ದಿನಭವಿಷ್ಯ 11-07-2024: ಇಂದು ಈ ರಾಶಿಯವರು ಖರ್ಚಿನ ಬಗ್ಗೆ ಕಾಳಜಿವಹಿಸದಿದ್ದರೆ, ಭಾರೀ ನಷ್ಟ

Today Horoscope 11th July 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 11, 2024, 08:09 AM IST
  • ಸಿಂಹ ರಾಶಿಯವರಿಗೆ ಇಂದು ಸರ್ಕಾರೀ ಕೆಲಸಗಳಲ್ಲಿ ಬೆಂಬಲ ದೊರೆಯಲಿದೆ.
  • ತುಲಾ ರಾಶಿಯವರಿಗೆ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
  • ವೃಶ್ಚಿಕ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ದಿನಭವಿಷ್ಯ 11-07-2024:  ಇಂದು ಈ ರಾಶಿಯವರು ಖರ್ಚಿನ ಬಗ್ಗೆ ಕಾಳಜಿವಹಿಸದಿದ್ದರೆ, ಭಾರೀ ನಷ್ಟ  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ ಪಂಚಮಿ ತಿಥಿಯ ಈ ದಿನ ಗುರುವಾರದ ಈ ದಿನ ವರೀಯಾನ ಯೋಗ ಇರಲಿದ್ದು ಯಾವ ರಾಶಿಯವರಿಗೆ ಅದೃಷ್ಟವನ್ನು ತರಲಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ದಿನ ಕೌಟುಂಬಿಕ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಮಹಿಳೆಯರೊಂದಿಗಿನ ವ್ಯವಹಾರದ ಬಗ್ಗೆ ತುಂಬಾ ಜಾಗರೂಕರಾಗಿರಿ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಪ್ರತಿ ಕೆಲಸದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ಬದುಕು ಆನಂದದಾಯಕವಾಗಿರುತ್ತದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಹಣಕಾಸಿನ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಅಧಿಕ ಖರ್ಚುಗಳನ್ನು ತಪ್ಪಿಸುವುದರಿಂದ ಆರ್ಥಿಕ ಸ್ಥಿರತೆಯನ್ನು ಕಾಣಬಹುದು. ತಾಳ್ಮೆಯಿಂದ ಕೆಲಸ ಮಾಡಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನೀವು ಬೌದ್ಧಿಕ ಕೌಶಲ್ಯದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಪ್ರತಿಷ್ಠೆ ಹೆಚ್ಚಾಗಲಿದೆ.  ಸಂಬಂಧಗಳಲ್ಲಿ ನಿಕಟತೆ ಇರಲಿದ್ದು ಕೀರ್ತಿ ಸಂಪತ್ತು ಹೆಚ್ಚಾಗಲಿದೆ. 

ಇದನ್ನೂ ಓದಿ-  ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸರ್ಕಾರೀ ಕೆಲಸಗಳಲ್ಲಿ ಬೆಂಬಲ ದೊರೆಯಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರಗೊಳ್ಳಲಿದ್ದು ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನೀವು ಇತರರ ಬೆಂಬಲದಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವಿರಿ. ವ್ಯಾಪಾರದಲ್ಲಿ ಕೀರ್ತಿ, ಸಂಪತ್ತು ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಗ್ಯೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿಮ್ಮ ಚಿಂತನೆ ಹೆಚ್ಚಾಗಬಹುದು. ಯಾವುದೇ ಹೊಸ ಕೆಲಸಗಳನ್ನು ಮಾಡುವಾಗ ಹಿರಿಯರ ಆಶೀರ್ವಾದವನ್ನು ಪಡೆಯುವುದನ್ನು ಮರೆಯಬೇಡಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಿಮಗೆ ಇಷ್ಟವಿಲ್ಲದ ಯಾವುದಾದರೂ ವಿಷಯಗಳು ನಿಮ್ಮನ್ನು ಬಾಧಿಸಬಹುದು. ಆದಾಗ್ಯೂ, ವೈವಾಹಿಕ ಜೀವನದಲ್ಲಿ ಆಹ್ಲಾದಕರವಾಗಿರುತ್ತದೆ. 

ಇದನ್ನೂ ಓದಿ- Astro Tips: ಶುಕ್ರವಾರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರೂ ಕೂಡ ಇಂದು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಹಿತಕರ ಸುದ್ದಿಯನ್ನು ಕೇಳಬಹುದು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲು ಹೆಚ್ಚು ಶ್ರಮವಹಿಸಬೇಕಾಗಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಒಂದು ದೊರೆಯುವ ಸಾಧ್ಯತೆ ಇದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನಿಮ್ಮ ಕೌಟುಂಬಿಕ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಧನಲಾಭದಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಸಂಬಂಧದಲ್ಲಿ ಮೂಡಿದ್ದ ಬಿರುಕು ಸುಧಾರಿಸಲಿದೆ. ಇದರಿಂದ ಮನಸ್ಸಿಗೆ ಸಂತೋಷವಾಗಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ವ್ಯಾಪಾರ ವ್ಯವಹಾರದಲ್ಲಿ ಶುಭ ಫಲಗಳನ್ನು ಅನುಭವಿಸುವಿರಿ. ಆದರೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಗಳು ಹೆಚ್ಚಾಗಲಿವೆ. ಆರೋಗ್ಯದ ವಿಚಾರದಲ್ಲೂ ದಿನ ಅಷ್ಟು ಉತ್ತಮವಾಗಿಲ್ಲ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News