ನಾಳೆ ಧನತ್ರಯೋದಶಿ, ಹಸ್ತಾ ನಕ್ಷತ್ರದ ಶುಭ ಸಂಯೋಜನೆ, ಈ 5 ರಾಶಿಗಳ ಜನರ ಮೇಲಿರಲಿದೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ!

Dhanteras 2023 Horoscope: ನಾಳೆ ಧನತ್ರಯೋದಶಿ, ಲಕ್ಷ್ಮಿ ದೇವಿ ಮತ್ತು ಧನ್ವಂತರಿ ದೇವನನ್ನು ವಿಶೇಷವಾಗಿ ಪೂಜಿಸುವ ದಿನ ಈ ದಿನದಂದು ಪ್ರೀತಿ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಹೋಜನೆ ನೆರವೇರುತ್ತಿದೆ, ಈ ದಿನ ಶುಕ್ರವಾರವೂ ಇರುವ ಕಾರಣ. ಈ ಶುಭ ಯೋಗಗಳ ಪ್ರಭಾವವು ಮೇಷ, ಕರ್ಕ ಸೇರಿದಂತೆ ಇತರ ಐದು ರಾಶಿಗಳ ಜನರಿಗೆ ಸಕರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ, ಈ ರಾಶಿಗಳ ಜನರ ಜೀವನೋಪಾಯದ ಸೌಕರ್ಯಗಳು ಹೆಚ್ಚಾಗಲಿವೆ. ಅಷ್ಟೇ ಅಲ್ಲ, ಶುಕ್ರವಾರ ಭೌತಿಕ ಸುಖಗಳ ಅಧಿಪತಿ ಶುಕ್ರ ಮತ್ತು ಲಕ್ಷ್ಮಿ ದೇವಿಗೆ ಸಮರ್ಪಿತವಾದ ವಾರ. ಹೀಗಾಗಿ ನಾಳೆ ಐದು ರಾಶಿಗಳ ಜನರಿಗೆ ತುಂಬಾ ವಿಶೇಷವಾಗಿರಲಿದೆ.  (Spiritual News In Kannada)  

Written by - Nitin Tabib | Last Updated : Nov 9, 2023, 11:02 PM IST
  • ನಾಳೆ ಚಂದ್ರನು ಬುಧನ ಅಧಿಪತ್ಯದ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ,
  • ಅಲ್ಲಿ ಈಗಾಗಲೇ ಶುಕ್ರ ಮತ್ತು ಕೇತು ವಿರಾಜಮಾನನಾಗಿದ್ದಾರೆ.
  • ಹೀಗಾಗಿ ಕನ್ಯಾ ರಾಶಿಯಲ್ಲಿ ತ್ರಿಗ್ರಹಿ ಯೋಗ ಕೂಡ ರೂಪುಗೊಳ್ಳುತ್ತಿದೆ,
ನಾಳೆ ಧನತ್ರಯೋದಶಿ, ಹಸ್ತಾ ನಕ್ಷತ್ರದ ಶುಭ ಸಂಯೋಜನೆ, ಈ 5 ರಾಶಿಗಳ ಜನರ ಮೇಲಿರಲಿದೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ! title=

ಬೆಂಗಳೂರು:  ಶುಕ್ರವಾರ 10 ನವೆಂಬರ್ 2023 ಧನತ್ರಯೋದಶಿಯ ದಿನ ಮೇಷ ರಾಶಿ, ಕರ್ಕ ರಾಶಿ, ಕನ್ಯಾ ರಾಶಿ, ಮಕರ ರಾಶಿ, ಹಾಗೂ ಮೀನ ಜಾತಕದವರ ಪಾಲಿಗೆ ಧನಯೋಗವನ್ನು ರೂಪಿಸಲಿದೆ ಮತ್ತು ಈ ರಾಶಿಗಳ ಜನರಿಗ ಅದು ತುಂಬಾ ಸಕಾರಾತ್ಮಕ ಸಾಬೀತಾಗಲಿದೆ. ನಾಳೆ ಧನತ್ರಯೋದಶಿಯ ದಿನ, ಧನ ಯೋಗ, ಪ್ರೀತಿ ಯೋಗ ಹಾಗೂ ಹಸ್ತಾ ನಕ್ಷತ್ರದ ಮಂಗಳಕರ ಸಂಯೋಜನೆ ನೆರವೇರಲಿದ್ದು, 5 ರಾಶಿಗಳ ಜನರ ಮೇಲೆ ಲಕ್ಷ್ಮಿ ದೇವಿ ಹಾಗೂ ಧನ ಕುಬೇರನ ಕೃಪಾಶೀರ್ವಾದ ಇರಲಿದೆ. 

ನಾಳೆ ಚಂದ್ರನು ಬುಧನ ಅಧಿಪತ್ಯದ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ, ಅಲ್ಲಿ ಈಗಾಗಲೇ ಶುಕ್ರ ಮತ್ತು ಕೇತು ವಿರಾಜಮಾನನಾಗಿದ್ದಾರೆ. ಹೀಗಾಗಿ ಕನ್ಯಾ ರಾಶಿಯಲ್ಲಿ ತ್ರಿಗ್ರಹಿ ಯೋಗ ಕೂಡ ರೂಪುಗೊಳ್ಳುತ್ತಿದೆ, ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರ ಇರುವುದರಿಂದ ಧನತ್ರಯೋದಶಿಯ ದಿನ ಧನಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ, ಇದು ಕಾರ್ತಿಕ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ ಮತ್ತು ಈ ದಿನದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ದೀಪಾವಳಿ ಹಬ್ಬವು ಈ ದಿನದಿಂದಲೇ ಆರಂಭಗೊಳ್ಳುತ್ತದೆ. ಈ ದಿನ, ಧನ ಯೋಗದ ಜೊತೆಗೆ ಪ್ರೀತಿ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಯೋಜನೆಯಿದೆ, ಇದರಿಂದಾಗಿ ನಾಳೆ ಬಹಳ ವಿಶೇಷವಾದ ದಿನವಾಗಿರಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಧನತ್ರಯೋದಶಿಯಲ್ಲಿ ಈ ಮಂಗಳಕರ ಯೋಗಗಳು ಐದು ರಾಶಿಗಳ ಮನೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ರಾಶಿಗಳ ಜನರಿಗೆ ಹಣ ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ ಮತ್ತು ಲಕ್ಷ್ಮಿ ದೇವಿಯು ಕೃಪಾಶೀರ್ವಾದ ಕೂಡ ಇವರ ಮೇಲೆ ಇರಲಿದೆ. ನಾಳೆ ನವೆಂಬರ್ 10 ರಂದು ಯಾವ ರಾಶಿಗಳಿಗೆ ಮಂಗಳಕರವಾಗಿದೆ ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ
ನವೆಂಬರ್ 10 ಮೇಷ ರಾಶಿಯವರಿಗೆ ಒಳ್ಳೆಯ ದಿನವಾಗಿರುತ್ತದೆ. ಮೇಷ ರಾಶಿಯ ಜನರು ನಾಳೆ ತಮ್ಮ ಸಂಗಾತಿಯೊಂದಿಗೆ ಧನತ್ರಯೋದಶಿ ಶಾಪಿಂಗ್ ಮಾಡಬಹುದು ಮತ್ತು ಯಾವುದೇ ಹಳೆಯ ಹೂಡಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು. ಜೀವನೋಪಾಯದ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳು ಉತ್ತಮ ಯಶಸ್ಸನ್ನು ನೀಡಲಿವೆ ಮತ್ತು ನಿಮ್ಮ ತಂದೆಯ ಸಹಕಾರದಿಂದ ನೀವು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ನಾಳೆ ನಿಮಗೆ ಕೆಲ ಸ್ಥಳಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಿದ್ದು, ಅವು ಭವಿಷ್ಯದಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡಲಿವೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ನಾಳೆ ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇದೆ, ಅಲ್ಲಿ ನೀವು ಕೆಲವು ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಬಹುದು. ನಾಳೆ ನೀವು ನಿಮ್ಮ ಐಷಾರಾಮಿ ಆಸೆಗಳನ್ನು ಪೂರೈಸಲು ಹಣವನ್ನು ಖರ್ಚು ಮಾಡಬಹುದು ಮತ್ತು ನಿಮ್ಮ ವಿರೋಧಿಗಳ ಮೇಲೆ ನೀವು ಗೆಲುವು ಸಾಧಿಸುವಿರಿ. ಆರೋಗ್ಯ ಸುಧಾರಿಸಲಿದೆ ಮತ್ತು ಸಹೋದರರೊಂದಿಗೆ ಪ್ರಮುಖ ಯೋಜನೆಗಳನ್ನು ಸಹ ರೂಪಿಸುವಿರಿ. ಈ ದಿನ ತಾಯಿ ಲಕ್ಷ್ಮಿಗೆ ಬತ್ತಾಸ, ಶಂಖ, ಕವಡೆ, ಕಮಲ, ಮಖಾನ ಇತ್ಯಾದಿಗಳನ್ನು ಅರ್ಪಿಸಿ ಲಕ್ಷ್ಮಿ ಚಾಲಿಸಾ ಪಠಿಸಿ

ಕರ್ಕ ರಾಶಿ
ನವೆಂಬರ್ 10 ಕರ್ಕ ರಾಶಿಯವರಿಗೆ ತುಂಬಾ ಶುಭ ದಿನವಾಗಿರುತ್ತದೆ ಈ ರಾಶಿಯ ಜನರ ಇಷ್ಟಾರ್ಥಗಳು ನಾಳೆ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನೆರವೇರುತ್ತವೆ ಮತ್ತು ನೆನೆಗುದಿಗೆ ಬಿದ್ದ  ಕಾರ್ಯಗಳು ಸಹ ಕ್ರಮೇಣ ಪೂರ್ಣಗೊಳ್ಳಲಿವೆ. ನಾಳೆ ನೀವು ಧನತ್ರಯೋದಶಿಯ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ಹೊಸ ವಾಹನ ಅಥವಾ ಹೊಸ ಆಭರಣಗಳನ್ನು ಖರೀದಿಸಬಹುದು. ಏಕೆಂದರೆ ಈ ಜನರು ನಾಳೆ ತಮ್ಮ ಅದೃಷ್ಟವನ್ನು ಕಠಿಣ ಪರಿಶ್ರಮದ ಮೂಲಕ ಸಾಧಿಸುತ್ತಾರೆ ಮತ್ತು ತಮ್ಮದೇ ಆದ ಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಾಳೆ ನೀವು ಪಿತ್ರಾರ್ಜಿತ ಆಸ್ತಿ ಪಡೆಯುವ ಸಾಧ್ಯತೆಯಿದೆ. ಧನತ್ರಯೋದಶಿಯಲ್ಲಿ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ಲಕ್ಷ್ಮಿ ದೇವಿಗೆ ಕೆಂಪು ಕುಂಕುಮ, ಕೆಂಪು ವಸ್ತುಗಳನ್ನು ಅರ್ಪಿಸಿ ಮತ್ತು ಲಕ್ಷ್ಮಿ ರಕ್ಷಾ ಕವಚವನ್ನು ಪಠಿಸಿ.

ಕನ್ಯಾ ರಾಶಿ
ನವೆಂಬರ್ 10 ಕನ್ಯಾ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಅದೃಷ್ಟ ನಾಳೆ ನಿಮ್ಮ ಪರವಾಗಿರುತ್ತದೆ ಮತ್ತು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಸಹ ನಿಮ್ಮ ಮೇಲಿರಲಿದೆ. ನೀವು ಸ್ನೇಹಿತರಿಂದ ಆರ್ಥಿಕ ಲಾಭವನ್ನು ಪಡೆಯಬಹುದು ಮತ್ತು ಕಾರ್ಯನಿರತರಾಗಿದ್ದರೂ ಸಹ, ನೀವು ಕುಟುಂಬ ಸದಸ್ಯರು ಮತ್ತು ಮಕ್ಕಳಿಗಾಗಿ ಸಮಯವನ್ನು ತೆಗೆಯುವಲ್ಲಿ ಯಶಸ್ವಿಯಾಗುವಿರಿ ಮತ್ತು ಅವರ ಅಗತ್ಯಗಳನ್ನು ಸಹ ನೋಡಿಕೊಳ್ಳುವಿರಿ. ವಿದ್ಯಾರ್ಥಿಗಳು ಅಧ್ಯಯನ ಮಾಡಲು ಉತ್ಸುಕರಾಗುತ್ತಾರೆ ಮತ್ತು ಶಿಕ್ಷಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಪ್ರೀತಿಯ ಜೀವನದಲ್ಲಿ ಇರುವವರಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗಲಿದೆ ಮತ್ತು ಸಂಬಂಧಗಳು ಗಟ್ಟಿಯಾಗುತ್ತವೆ. ಕನ್ಯಾ ರಾಶಿಯವರು ನಾಳೆ ಧನತ್ರಯೋದಶಿಯ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಕೆಲವು ಉಡುಗೊರೆಗಳನ್ನು ಖರೀದಿಸಬಹುದು. ನಾಳೆ ನಿಮಗೆ ದೀಪಾವಳಿಗೆ ಶಾಪಿಂಗ್ ಗಾಗಿ ಉತ್ತಮ ದಿನವಾಗಿದೆ. ಉದ್ಯೋಗದ ದಿಕ್ಕಿನಲ್ಲಿ ಮಾಡುವ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಪ್ರಗತಿಗೆ ಉತ್ತಮ ಅವಕಾಶಗಳಿವೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ, ಧನತ್ರಯೋದಶಿಯ ದಿನದಂದು ಮನೆಯ ಮುಖ್ಯ ಬಾಗಿಲಿಗೆ ಗುಲಾಲ್ ಸಿಂಪಡಿಸಿ ನಂತರ ದೇಸಿ ತುಪ್ಪದ ಎರಡು ಮುಖದ ದೀಪವನ್ನು ಬೆಳಗಿಸಿ.

ಮಕರ ರಾಶಿ
ನವೆಂಬರ್ 10 ಮಕರ ರಾಶಿಯವರಿಗೆ ಆಹ್ಲಾದಕರ ದಿನವಾಗಿರುತ್ತದೆ. ಅದೃಷ್ಟ ನಿಮ್ಮ ಪಾಲಿಗೆ ಇರುವುದರಿಂದ ನೀವು ಉತ್ಸಾಹದಿಂದ ಕೂಡಿರುವಿರಿ ಮತ್ತು ನಿಮ್ಮ ಸಮಸ್ಯೆಗಳು ಸಹ ಕಡಿಮೆಯಾಗಲಿವೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ನಾಳೆ ನೀವು ಪರಿಹಾರವನ್ನು ಪಡೆಯುತ್ತೀರಿ ಮತ್ತು ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೀರಿ. ನಾಳೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ನೀವು ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದ ಬೆಳವಣಿಗೆಯಿಂದಾಗಿ, ಅವರು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವನ್ನೂ ಪಡೆಯುತ್ತಾರೆ. ಕುಟುಂಬದಲ್ಲಿ ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಇದಕ್ಕಾಗಿ ನೀವು ಮನೆಯನ್ನು ಅಲಂಕರಿಸಲು ಖರ್ಚು ಮಾಡುವ ಸಾಧ್ಯತೆ ಇದೆ. ಒಂಟಿ ಜನರಿಗೆ ನಾಳೆ ಪ್ರೀತಿ ಸಿಗುವ ಸಾಧ್ಯತೆ ಇದೆ ಮತ್ತು ಅವರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಬಹುದು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ತಾಯಿಗೆ ನೀವು ಕೆಲವು ಉಡುಗೊರೆಗಳನ್ನು ಸಹ ಖರೀದಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಲೋಹದ ಪಾತ್ರೆಯಲ್ಲಿ ನೀರು, ಸಕ್ಕರೆ, ಹಾಲು ಮತ್ತು ತುಪ್ಪವನ್ನು ಹಾಕಿ ಅಶ್ವತ್ಥ ಮರಕ್ಕೆ ನೀರುಣಿಸಿ. ಇದನ್ನು 21 ಶುಕ್ರವಾರದವರೆಗೆ ಮಾಡಿ.

ಇದನ್ನೂ ಓದಿ -Diwali 2023 ಬಳಿಕ ಧನ-ಐಶ್ವರ್ಯದಾತ ಶುಕ್ರನಿಂದ ಮಾಲವ್ಯ ರಾಜಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಕುಬೇರ ನಿಧಿ ಪಾಪ್ತಿ ಯೋಗ!

ಮೀನ ರಾಶಿ
ನವೆಂಬರ್ 10 ಮೀನ ರಾಶಿಯವರಿಗೆ ಉತ್ತಮ ದಿನವಾಗಿದೆ. ಮೀನ ರಾಶಿಯ ಜನರು ನಾಳೆ ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅವರು ಮಾಡುವ ಯಾವುದೇ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾರೆ. ಸಾಮಾಜಿಕ ದಿಕ್ಕಿನಲ್ಲಿ ಕೆಲಸ ಮಾಡುವವರು ನಾಳೆ ದೀಪಾವಳಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ, ಅದು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ನೀವು ದೀಪಾವಳಿಯ ದೀಪಾಲಂಕಾರಕ್ಕಾಗಿ ಸಿದ್ಧತೆಗಳನ್ನು ಮತ್ತು ಕುಟುಂಬದ ಸದಸ್ಯರೊಂದಿಗೆ ಮಾಡುವ ಅಲಂಕಾರಗಳನ್ನು ಪಡೆಯಬಹುದು. ಧನತ್ರಯೋದಶಿಯ ಕಾರಣ ನಾಳೆ ವ್ಯಾಪಾರಸ್ಥರು ಭಾರಿ ಉತ್ಸಾಹದಲ್ಲಿರಲಿದ್ದಾರೆ ಮತ್ತು ಉತ್ತಮ ಲಾಭವನ್ನು ಪಡೆಯುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಈ ದೀಪಾವಳಿಯಂದು ಹಳೆಯ ಸರಕುಗಳು ಸಹ ಸಂಪೂರ್ಣವಾಗಿ ಮಾರಾಟಗೊಳ್ಳಲಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ನಾಳೆ ಧನತ್ರಯೋದಶಿ ಶಾಪಿಂಗ್ ಮಾಡಬಹುದು ಮತ್ತು ಅವರಿಗೆ ಕೆಲವು ಆಶ್ಚರ್ಯಕರ ಉಡುಗೊರೆಗಳನ್ನು ಸಹ ಖರೀದಿಸಬಹುದು. ಧನತ್ರಯೋದಶಿ ದಿನ, ನಿಮ್ಮ ಕೈಯಲ್ಲಿ ಒಂದು ಕಾಲು ಕೆಜಿ ಸಂಪೂರ್ಣ ಅಕ್ಕಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿಕೊಂಡು ಹಿಡಿದು ಮತ್ತು ನಂತರ ಐದು ಜಪಮಾಲೆಗಳನ್ನು 'ಓಂ ಶ್ರೀಂ ಶ್ರೀಯೇ ನಾಮ್ ಮಂತ್ರ' ಪಠಿಸಿ ಮತ್ತು ನೀವು ಹಣವನ್ನು ಇರಿಸುವ ಸ್ಥಳದಲ್ಲಿ ಆ ಮೂಟೆಯನ್ನು ಇರಿಸಿ

ಇದನ್ನೂ ಓದಿ-ಶೀಘ್ರದಲ್ಲಿಯೇ ಬುದ್ಧಿದಾತ ಬುಧ ವಕ್ರ ನಡೆ ಆರಂಭ, ಧನದ ಅಧಿದೇವತೆ ಕೃಪೆಯಿಂದ ಈ ರಾಶಿಗಳ ಜನರ ಜೀವನದಲ್ಲಿ ಚಿನ್ನದಂತಹ ಕಾಲ ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News