ನವದೆಹಲಿ: ಉತ್ಸವಗಳು ಮತ್ತು ಮಂಗಳಕರ ಸಂದರ್ಭಗಳು ದಾನವಿಲ್ಲದೆ ಅಪೂರ್ಣ. ಆದ್ದರಿಂದಲೇ ಪ್ರತಿ ವಿಶೇಷ ಸಂದರ್ಭದಲ್ಲೂ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲ ಸಿಗುತ್ತದೆ. ದಾನ ಮಾಡಿದ್ರೆ ದೇವ-ದೇವತೆಗಳು ಸಂತೋಷವಾಗಿರುತ್ತವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ದಾನದ ಫಲವು ಮುಂದಿನ ಜನ್ಮಗಳಿಗೆ ಹೋಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ ಎಂದು ಹೇಳಲಾಗಿದೆ.
ದಾನ ಮಾಡುವ ಕೆಲವು ನಿಯಮಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅನುಸರಿಸುವ ಮೂಲಕ ದಾನದ ಸಂಪೂರ್ಣ ಫಲವನ್ನು ಪಡೆಯಬಹುದು. ಇದರಲ್ಲಿ ದಾನಕ್ಕೆ ಸರಿಯಾದ ಸಮಯ, ಸರಿಯಾದ ಸಂದರ್ಭದ ಬಗ್ಗೆ ಹೇಳಲಾಗಿದೆ. ಅದೇ ರೀತಿ ಕೆಲವು ಜನರು ದಾನ ಮಾಡುವುದನ್ನು ಸಹ ನಿಷೇಧಿಸಲಾಗಿದೆ ಅಥವಾ ಕೆಲವು ಸಂದರ್ಭಗಳಲ್ಲಿ ದಾನವನ್ನು ನಿಷೇಧಿಸಲಾಗಿದೆ. ಗರುಡ ಪುರಾಣದಲ್ಲಿ ಹೇಳಿರುವ ದಾನ ನಿಯಮಗಳ ಬಗ್ಗೆ ತಿಳಿಯಿರಿ.
ದಾನದ ನಿಯಮಗಳು
ಗರುಡ ಪುರಾಣದ ಒಂದು ಶ್ಲೋಕದ ಮೂಲಕ ದಾನದ ಮಹತ್ವವನ್ನು ಹೇಳಲಾಗಿದೆ. ಇದರೊಂದಿಗೆ ಯಾವಾಗ, ಯಾರಿಗೆ ದೇಣಿಗೆ ನೀಡಬೇಕು ಮತ್ತು ಯಾವಾಗ ದಾನ ಮಾಡಬಾರದು ಎಂಬುದನ್ನೂ ತಿಳಿಸಲಾಗಿದೆ.
- ಆರ್ಥಿಕವಾಗಿ ತುಂಬಾ ದುರ್ಬಲವಾಗಿರುವ ವ್ಯಕ್ತಿ ಎಂದಿಗೂ ದಾನ ಮಾಡಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಬಡತನದ ಸ್ಥಿತಿಯಲ್ಲಿ ಮಾಡಿದ ದಾನ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು, ನೋವು ನೀಡಬಹುದು. ಮೊದಲು ನಿಮ್ಮನ್ನು ಆರ್ಥಿಕವಾಗಿ ಸಮರ್ಥರನ್ನಾಗಿಸಿ, ನಂತರ ದಾನ ಮಾಡುವುದು ಉತ್ತಮ.
ಇದನ್ನೂ ಓದಿ: ಎರಡು ಬಾರಿ ಈ ಪೌಡರ್ ನ ಫೇಸ್ ಪ್ಯಾಕ್ ಬಳಸಿದರೆ ಸಾಕು ಮಿರ ಮಿರ ಮಿಂಚುವುದು ತ್ವಚೆ
- ಪ್ರಚಾರಕ್ಕಾಗಿ ಎಂದಿಗೂ ದಾನ ಮಾಡಬೇಡಿ. ಅಂತಹ ದಾನಕ್ಕೆ ಯಾವುದೇ ಪುಣ್ಯವಿಲ್ಲ. ಈ ಕಾರಣಕ್ಕಾಗಿಯೇ ಧಾರ್ಮಿಕ ಗ್ರಂಥಗಳಲ್ಲಿ ರಹಸ್ಯ ದಾನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರಹಸ್ಯ ದಾನವು ಉತ್ತಮವಾಗಿದೆ. ಒಂದು ಕೈಯಿಂದ ಮಾಡಿದ ದಾನವು ಇನ್ನೊಂದು ಕೈಗೆ ಗೊತ್ತಾಗದಂತೆ ದಾನ ಮಾಡಬೇಕೆಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ಅಂದರೆ ದಾನದ ಬಗ್ಗೆ ಯಾರಿಗೂ ಹೇಳಬಾರದು.
- ಅದೇ ರೀತಿ ನಿಮ್ಮ ಆದಾಯದ ಒಂದು ನಿರ್ದಿಷ್ಟ ಭಾಗವನ್ನು ಮಾತ್ರ ದಾನ ಮಾಡಬೇಕು. ನಿಮ್ಮ ಮತ್ತು ನಿಮ್ಮ ಕುಟುಂಬದ ಅಗತ್ಯಗಳನ್ನು ನಿರ್ಲಕ್ಷಿಸಿ ಎಂದಿಗೂ ದಾನ ಮಾಡಬಾರದು.
- ಹಣ, ಬಟ್ಟೆ, ಧಾನ್ಯಗಳು, ಔಷಧಗಳು, ಶಿಕ್ಷಣ ಸಾಮಗ್ರಿಗಳು ಇತ್ಯಾದಿಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಆದರೆ ಉಪ್ಪು ಮತ್ತು ಹುಳಿ ಪದಾರ್ಥಗಳನ್ನು ಸಂಜೆ ದಾನ ಮಾಡಬಾರದು. ನಪುಂಸಕರು ಎಣ್ಣೆಯನ್ನು ದಾನ ಮಾಡಬಾರದು.
ಇದನ್ನೂ ಓದಿ: Rakshabandhan: ಚಂದ್ರನಿಗೆ ರಾಖಿ ಕಟ್ಟಿದ ಭೂಮಿ ತಾಯಿ- ವಿಶೇಷ ಫೋಟೋ ವೈರಲ್
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.