ಶಮಿ ಜೊತೆ ಮತ್ತೆ ಒಂದಾಗಲು ಹೊರಟ ಮಾಜಿ ಪತ್ನಿ..!? ಇನ್ಸ್ಟಾಗ್ರಾಮ್ ಪೋಸ್ಟ್ ಬಿಚ್ಚಿಡ್ತು ಶಾಕಿಂಗ್ ಸುಳಿವು!!

Mohammed Shami met his daughter: ಟೀಂ ಇಂಡಿಯಾ ಸ್ಟಾರ್‌ ಆಟಗಾರ ಮೊಹಮ್ಮದ್‌ ಶಮಿಗೆ ಇಡೀ ಜಗತ್ತು ಸೆಲ್ಯೂಟ್ ಮಾಡುತ್ತದೆ.. ಆದರೆ ಅವರ ವಿರುದ್ಧ ಹಗಲು ರಾತ್ರಿ ವಿಷವನ್ನು ಉಗುಳುವವರು ಇದ್ದಾರೆ.. ಆ ಪಟ್ಟಿಯಲ್ಲಿ ಅವರ ಪತ್ನಿ ಹಸೀನ್ ಜಹಾನ್ ಸಹ ಇದ್ದಾರೆ.. 

1 /7

ಕ್ರಿಕೆಟ್‌ ಜತ್ತಿನಲ್ಲಿ ದೊಡ್ಡ ಹೆಸರು ಮಾಡಿದ ಮೊಹಮ್ಮದ್ ಶಮಿ ತಮ್ಮ ಅದ್ಭುತ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದಾರೆ.. ಆದರೆ ಅವರ ಜೀವನವೂ ಸಾಕಷ್ಟು ಸವಾಲುಗಳಿಂದಲೇ ಕೂಡಿತ್ತು ಎಂದರೇ ತಪ್ಪಾಗುವುದಿಲ್ಲ..    

2 /7

ಶಮಿ ತನ್ನ ಪತ್ನಿ ಹಸೀನ್ ಜಹಾನ್‌ನಿಂದ ದೂರವಾದ ನಂತರ ಸಾಕಷ್ಟು ಟೀಕೆ, ಆರೋಪಗಳನ್ನು ಎದುರಿಸಬೇಕಾಯಿತು.. ಆ ವೇಳೆ ಈ ಆಟಗಾರ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು ಎನ್ನುವ ಮಾಹಿತಿಯೊಂದು ಇತ್ತೀಚೆಗೆ ಹೊರಬಿದ್ದಿತ್ತು..   

3 /7

ಇನ್ನು ಇತ್ತೀಚೆಗೆ ಶಮಿ ಪತ್ನಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ.. ಅದನ್ನು ನೋಡಿದವರಿಗೆ ಸಾಕಷ್ಟು ಗೊಂದಲಗಳು ಕಾಡುತ್ತಿವೆ.. ಅಲ್ಲದೇ ಹಸೀನ್ ಜಹಾನ್‌ ಶಮಿ ಜೊತೆ ರಾಜಿ ಮಾಡಿಕೊಳ್ಳಲು ಪ್ರಯ್ತನಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಹಾಗಾದ್ರೆ ಏನು ಆ ಪೋಸ್ಟ್‌ನ ಅಸಲಿಯತ್ತು ಎನ್ನುವುದನ್ನು ಇಲ್ಲಿ ತಿಳಿಯೋಣ.  

4 /7

ಆಗಸ್ಟ್ 1ರಂದು ಹಸೀನ್ ಜಹಾನ್‌ ಅವರು ಇನ್ಸ್ಟಾದಲ್ಲಿ ಪೋಸ್ಟ್‌ ನಲ್ಲಿ "ಮಗು ಇಂದು ತನ್ನ ತಂದೆಯನ್ನು ಭೇಟಿ ಮಾಡಲು ಹೋಗಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ.. ಅಲ್ಲಾಹನು ನನ್ನ ಮಗಳನ್ನು ಪ್ರತಿ ಶತ್ರು ಮತ್ತು ದುಷ್ಟ ಕಣ್ಣಿನಿಂದ ರಕ್ಷಿಸಲಿ' ಎಂದು ಬರೆದುಕೊಂಡಿದ್ದಾರೆ..   

5 /7

ಅದಕ್ಕೆ ಕ್ಯಾಪ್ಷನ್‌ ಕೂಡಾ ನೀಡಿದ್ದು.. ಅದರಲ್ಲಿ 'ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ ಆದರೆ ದೇವರ ಮೇಲಿನ ನಂಬಿಕೆಯನ್ನು ಬಿಟ್ಟಿಲ್ಲ.. ಇವತ್ತು ತಂದೆ ಮಗಳು ಭೇಟಿಯಾಗಿದ್ದಾರೆ, ಶಮಿ ಕೂಡ ಸುಧಾರಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ, ಹಸೀಬ್ ಶಾಮ ಮತ್ತು ಉಮೇಶ್, ನಿಮ್ಮ ಹಣೆಬರಹ ಏನಾಗುತ್ತೋ ಗೊತ್ತಿಲ್ಲ, ನಿಮ್ಮ ದುರಾಸೆಯನ್ನು ಈಡೇರಿಸಲು ನನ್ನನ್ನು ತಪ್ಪು ದಾರಿಗೆ ತಳ್ಳಿದ್ದೀರಿ, ಎಲ್ಲರಿಗೂ ಲೆಕ್ಕ ಸಿಗುತ್ತದೆ, ಇನ್ಶಾ ಅಲ್ಲಾಹ್" ಎಂದು ಬರೆದುಕೊಂಡಿದ್ದಾರೆ..   

6 /7

ಪ್ರಸ್ತುತ, ಹಸೀನ್ ಜಹಾನ್ ಅವರ ಈ ಪೋಸ್ಟ್ ಅನ್ನು ನೋಡಿದ ನಂತರ ಶಮಿ ಅವರ ಅಭಿಮಾನಿಗಳು ಸಂತೋಷಗೊಂಡಿದ್ದಾರೆ ಏಕೆಂದರೆ ಅವರ ಪ್ರೀತಿಯ ಕ್ರಿಕೆಟಿಗ ಮತ್ತು ಅವರ ಮಗಳು ಒಂದಾಗುತ್ತಾರೆ ಎಂದು.. ಸದ್ಯಕ್ಕೆ ಈ ಬಗ್ಗೆ ಶಮಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಜನ ತಂದೆ ಮಗಳ ನೆಮ್ಮದಿಗಾಗಿ ಪ್ರಾರ್ಥಿಸಿದ್ದಾರೆ.  

7 /7

ಸದ್ಯ ಶಮಿ ಹಾಗೂ ಅವರ ಪತ್ನಿಯ ಮಧ್ಯೆ ಏನೇ ನಡೆದಿದ್ದರೂ ಅವರಿಬ್ಬರೂ ಒಬ್ಬರಿಗೊಬ್ಬರು ಹುಚ್ಚರಂತೆ ಪ್ರೀತಿಸಿದ ಸಮಯವೊಂದಿತ್ತು.. ಶಮಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು 2014ರಲ್ಲಿ ಹಸೀನ್‌ನನ್ನು ಪತ್ನಿಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ.