Diwali 2022: ದೀಪಾವಳಿ ನಂತರ ಬೆಳಗಲಿದೆ ಈ ರಾಶಿಯವರ ಅದೃಷ್ಟ, ಹರಿಯಲಿದೆ ಹಣದ ಹೊಳೆ

Diwali Astrology: ಈ ವರ್ಷ ದೀಪಾವಳಿಯನ್ನು ಅಕ್ಟೋಬರ್ 24, 2022 ರಂದು ಆಚರಿಸಲಾಗುತ್ತದೆ ಮತ್ತು ಇದರ ನಂತರ ಬುಧ ಗ್ರಹವು ಅಕ್ಟೋಬರ್ 26 ರಂದು ಸಾಗಲಿದೆ. ಈ ಸಮಯವು ಕೆಲವು ಜನರಿಗೆ ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದವನ್ನು ತರುತ್ತದೆ.

Written by - Yashaswini V | Last Updated : Sep 26, 2022, 01:13 PM IST
  • ದೀಪಾವಳಿಯ ಎರಡು ದಿನಗಳ ನಂತರ ಸಂಭವಿಸಲಿರುವ ಬುಧನ ಸಂಚಾರದಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ.
  • ದೀಪಾವಳಿಯ ನಂತರ ಸಂಭವಿಸಲಿರುವ ಬುಧನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಲಕ್ಷ್ಮಿದೇವಿ ವಿಶೇಷ ಕೃಪೆ ತೋರಲಿದ್ದಾಳೆ ಎಂದು ಹೇಳಲಾಗುತ್ತಿದೆ.
  • ದೀಪಾವಳಿಯ ನಂತರ ಯಾವ ರಾಶಿಯವರಿಗೆ ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದ ಸಿಗಲಿದೆ ತಿಳಿಯಿರಿ
Diwali 2022: ದೀಪಾವಳಿ ನಂತರ ಬೆಳಗಲಿದೆ ಈ ರಾಶಿಯವರ ಅದೃಷ್ಟ, ಹರಿಯಲಿದೆ ಹಣದ ಹೊಳೆ  title=
Diwali 2022 Horoscope

ದೀಪಾವಳಿ ಭವಿಷ್ಯ: ಇಂದಿನಿಂದ ನವರಾತ್ರಿ ಆರಂಭವಾಗಿದ್ದು ಅಕ್ಟೋಬರ್ 5 ರಂದು ದಸರಾ, ಅಕ್ಟೋಬರ್ 13 ರಂದು ಕರ್ವಾ ಚೌತ್, ಅಕ್ಟೋಬರ್ 23 ರಂದು  ಧಂತೇರಸ್‌ ಮತ್ತು ನಂತರ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ನಂತರ ಪ್ರಮುಖ ಗ್ರಹ ಸಂಚಾರ ನಡೆಯಲಿದೆ. ಅಕ್ಟೋಬರ್ 26ರಂದು ಗ್ರಹಗಳ ರಾಜಕುಮಾರನಾದ ಬುಧ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಬುಧನ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ಬೆಳಗಿಸಲಿದೆ ಎಂದು ಹೇಳಲಾಗುತ್ತಿದೆ. 

ದೀಪಾವಳಿಯ ಎರಡು ದಿನಗಳ ನಂತರ ಸಂಭವಿಸಲಿರುವ ಬುಧನ ಸಂಚಾರದಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬೆಳಗಲಿದೆ. ದೀಪಾವಳಿಯ ನಂತರ  ಸಂಭವಿಸಲಿರುವ ಬುಧನ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಲಕ್ಷ್ಮಿದೇವಿ ವಿಶೇಷ ಕೃಪೆ ತೋರಲಿದ್ದಾಳೆ  ಎಂದು ಹೇಳಲಾಗುತ್ತಿದೆ. 

ದೀಪಾವಳಿಯ ನಂತರ ಲಕ್ಷ್ಮಿ ದೇವಿಯ ಅಪಾರ ಆಶೀರ್ವಾದವನ್ನು ಪಡೆಯಲಿದ್ದಾರೆ ಈ ರಾಶಿಯವರು:-
ಮಿಥುನ ರಾಶಿ: ದೀಪಾವಳಿ
ಯ ನಂತರದ ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ದೀರ್ಘಾವಧಿಯ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ. ಲಕ್ಷ್ಮಿ ದೇವಿ ಈ ರಾಶಿಯವರ ಮೇಲೆ ಕೃಪೆ ತೋರಲಿದ್ದು ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. 

ಇದನ್ನೂ ಓದಿ- ನವರಾತ್ರಿಯ 9 ದಿನಗಳು ಈ ಬಣ್ಣದ ಬಟ್ಟೆಗಳನ್ನು ಧರಿಸಿ ದುರ್ಗಾಮಾತೆಯ ವಿಶೇಷ ಕೃಪೆಗೆ ಪಾತ್ರರಾಗಿ

ಕರ್ಕಾಟಕ ರಾಶಿ: ಬುಧ ರಾಶಿಯ ಬದಲಾವಣೆಯಿಂದ ಕರ್ಕ ರಾಶಿಯವರಿಗೆ ಅಪಾರ ಧನ ಲಾಭವಾಗಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉನ್ನತ ಹುದ್ದೆಗೇರುವ ಬಲವಾದ ಅವಕಾಶವನ್ನು ಪಡೆಯಲಿದ್ದಾರೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ.

ಸಿಂಹ ರಾಶಿ: ಬುಧ ಸಂಕ್ರಮವು ಸಿಂಹ ರಾಶಿಯವರಿಗೆ ಕೌಟುಂಬಿಕ ಸಂತೋಷವನ್ನು ಹೆಚ್ಚಿಸಲಿದೆ. ಸಂಬಂಧಗಳು ಉತ್ತಮವಾಗಿರುತ್ತವೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹಠಾತ್ ಧನಲಾಭ ಮನಸ್ಸಿಗೆ ಮುದ ನೀಡಲಿದೆ.

ಇದನ್ನೂ ಓದಿ- ದೀಪಾವಳಿ ಮುನ್ನಾ ದಿನ ಈ ರಾಶಿಯವರಿಗೆ ಲಭಿಸುವುದು ಕುಬೇರನ ಖಜಾನೆ.!

ಧನು ರಾಶಿ: ತುಲಾ ರಾಶಿಯಲ್ಲಿ ಬುಧ ಪ್ರವೇಶವು ಧನು ರಾಶಿಯವರಿಗೆ ಹಣದ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡುತ್ತದೆ. ತಡೆಹಿಡಿಯಲಾದ ಹಣ ಕೈ ಸೇರಲಿದೆ. ನಿಮ್ಮ ಇಷ್ಟು ದಿನದ ಸ್ಥಗಿತಗೊಂಡಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

ಮಕರ ರಾಶಿ: ಬುಧ ಸಂಕ್ರಮಣವು ಮಕರ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭಾರೀ ಅದೃಷ್ಟ ಎಂದು ಸಾಬೀತು ಪಡಿಸಲಿದೆ. ನೀವು ಹೊಸ ಉದ್ಯೋಗಕ್ಕಾಗಿ ಆಫರ್ ಪಡೆಯಬಹುದು.  ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಅದೃಷ್ಟದ ಸಮಯವಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News