ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗಬಾರದೆಂದರೆ ಬರೀ ಇದೊಂದು ಕೆಲಸ ಮಾಡಿ...!

Money Astro: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿರುವ ದುಡ್ಡು ಯಾವಾಗಲೂ ಖಾಲಿ ಆಗಬಾರದೆಂದರೆ ಏನು ಮಾಡಬೇಕು?

Written by - Yashaswini V | Last Updated : Dec 10, 2024, 09:11 AM IST
  • ದುಡಿದ ದುಡ್ಡನ್ನೆಲ್ಲಾ ಉಳಿಸುವಂತಿದ್ದರೆ ಹೇಗಿರುತ್ತಿತ್ತು? ತುಂಬಾ ಚೆನ್ನಾಗಿರುತ್ತಿತ್ತು. ಆದರೆ ಯಾರೊಬ್ಬರಿಂದಲೂ ಹಾಗೆ ಮಾಡಲು ಸಾಧ್ಯವಿಲ್ಲ.
  • ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ.
  • ಈ ಹಣದುಬ್ಬರದ ನಡುವೆ ಹಣ ಉಳಿತಾಯಕ್ಕಾಗಿ ಕೆಲವು ಜ್ಯೋತಿಷ್ಯ ಸಲಹೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗಬಾರದೆಂದರೆ ಬರೀ ಇದೊಂದು ಕೆಲಸ ಮಾಡಿ...!  title=

Money Astrology: ಬಹುಪಾಲು ಜನ ಎಷ್ಟೇ ದುಡಿದರೂ ದುಡ್ಡೇ ಉಳಿಯುತ್ತಿಲ್ಲ ಅಂತಾ ದುಃಖ ಪಡುತ್ತಿರುತ್ತಾರೆ. ಕೈತುಂಬಾ ಸಂಬಳ ಬಂದರೂ ಜೇಬು ಮಾತ್ರ ಖಾಲಿ ಖಾಲಿ ಅಂತಾ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ನಿಮ್ಮ ಪರ್ಸ್ ಅಥವಾ ಜೇಬು ಸದಾ ತುಂಬಿರಬೇಕಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. 

ದುಡ್ಡನ್ನು ದುಡಿಯುವುದು ಒಂದು ರೀತಿಯ ಬುದ್ದಿವಂತಿಕೆಯಾದರೆ ದುಡಿದ ದುಡ್ಡನ್ನು ಉಳಿಸುವುದು ಮತ್ತೊಂದು ರೀತಿಯ ಬುದ್ದಿವಂತಿಕೆ. ಆದರೆ ಬಹುಪಾಲು ಜನ ಎಷ್ಟೇ ದುಡಿದರೂ ದುಡ್ಡೇ ಉಳಿಯುತ್ತಿಲ್ಲ ಅಂತಾ ದುಃಖ ಪಡುತ್ತಿರುತ್ತಾರೆ. ಕೈತುಂಬಾ ಸಂಬಳ ಬಂದರೂ ಜೇಬು ಮಾತ್ರ ಖಾಲಿ ಖಾಲಿ ಅಂತಾ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ನಿಮ್ಮ ಪರ್ಸ್ ಅಥವಾ ಜೇಬು ಸದಾ ತುಂಬಿರಬೇಕಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಕೆಲವು ಸಲಹೆಗಳನ್ನು ಅನುಸರಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ದುಡಿದ ದುಡ್ಡನ್ನೆಲ್ಲಾ ಉಳಿಸುವಂತಿದ್ದರೆ ಹೇಗಿರುತ್ತಿತ್ತು? ತುಂಬಾ ಚೆನ್ನಾಗಿರುತ್ತಿತ್ತು. ಆದರೆ ಯಾರೊಬ್ಬರಿಂದಲೂ ಹಾಗೆ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ದುಡಿದ ದುಡ್ಡನ್ನೆಲ್ಲಾ ಉಳಿಸುವುದು ದೊಡ್ಡತನವೂ ಅಲ್ಲ, ದೇಶದ-ಸಮಾಜದ ಆರ್ಥಿಕ ದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಆದರೆ, ದುಡಿದ ದುಡ್ಡಿನಲ್ಲಿ ಇಂತಿಷ್ಟನ್ನಾದರೂ ಉಳಿಸಬೇಕು. ಭವಿಷ್ಯಕ್ಕಾಗಿ, ಮಕ್ಕಳಿಗಾಗಿ, ಇಳಿಗಾಲಕ್ಕಾಗಿ, ಆದರೆ ದಿನ ನಿತ್ಯ ಬೇಕಾಗುವ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ಕುಳಿತಿರುವಾಗ ಉಳಿಸುವುದು ಕಷ್ಟ. ದಿನವೂ ಜೇಬು ತುಂಬಿಸಿದರೂ ದಿನವೂ ಜೇಬು ಖಾಲಿ ಆಗತ್ತಲೇ ಇರುತ್ತದೆ. 

ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಅಪಾರ ಹಣ, ಕೀರ್ತಿ, ಐಷಾರಾಮಿ ಬದುಕನ್ನು ಕರುಣಿಸಲಿದ್ದಾನೆ ಮಂಗಳ..!

ಹಾಗಾದರೆ ನಿಮ್ಮ ಪರ್ಸ್ ಅಥವಾ ಜೇಬು ಯಾವಾಗಲೂ ತುಂಬಿರಬೇಕು, ನೀವೂ ಎಷ್ಟೇ ಖರ್ಚು ಮಾಡಿದರೂ ಮತ್ತೆ ಹಣ ಉಳಿದಿರಬೇಕು ಎಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಚೌಕಾಕಾರದ ಒಂದು ಸಣ್ಣ ಕೆಂಪು ಬಟ್ಟೆಯನ್ನು ಇಟ್ಟುಕೊಳ್ಳಿ. ಆಗ ನೀವೂ ಎಷ್ಟೇ ಖರ್ಚು ಮಾಡಿದರೂ ಮತ್ತೆ ಹಣ ಉಳಿಯುತ್ತದೆ. ನಿಮ್ಮ ಪರ್ಸ್  ಕೂಡ ತುಂಬಿರುತ್ತದೆ. 

ಇದನ್ನೂ ಓದಿ- ಮಂಗಳವಾರ ಶ್ರಾವಣದಲ್ಲಿ ಶುಕ್ರ ಸಂಕ್ರಮಣ; ಶುಭ ಸಮಯ, ರಾಹುಕಾಲ &ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿ

ಕೆಂಪು ಬಣ್ಣದ ಬಟ್ಟೆಯೇ ಏಕೆ ಎಂದು ಕೇಳಬಹುದು. 
ಕೆಂಪು ಬಣ್ಣವನ್ನು ‘ಲಕ್ಷ್ಮೀಯ ಬಣ್ಣ’ ಎನ್ನಲಾಗುತ್ತದೆ. ಅದೂ ಅಲ್ಲದೆ ಹಿಂದೂ ಧರ್ಮದ ಪ್ರಕಾರ ಕೆಂಪು ಬಣ್ಣವನ್ನು ‘ಶುಭ’ ಅಂತಲೂ ಕರೆಯಲಾಗುತ್ತದೆ. ಅದರಿಂದಾಗಿ ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಕೆಂಪು ಬಣ್ಣದ ಬಟ್ಟೆಯನ್ನುಇಡುವುದರಿಂದ ಹಣ ಉಳಿತಾಯವಾಗಿ ಕೆಲವೇ ದಿನಗಳಲ್ಲಿ ನೀವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರುತ್ತೀರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News