ಇಂದಿನಿಂದ ಈ ರಾಶಿಯವರ ಮೇಲಿರಲಿದೆ ಶನಿ ಮಹಾತ್ಮನ ಸಂಪೂರ್ಣ ಕೃಪಾ ದೃಷ್ಟಿ ! ಅನುಭವಿಸಿದ ಕಷ್ಟಗಳಿಂದ ಸಿಗುವುದು ಮುಕ್ತಿ

 ರಾಹುವಿನ ನಕ್ಷತ್ರಕ್ಕೆ ಶನಿಯ ಪ್ರವೇಶವಾಗಿದೆ. ಶನಿಯ ಈ ಬದಲಾವಣೆ ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು ರಾಶಿಯವರು  ಮಾತ್ರ ಈ ಬಾರಿ ಶನಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ.  

Written by - Ranjitha R K | Last Updated : Mar 15, 2023, 10:55 AM IST
  • ಇಂದು ಶನಿ ಮಹಾತ್ಮ ನಕ್ಷತ್ರ ಬದಲಾಯಿಸಿದ್ದಾನೆ.
  • ಮುಂಜಾನೆ 3.33 ಕ್ಕೆ ಶನಿಯು ಶತಭಿಷ ನಕ್ಷತ್ರಕ್ಕೆ ಕಾಲಿಟ್ಟಿದ್ದಾನೆ.
  • ಶನಿದೇವ ಕೆಲವು ರಾಶಿಯವರ ಮೇಲೆ ತನ್ನ ಕೃಪಾ ಕಟಾಕ್ಷ ಹೊಂದಿರುತ್ತಾನೆ.
ಇಂದಿನಿಂದ ಈ ರಾಶಿಯವರ ಮೇಲಿರಲಿದೆ ಶನಿ ಮಹಾತ್ಮನ ಸಂಪೂರ್ಣ ಕೃಪಾ ದೃಷ್ಟಿ ! ಅನುಭವಿಸಿದ ಕಷ್ಟಗಳಿಂದ ಸಿಗುವುದು ಮುಕ್ತಿ   title=

ಬೆಂಗಳೂರು : ಇಂದು ಅಂದರೆ ಮಾರ್ಚ್ 15 ರಂದು ಶನಿ ಮಹಾತ್ಮ ನಕ್ಷತ್ರ ಬದಲಾಯಿಸಿದ್ದಾನೆ. ಇಂದು ಮುಂಜಾನೆ 3.33 ಕ್ಕೆ ಸರಿಯಾಗಿ ಶನಿಯು ಶತಭಿಷ ನಕ್ಷತ್ರಕ್ಕೆ ಕಾಲಿಟ್ಟಿದ್ದಾನೆ. ಮುಂದಿನ ಏಳು ತಿಂಗಳವರೆಗೆ ಅಂದರೆ ಅಕ್ಟೋಬರ್ 15, 2023 ರವರೆಗೆ ಶನಿ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ನಂತರ ಅಕ್ಟೋಬರ್ 15, 2023  ಮುಂಜಾನೆ 4. 49 ಕ್ಕೆ ಶತಭಿಷ ನಕ್ಷತ್ರದಿಂದ ಧನಿಷ್ಟ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಅಂದರೆ ಮುಂದಿನ ಏಳು ತಿಂಗಳವರೆಗೆ ಅಂದರೆ ಎಲ್ಲಿಯವರೆಗೆ ಶನಿ ಶತಭಿಷ ನಕ್ಷತ್ರದಲ್ಲಿ ಇರುತ್ತಾನೋ ಅಲ್ಲಿಯವರೆಗೆ ಶನಿದೇವ ಕೆಲವು ರಾಶಿಯವರ ಮೇಲೆ ತನ್ನ ಕೃಪಾ ಕಟಾಕ್ಷ  ಹೊಂದಿರುತ್ತಾನೆ. ಇನ್ನು ಶತಭಿಷಾ ನಕ್ಷತ್ರದ ಅಧಿಪತಿ ರಾಹು. ರಾಹುವಿನ ನಕ್ಷತ್ರಕ್ಕೆ ಶನಿಯ ಪ್ರವೇಶವಾಗಿದೆ. ಶನಿಯ ಈ ಬದಲಾವಣೆ ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು ರಾಶಿಯವರು  ಮಾತ್ರ ಈ ಬಾರಿ ಶನಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ.  

ಶನಿಯ ಸಂಚಾರವು ಈ ರಾಶಿಯವರ ಅದೃಷ್ಟ ಬೆಳಗಲಿದೆ :  
ಮೇಷ ರಾಶಿ : ಶನಿಯ ನಕ್ಷತ್ರ ಬದಲಾವಣೆ ಮೇಷ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ಇಲ್ಲಿಯವರೆಗೆ ಅನುಭವಿಸುತ್ತಿದ್ದ ಕಷ್ಟಗಳಿಂದ ಮುಕ್ತಿ ಸಿಕ್ಕಿ, ಆರ್ಥಿಕ ಸ್ಥಿತಿ ಬಲವಾಗಲಿದೆ. ಇನ್ನು ಮುಂದೆ ಈ ರಾಶಿಯವರು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಜಯ ಗಳಿಸಲಿದ್ದಾರೆ.  ಈ ರಾಶಿಯವರ ಆದಾಯ ಹೆಚ್ಚಾಗಲಿದೆ. ಏನೇ ಕೆಲಸ ಮಾಡಿದರೂ ಅದೃಷ್ಟ ಜೊತೆಗೆ ಇರಲಿದೆ. 

ಇದನ್ನೂ ಓದಿ : ಶನಿ ಉದಯದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿ: ಇನ್ಮುಂದೆ ಈ ರಾಶಿಯವರು ಮುಟ್ಟಿದ್ದೆಲ್ಲಾ ಬಂಗಾರ!

ಮಿಥುನ ರಾಶಿ : ಶನಿಯ ನಕ್ಷತ್ರ ಬದಲಾವಣೆ ಮಿಥುನ ರಾಶಿಯವರ ಅದೃಷ್ಟವನ್ನು ಕೂಡಾ ಬದಲಾಯಿಸಲಿದೆ. ಈ ರಾಶಿಯವರು ಕಂಡ ದೊಡ್ಡ ಕನಸೊಂದು ಈ ಅವಧಿಯಲ್ಲಿ ನನಸಾಗುವುದು. ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದಾಯ ಹೆಚ್ಚಲಿದೆ.  ಜೀವನದ ಹಾದಿಯಲ್ಲಿ ಎದುರಾಗುವ ಕಠಿಣ ಸವಾಲುಗಳನ್ನು ಜಯಿಸುವುದು ಸಾಧ್ಯವ್ಚಾಗುತ್ತದೆ. 

ಸಿಂಹ ರಾಶಿ :  ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶದಿಂದ ಸಿಂಹ ರಾಶಿಯವರ  ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಈ ರಾಶಿಯವರು ಬಹಳ ದಿನಗಳಿಂದ ಕಾಯುತ್ತಿದ್ದ ಯಶಸ್ಸು ಈಗ ಸಿಗಲಿದೆ. ಉದ್ಯೋಗ  ಬದಲಾಯಿಸುವುದಾದರೆ ಇದು ಒಳ್ಳೆಯ ಸಮಯ. ವ್ಯಾಪಾರ ವೃದ್ದಿ ಮತ್ತು ಆಸ್ತಿ ಗಳಿಕೆಯಲ್ಲಿಯೂ ಲಾಭವಾಗುವುದು.  

ಇದನ್ನೂ ಓದಿ : Shukra Mangal Gochar 2023: ಈ 5 ರಾಶಿಗಳಿಗೆ 1 ತಿಂಗಳ ಕಾಲ ಅದೃಷ್ಟವೋ ಅದೃಷ್ಟ..!

ತುಲಾ ರಾಶಿ : ರಾಹುವಿನ ನಕ್ಷತ್ರ ಶತಭಿಷದಲ್ಲಿ ಶನಿಯ ಪ್ರವೇಶವು ತುಲಾ ರಾಶಿಯವರ ವೃತ್ತಿ ಜೀವನದಲ್ಲಿ ದೊಡ್ಡ ಪ್ರಗತಿಯನ್ನು ತರುತ್ತದೆ. ಹೊಸ ಕೆಲಸಕ್ಕೆ ಸೇರಲು ಸದಾವಕಾಶ. ಯಾಕೆಂದರೆ ಈ ಅವಧಿಯಲ್ಲಿ ಶನಿಯ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನೀವು ಸೋಲುವುದಿಲ್ಲ. ಈ ಸಮಯದಲ್ಲಿ ಈ ರಾಶಿಯವರಿಗೆ ಶುಭ ಫಲಿತಾಂಶಗಳೇ ಸಿಗಲಿದೆ. ದೊಡ್ಡ ಮಟ್ಟದ ಧನಲಾಭವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. 

ಧನು ರಾಶಿ : ಶನಿಯ ನಕ್ಷತ್ರ ಸಂಕ್ರಮಣವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು  ಸಿಗಲಿದೆ. ಬಡ್ತಿ, ಸಂಬಳ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ. ನೀವು ಬಯಸಿದ ಕೆಲಸ ಈ ಸಮಯದಲ್ಲಿ ಸಿಗಲಿದೆ. ವ್ಯಾಪಾರ ಮಾಡುವವರಿಗೂ ದೊಡ್ಡ ಮಟ್ಟದ ಲಾಭವಾಗುವುದು.  

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News