ಬೆಂಗಳೂರು : ಶುಭ ಕಾರ್ಯ ಅಥವಾ ಪೂಜೆಯ ವೇಳೆ ಮಣಿಕಟ್ಟಿನ ಮೇಲೆ ದಾರವನ್ನು ಕಟ್ಟುವ ಸಂಪ್ರದಾಯವಿದೆ. ಇದನ್ನು ಸಾಮಾನ್ಯವಾಗಿ ರಕ್ಷಾ ದಾರಾ ಎಂದು ಕರೆಯಲಾಗುತ್ತದೆ. ಈ ದಾರವನ್ನು ಸರಿಯಾದ ನೀತಿ ನಿಯಮದ ಪ್ರಕಾರ ಬಳಸಿದರೆ ಇದು ಆರ್ಥಿಕ ಸಮಸ್ಯೆಯನ್ನು ಬಗೆಹರಿಸುತ್ತದೆ. ಈ ದಾರ ನಿಮ್ಮ ಅದೃಷ್ಟವನ್ನು ಬದಲಾಯಿಸಲು ಹೇಗೆ ಸಹಾಯ ಮಾಡುತ್ತದೆ ನೋಡೋಣ.
ಈ ದಾರವನ್ನು ಖರೀದಿಸುವುದಕ್ಕೂ ಒಳ್ಳೆಯ ದಿನ :
ಯಾವುದೇ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಅಥವಾ ಶುಕ್ರವಾರದಂದು ಕೆಂಪು ಬಣ್ಣದ ದಾರವನ್ನು ಖರೀದಿಸಿ ತರಬೇಕು. ನಂತರ, ಈ ದಾರವನ್ನು ಐದು ಸಮಾನ ಭಾಗಗಳಾಗಿ ವಿಂಗಡಿಸಬೇಕು. ಹೀಗೆ ಮಾಡಿದ ನಂತರ ಮೊದಲ ಭಾಗವನ್ನು ತುಳಸಿಗೆ ಕಟ್ಟಬೇಕು. ಎರಡನೇ ಭಾಗವನ್ನು ಅಶ್ವತ್ಥ ಮರಕ್ಕೆ ಕಟ್ಟಬೇಕು.
ಇದನ್ನೂ ಓದಿ : 2025ರಲ್ಲಿ ಈ ಮೂರು ರಾಶಿಯವರ ಮೇಲಿರುವುದು ಮಹಾಲಕ್ಷ್ಮೀಯ ವಿಶೇಷ ಕೃಪೆ !ಸಂಪತ್ತು ಇಮ್ಮಡಿಯಾಗಿ ಸುಖ ಸಮೃದ್ದಿ ಒಲಿದು ಬರುವ ವರ್ಷವಾಗುವುದು !
ಮೂರನೇ ಭಾಗವನ್ನು ಮನೆಯ ಪೂರ್ವ ದಿಕ್ಕಿಗೆ ಕಟ್ಟಿ ನೇತು ಹಾಕಬೇಕು. ಮನೆಯ ದೇವರ ಕೋಣೆ ಅಥವಾ ಮಂಟಪದ ಮೇಲ್ಭಾಗಕ್ಕೆ ದಾರದ ನಾಲ್ಕನೇ ಭಾಗವನ್ನು ಕಟ್ಟಬೇಕು. ಮನೆಯ ಅಡುಗೆ ಮನೆಯ ಯಾವುದಾದರೊಂದು ಮೂಲೆಯಲ್ಲಿ ಐದನೇ ಮತ್ತು ಕೊನೆಯ ಭಾಗವನ್ನು ಕಟ್ಟಿಕೊಳ್ಳಿ.
ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಾರಂಭಿಸುತ್ತದೆ. ಸಾಲ ಕೊಟ್ಟು ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು.
ದಾರ ಕಟ್ಟುವಾಗ ಈ ತಪ್ಪುಗಳನ್ನು ಮಾಡಬೇಡಿ :
ಈ ದಾರವನ್ನು ಕೈಗೆ ಕಟ್ಟುವಾಗ ಕೈಯನ್ನು ಮುಷ್ಟಿಯಾಗಿ ಇಟ್ಟುಕೊಳ್ಳಬೇಕು. ಇನ್ನೊಂದು ಕೈಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕು.ಈ ದಾರವನ್ನು ಮೂರು ಅಥವಾ ಐದು ಬಾರಿ ತಿರುಗಿಸಿ ಕಟ್ಟಬೇಕು.
ಕೈಯ್ಯಲ್ಲಿ ಇರುವ ಹಳೆಯ ದಾರವನ್ನು ಅಮವಾಸ್ಯೆ ತಿಥಿಯಂದು ನಂತರ ಹುಣ್ಣಿಮೆಯ ದಿನ ಹೊಸ ದಾರವನ್ನು ತಂದು ಕಟ್ಟಬೇಕು.
( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ