Plant Vastu: ಸಾಕಷ್ಟು ಅದೃಷ್ಟ ಹಾಗೂ ಹಣ ಕರುಣಿಸುವ ಈ ಸಸ್ಯಗಳನ್ನು ಇಂದೇ ಮನೆಗೆ ತನ್ನಿ!

Plant Vastu: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಕೆಲ ಸಸ್ಯಗಳು ತುಂಬಾ ವಿಶೇಷವಾಗಿವೆ. ಈ ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇದರೊಂದಿಗೆ, ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಆ ಸಸ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 9, 2023, 10:19 PM IST
  • ಅದೃಷ್ಟದ ಸಸ್ಯವನ್ನು ಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.
  • ಈ ಗಿಡವನ್ನು ಮನೆಗೆ ತಂದರೆ ಸಂತೋಷ ಮತ್ತು ಸಮೃದ್ಧಿ ಜೊತೆಗೆ ಅದೃಷ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
  • ಇದರಿಂದ ವ್ಯಕ್ತಿ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಇದೆ ವೇಳೆ, ನೆನೆಗುದಿಗೆ ಬಿದ್ದ ಕೆಲಸವೂ ಸರಾಗವಾಗಿ ನಡೆಯಲು ಪ್ರಾರಂಭಿಸುತ್ತದೆ.
Plant Vastu: ಸಾಕಷ್ಟು ಅದೃಷ್ಟ ಹಾಗೂ ಹಣ ಕರುಣಿಸುವ ಈ ಸಸ್ಯಗಳನ್ನು ಇಂದೇ ಮನೆಗೆ ತನ್ನಿ! title=

Plant Vastu: ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಕೆಲ ಸಸ್ಯಗಳು ತುಂಬಾ ವಿಶೇಷವಾಗಿವೆ. ಈ ಅದೃಷ್ಟದ ಗಿಡಗಳನ್ನು ಮನೆಗೆ ತಂದರೆ ಜೀವನದಲ್ಲಿ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ ಎನ್ನಲಾಗುತ್ತದೆ. ಇದರೊಂದಿಗೆ, ಹಣಕಾಸಿನ ಸಮಸ್ಯೆಗಳಿಂದಲೂ ಕೂಡ ವ್ಯಕ್ತಿಗೆ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಆ ಸಸ್ಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಗೋಕರ್ಣ ಅಥವಾ ಶಂಖಪುಷ್ಪಿ ಗಿಡ

ವಾಸ್ತು ಶಾಸ್ತ್ರದ ಪ್ರಕಾರ, ಅಪರಾಜಿತ ಅಥವಾ ಗೋಕರ್ಣ ಅಥವಾ ಶಂಖಪುಷ್ಪಿ ಸಸ್ಯವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಹಚ್ಚುವುದರಿಂದ ವಿಷ್ಣು ಮತ್ತು ತಾಯಿ ಲಕ್ಷ್ಮಿ ಇಬ್ಬರ ಆಶೀರ್ವಾದ ಸಿಗುತ್ತದೆ. ವಾಸ್ತು ಪ್ರಕಾರ ಇದನ್ನು ಮನೆಗೆ ತಂದರೆ ಹಣದ ಕೊರತೆ ಇರುವುದಿಲ್ಲ. ಇದರೊಂದಿಗೆ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.

ಮನಿ ಪ್ಲಾಂಟ್

ವಾಸ್ತು ಪ್ರಕಾರ ಮನಿ ಪ್ಲಾಂಟ್ ಹೆಸರಿಗೆ ತಕ್ಕಂತೆ ಕೆಲಸ ಮಾಡುತ್ತದೆ. ಇದನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಸಸ್ಯ ಎಂದು ಹೇಳಲಾಗುತ್ತದೆ. ಹೀಗಾಗಿ ಮನಿ ಪ್ಲಾಂಟ್ ಖರೀದಿಸಿ ಮನೆಯಲ್ಲಿ ಇಡುವುದರಿಂದ ಪರಿಸರ ಪರಿಶುದ್ಧವಾಗುತ್ತದೆ. ಮತ್ತು ಧನಾಗಮನದ ಮಾರ್ಗಗಳು ತೆರೆದುಕೊಳ್ಳುತ್ತವೆ.

ತುಳಸಿ ಗಿಡ

ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ತಾಯಿ ಲಕ್ಷ್ಮಿಯ ಕೃಪೆ ಜೀವನದುದ್ದಕ್ಕೂ ಇರುತ್ತದೆ ಎನ್ನಲಾಗುತ್ತದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ಧಾರ್ಮಿಕ ನಂಬಿಕೆ.

ರಬ್ಬರ್ ಗಿಡ

ರಬ್ಬರ್ ಗಿಡವನ್ನು ಮನೆಯಲ್ಲಿ ನೆಟ್ಟಾಗ ಅದು ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ದಿನದಂದು ನೆಟ್ಟರೆ ಅದು ತುಂಬಾ ಮಂಗಳಕರವೆಂದು ಸಾಬೀತಾಗುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ ರಬ್ಬರ್ ಗಿಡವನ್ನು ನೆಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಜೆಡ್ ಪ್ಲಾಂಟ್ ಅಥವಾ ಲಕ್ಕಿ ಪ್ಲಾಂಟ್ ಅಥವಾ ಮನಿ ಟ್ರೀ

ವಾಸ್ತು ಪ್ರಕಾರ, ಜೆಡ್  ಸಸ್ಯವನ್ನು ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುಲಭವಾಗಿ ನೆಡಬಹುದು. ನೀವು ವ್ಯಾಪಾರವನ್ನು ಹೆಚ್ಚಿಸಲು ಬಯಸಿದರೆ, ಅದನ್ನು ಖರೀದಿಸಿ ಮನೆಗೆ ತನ್ನಿ ಮತ್ತು ಪೂರ್ವ ದಿಕ್ಕಿನಲ್ಲಿ ಇರಿಸಿ. ಶೀಘ್ರದಲ್ಲೇ ನಿಮ್ಮ ವ್ಯವಹಾರವು ಗಗನಮುಖಿಯಾಗುತ್ತದೆ.

ಇದನ್ನೂ ಓದಿ-ನಾಗರಹಾವಿಗೆ ಹಾವುಗಳ ರಾಜ ಎಂದು ಏಕೆ ಕರೆಯಲಾಗುತ್ತದೆ ಗೊತ್ತಾ?

ಫಾರ್ಚ್ಯೂನ್ ಪ್ಲಾಂಟ್ ಅಥವಾ ಅದೃಷ್ಟದ ಸಸ್ಯ

ಅದೃಷ್ಟದ ಸಸ್ಯವನ್ನು ಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.  ಈ ಗಿಡವನ್ನು ಮನೆಗೆ ತಂದರೆ ಸಂತೋಷ ಮತ್ತು ಸಮೃದ್ಧಿ ಜೊತೆಗೆ ಅದೃಷ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಜೋಳದ ಸಸ್ಯ ಎಂದೂ ಕರೆಯುತ್ತಾರೆ. ಇದರಿಂದ ವ್ಯಕ್ತಿ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಇದೆ ವೇಳೆ, ನೆನೆಗುದಿಗೆ ಬಿದ್ದ ಕೆಲಸವೂ ಸರಾಗವಾಗಿ ನಡೆಯಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ-ಈ ರಾಶಿಯ ಹುಡುಗರ ಮೇಲೆ ಫುಲ್ ಫಿದಾ ಆಗ್ತಾರೆ ಹುಡುಗಯರು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News