬಳಿಕ ಗುರು-ಶುಕ್ರರಿಂದ ಗಜಲಕ್ಷ್ಮಿ ರಾಜಯೋಗ ರಚನೆ. ಹೊಸ ವರ್ಷದಲ್ಲಿ ಈ ಜನರಿಗೆ ಅಪಾರ ಧನಸಂಪತ್ತು ಪ್ರಾಪ್ತಿ!

5. ಆಹಾರ ಪದಾರ್ಥಗಳನ್ನು ಎಂದಿಗೂ ಹಣದೊಂದಿಗೆ ಇಡಬೇಡಿ. ಅದೇನೆಂದರೆ, ನೀವು ನಿಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಹಣವನ್ನು ಇಟ್ಟುಕೊಳ್ಳುತ್ತಿದ್ದರೆ, ಅದರಲ್ಲಿ ಆಹಾರ ಪದಾರ್ಥಗಳನ್ನು ಇಡಬೇಡಿ. ಇದರಿಂದ ಹಣಕ್ಕೆ ಅಪಮಾನ ಎಸಗಿದಂತಾಗುತ್ತದೆ. 

ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ಮಕರ ರಾಶಿಯಲ್ಲಿ ಸೂರ್ಯ ಮಂಗಳರ ಶುಭ ಸಂಯೋಜನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News