ಬೆಂಗಳೂರು : ಆಚಾರ್ಯ ಚಾಣಕ್ಯ ಅವರು ಅರ್ಥಶಾಸ್ತ್ರ ಸೇರಿದಂತೆ ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಆಚಾರ್ಯ ಚಾಣಕ್ಯರ ಅಮೂಲ್ಯ ಚಿಂತನೆಗಳು ಬಹಳ ಪ್ರಸಿದ್ಧವಾಗಿವೆ. ಆಚಾರ್ಯ ಚಾಣಕ್ಯ ಹೇಳಿದ ಅನೇಕ ವಿಷಯಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ. ಚಾಣಕ್ಯ ಅತ್ಯಂತ ಸರಳವಾಗಿ ಬದುಕುವ ಕಲೆಯ ಬಗ್ಗೆ ವಿವರವಾಗಿ ತಿಳಿಸಿ ಹೇಳಿದ್ದಾರೆ. ಯಾವುದನ್ನು ಅಳವಡಿಸಿಕೊಂಡರೆ ಜೀವನ ಸುಖಮಯವಾಗಿರುವುದು ಎನ್ನುವುದನ್ನು ಕೂಡಾ ಅವರು ತಮ್ಮ ನೀತಿಯಲ್ಲಿ ವಿವರಿಸಿದ್ದಾರೆ. ಆಚಾರ್ಯ ಚಾಣಕ್ಯರು ಪತಿ-ಪತ್ನಿಯರ ನಡುವಿನ ಸಂಬಂಧಗಳ ಬಗ್ಗೆ ವಿವರಿಸಿ ಹೇಳಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ, ಪತ್ನಿ ತನ್ನ ಪತಿಗೆ ಕೆಲವು ವಿಷಯಗಳನ್ನು ಹೇಳುವುದಿಲ್ಲ. ಜೀವನದುದ್ದಕ್ಕೂ ಆ ಸತ್ಯಗಳನ್ನು ಪತಿಯಿಂದ ಮುಚ್ಚಿಡುತ್ತಾಳೆಯಂತೆ.
ಪತಿಯಿಂದ ಮುಚ್ಚಿಡುವ ಆ ಸತ್ಯಗಳು ಯಾವುವು ? :
ರಹಸ್ಯ ಮೋಹದ ಬಗ್ಗೆ:
ಹೆಚ್ಚಿನ ಮಹಿಳೆಯರು ಮದುವೆಯ ಮೊದಲು ಅಥವಾ ನಂತರ ತಮ್ಮ ಜೀವನದಲ್ಲಿ ಕೆಲವು ರಹಸ್ಯ ಮೋಹವನ್ನು ಹೊಂದಿರುತ್ತಾರೆ. ಅಂತಹ ವ್ಯಕ್ತಿಯನ್ನು ಮಹಿಳೆಯರು ತಮ್ಮ ಮನಸ್ಸಿನಲ್ಲಿಯೇ ಬಹಳ ಇಷ್ಟಪಡುತ್ತಾರೆ. ಆದರೆ, ಈ ರಹಸ್ಯ ಮೋಹದ ಬಗ್ಗೆ ಬೇರೆ ಯಾರೊಂದಿಗೂ ಮಾತನಾಡುವುದಿಲ್ಲ. ತಮ್ಮ ಗಂಡನಿಗೂ ಈ ವಿಚಾರ ತಿಳಿಸುವುದಿಲ್ಲ.
ಇದನ್ನೂ ಓದಿ : ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ! ಬಂಗಾರವೇ ಬೆಳಗುವುದು ಇವರ ಬಾಳು
ನಿರ್ಧಾರ ಇಷ್ಟವಾಗದಿದ್ದರೂ ತಲೆದೂಗುವುದು :
ಸಂತೋಷ ಮತ್ತು ಒತ್ತಡ ರಹಿತ ಜೀವನ ನಡೆಸಲು ಮನೆಯ ಎಲ್ಲಾ ಸಣ್ಣ ಮತ್ತು ದೊಡ್ಡ ನಿರ್ಧಾರಗಳಲ್ಲಿ ಪತಿ-ಪತ್ನಿಯರ ಒಪ್ಪಿಗೆ ಅಗತ್ಯ. ಪತಿಯ ಎಲ್ಲಾ ನಿರ್ಧಾರಗಳನ್ನು ಪತ್ನಿ ಒಪ್ಪುವುದಿಲ್ಲ. ಹಾಗಂತ ಬಾಯಿ ಬಿಟ್ಟು ಪತಿಯ ಬಳಿ ಹೇಳುವುದೂ ಇಲ್ಲ. ಮನಸ್ಸಿಲ್ಲದಿದ್ದರೂ ಪತಿಯ ನಿರ್ಧಾರಗಳನ್ನು ಬೆಂಬಲಿಸುತ್ತಾಳೆ. ಮನೆಯಲ್ಲಿ ಯಾವುದೇ ರೀತಿಯ ತಕರಾರು ಆಗದಂತೆ ನೋಡಿಕೊಳ್ಳುವುದು ಮಾತ್ರ ಇದರ ಹಿಂದಿನ ಉದ್ದೇಶವಾಗಿರುತ್ತದೆ.
ಹಣಕಾಸಿನ ಉಳಿತಾಯ :
ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ಮನೆಯಲ್ಲಿ ಅಥವಾ ಪತಿಯ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದಾಗ ಪತ್ನಿ ಧನ ಲಕ್ಷ್ಮೀ ಯಾಗಿ ಬಿಡುತ್ತಾಳೆ. ಪತ್ನಿ ಯಾವುದೇ ಕಾರಣಕ್ಕೂ ತನ್ನ ಉಳಿತಾಯದ ನಿಖರವಾದ ಮೊತ್ತವನ್ನು ಪತಿಗೆ ತಿಳಿಸುವುದಿಲ್ಲ.
ತನ್ನ ಅನಾರೋಗ್ಯದ ವಿಚಾರ :
ಮಹಿಳೆಯರ ದೇಹವು ಪುರುಷರಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಕೆಲವು ರೀತಿಯ ಸಣ್ಣ ಅಥವಾ ದೊಡ್ಡ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೆಂಡತಿ ತನ್ನ ಅನಾರೋಗ್ಯದ ಬಗ್ಗೆ ಗಂಡನಿಗೆ ಹೇಳುವುದಿಲ್ಲ.
ಇದನ್ನೂ ಓದಿ : Shukra Gochar: ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶ- ಮೂರು ರಾಶಿಯವರಿಗೆ ರಾಜ ಯೋಗ
ರಹಸ್ಯಗಳನ್ನು ಮರೆಮಾಚುವುದು:
ಕುಟುಂಬದಲ್ಲಿ ಅನೇಕ ರೀತಿಯ ವಿಷಯಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ಗಂಭೀರವಾಗಿರುತ್ತವೆ ಮತ್ತು ಕೆಲವು ಅಗತ್ಯ ಎಂದೆನಿಸುವುದೇ ಇಲ್ಲ. ಈ ವಿಚಾರಗಳನ್ನು ಇತರರ ಮುಂದೆ ಮಾತನಾಡಬಾರದು ಎಂದು ಪತಿ ಪತ್ನಿಗೆ ಹೇಳಿರುತ್ತಾನೆ. ಆದರೆ ಪತ್ನಿ ತನಗೆ ಬಹಳ ಹತ್ತಿರವಾಗಿರುವ ಯಾರಿಗಾದರೂ ಈ ವಿಷಯವನ್ನು ಖಂಡಿತವಾಗಿಯೂ ತಿಳಿಸುತ್ತಾಳೆ. ಆದರೆ ತಾನು ಬೇರೊಬ್ಬರೊಂದಿಗೆ ವಿಷಯ ಹಂಚಿಕೊಂಡಿದ್ದೇನೆ ಎನ್ನುವುದನ್ನು ಪತಿಯಿಂದ ಮುಚ್ಚಿಡುತ್ತಾಳೆ.
( ಸೂಚನೆ : ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.