Astro Tips: ಈ ದಿನಾಂಕದಲ್ಲಿ ಜನಿಸಿದವರು ರಾಜರಂತೆ ಬದುಕುತ್ತಾರೆ, ಅಪಾರ ಸುಖ-ಸಂಪತ್ತು ಗಳಿಸುತ್ತಾರೆ!

Numerology: 12 ತಿಂಗಳುಗಳಲ್ಲಿ ದಿನಾಂಕ 1, 10, 19, 28ರಂದು ಜನಿಸಿದವರ ರಾಡಿಕ್ಸ್​ ಸಂಖ್ಯೆ 1 ಆಗಿರುತ್ತದೆ. ಈ ದಿನಾಂಕದಂದು ಜನಿಸಿದವರು ಪ್ರಜ್ಞೆ, ನಾಯಕತ್ವ ಕೌಶಲ್ಯ & ಸಾಧಿಸುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಯಾವಾಗಲೂ ವ್ಯಾಪಾರ-ಉದ್ಯಮಗಳಲ್ಲಿ ಯಶಸ್ಸನ್ನು ಹೊಂದಿರುತ್ತಾರೆ. 

Written by - Puttaraj K Alur | Last Updated : Sep 9, 2024, 02:53 PM IST
  • ಸಂಖ್ಯಾಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಆತನ ವ್ಯಕ್ತಿತ್ವ ಮತ್ತು ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುತ್ತದೆ
  • ರಾಡಿಕ್ಸ್‌ ಸಂಖ್ಯೆ 1ರಲ್ಲಿ ಜನಿಸಿದ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿಯಾಗುತ್ತಾರೆ & ಅಪಾರ ಸುಖ-ಸಂಪತ್ತು ಗಳಿಸುತ್ತಾರೆ
  • ಯಾವುದೇ ಸಮಸ್ಯೆಗಳು ಎದುರಾದರೆ ಯಾರಿಗೂ ಹಾನಿಯಾಗದಂತೆ ಈ ಜನರು ಪರಿಹರಿಸುತ್ತಾರೆ
Astro Tips: ಈ ದಿನಾಂಕದಲ್ಲಿ ಜನಿಸಿದವರು ರಾಜರಂತೆ ಬದುಕುತ್ತಾರೆ, ಅಪಾರ ಸುಖ-ಸಂಪತ್ತು ಗಳಿಸುತ್ತಾರೆ! title=
ಸಂಖ್ಯಾಶಾಸ್ತ್ರ

Numerology Astro Tips: ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಆತನ ವ್ಯಕ್ತಿತ್ವ ಮತ್ತು ಭವಿಷ್ಯ ಹೇಗಿರುತ್ತದೆ ಅನ್ನೋದನ್ನು ತಿಳಿಸುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಪ್ರಮುಖ ಅಂಶಗಳ ಬಗ್ಗೆಯೂ ಮುನ್ಸೂಚನೆ ನೀಡುತ್ತದೆ ಎಂದು ನಂಬಲಾಗಿದೆ. ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ.

ಯಾವುದೇ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕವೆಂದು ಕರೆಯಲಾಗುತ್ತದೆ. ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಸಹ ಗ್ರಹಗಳೊಂದಿಗೆ ನೇರ ಸಂಬಂಧ ಹೊಂದಿರುತ್ತವೆ. ಸಂಖ್ಯಾಶಾಸ್ತ್ರದಲ್ಲಿ 1 ರಿಂದ 9ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳೆಂದು ಹೇಳಲಾಗುತ್ತದೆ. ಈ 9 ರಾಡಿಕ್ಸ್ ಸಂಖ್ಯೆಗಳು ಸಹ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ನಿರ್ದಿಷ್ಟ ದಿನಾಂಕದಂದು ಜನಿಸಿದ ಜನರು ನಿಜ ಜೀವನದಲ್ಲಿ ರಾಜರಾಗಿರುತ್ತಾರೆಂದು ಹೇಳಲಾಗುತ್ತದೆ. ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ರಾಜರಂತೆ ಬದುಕುತ್ತಾರೆ & ಅಪಾರ ಸುಖ-ಸಂಪತ್ತು ಗಳಿಸುತ್ತಾರೆ.

ಇದನ್ನೂ ಓದಿ: ಈ 3 ಗಣೇಶ ದೇವಾಲಯಗಳಿವೆ ಭೇಟಿ ನೀಡಿದರೆ 100% ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..!

ರಾಡಿಕ್ಸ್‌ ಸಂಖ್ಯೆ 1

  • 12 ತಿಂಗಳುಗಳಲ್ಲಿ ದಿನಾಂಕ 1, 10, 19, 28ರಂದು ಜನಿಸಿದವರ ರಾಡಿಕ್ಸ್​ ಸಂಖ್ಯೆ 1 ಆಗಿರುತ್ತದೆ. ಈ ದಿನಾಂಕದಂದು ಜನಿಸಿದವರು ಪ್ರಜ್ಞೆ, ನಾಯಕತ್ವ ಕೌಶಲ್ಯ ಮತ್ತು ಸಾಧಿಸುವ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
  • ಇವರು ಯಾವಾಗಲೂ ವ್ಯಾಪಾರ-ಉದ್ಯಮಗಳಲ್ಲಿ ಯಶಸ್ಸನ್ನು ಹೊಂದಿರುತ್ತಾರೆ. ಸಂಖ್ಯೆ 1ರಡಿ ಜನಿಸಿದ ಜನರು ಯಾವುದೇ ವಿಷಯ ಪ್ರಾರಂಭಿಸಲು ಮತ್ತು ಮುಗಿಸಲು ಬಲವಾದ ಇಚ್ಛೆ ಹೊಂದಿರುತ್ತಾರೆ. ಇವರು ಅಂದುಕೊಂಡಿದ್ದನ್ನು ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾರೆ.
  • ಯಾವುದೇ ಸಮಸ್ಯೆಗಳು ಎದುರಾದರೆ ಯಾರಿಗೂ ಹಾನಿಯಾಗದಂತೆ ಇವರು ಪರಿಹರಿಸುತ್ತಾರೆ. ವ್ಯಾಪಾರ, ನಿರ್ವಹಣೆ, ರಾಜಕೀಯ, ಸ್ವಯಂ ಉದ್ಯೋಗ ಸೇರಿ ಎಲ್ಲದರಲ್ಲೂ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ. ತಮ್ಮ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡುತ್ತಾರೆ. ಇದಲ್ಲದೆ ತಮ್ಮ ಗುರಿಗಳನ್ನು ಅನುಸರಿಸಲು ಪ್ರೋತ್ಸಾಹಿಸುವ ಸರಿಯಾದ ಪಾಲುದಾರನನ್ನು ಜೀವನದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.
  • ಈ ದಿನಾಂಕದಂದು ಜನಿಸಿದವರು ಶಕ್ತಿಯುತ ಮತ್ತು ಬಲಶಾಲಿಯಾಗಿರುತ್ತಾರೆ. ಕೆಲವೊಮ್ಮೆ ಸ್ವಾರ್ಥಿಗಳಾಗಿರಬಹುದು, ಇದರಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ.
  • ಈ ದಿನಾಂಕದಂದು ಜನಿಸಿದ ಜನರು ಸಾಧನೆ ಮಾಡಲು ಹೆಚ್ಚಿನ ಅವಕಾಶ ಹೊಂದಿರುತ್ತಾರೆ. ಕೆಲವೊಮ್ಮೆ ತುಂಬಾ ಕಷ್ಟಕರವಾದ ಜೀವನ ನಡೆಸುತ್ತಾರೆ.
  • ತಮ್ಮ ಶ್ರಮ ಮತ್ತು ಬುದ್ಧಿವಂತಿಕೆ ಆಧಾರದ ಮೇಲೆ ಅವರು ಅಪಾರ ಸಂಪತ್ತು ಮತ್ತು ಖ್ಯಾತಿ ಗಳಿಸುತ್ತಾರೆ.
  • ರಾಡಿಕ್ಸ್ 1ರ ಆಡಳಿತ ಗ್ರಹ ಸೂರ್ಯ. ಈ ಗ್ರಹವು ಜ್ಞಾನ, ಬುದ್ಧಿವಂತಿಕೆ ಮತ್ತು ದೂರದೃಷ್ಟಿ ನಿಯಂತ್ರಿಸುತ್ತದೆ. ಇದಕ್ಕಾಗಿಯೇ ಸಂಖ್ಯೆ 1 ಹೊಂದಿರುವ ಜನರು ಬುದ್ಧಿವಂತರಾಗಿರುತ್ತಾರೆ. ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಮತ್ತು ಹೊಸ ಆಲೋಚನೆಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹೀಗಾಗಿ ಇವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಲಾಗಿದೆ. 
  • ರಾಡಿಕ್ಸ್‌ ಸಂಖ್ಯೆ 1ರಲ್ಲಿ ಜನಿಸಿದವರು ಅಪಾರ ಸಂಪತ್ತು ಗಳಿಸುತ್ತಾರೆ. ಸದಾ ಖುಷಿಯಾಗಿರುವ ಇವರು ಐಷಾರಾಮಿ ಜೀವನ ನಡೆಸುತ್ತಾರೆ. ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇವರಿಗೆ ಎದುರಾಗುವುದಲ್ಲ. 

ಇದನ್ನೂ ಓದಿ: ಶುಕ್ರದೇವನ ಅತ್ಯಂತ ನೆಚ್ಚಿನ ರಾಶಿಗಳಿವು: ಇವರಿಗೆ ಸದಾ ಇರುವುದು ಶುಕ್ರದೆಸೆ! ಸುಖದ ಸುಪತ್ತಿಗೆ, ರಾಜರಂತ ಜೀವನವನ್ನೇ ಆನಂದಿಸುವಂತೆ ಮಾಡುವನು ಅಧಿಪತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News