Zudio vs Reliance: ಫ್ಯಾಶನ್ ಲೋಕದಲ್ಲೂ ಪ್ರಾಬಲ್ಯಕ್ಕೆ ಮುಂದಾದ ಅಂಬಾನಿ, ಟಾಟಾ ಗ್ರೂಪ್‌ಗೆ ಟಕ್ಕರ್ ನೀಡುತ್ತಾ ರಿಲಯನ್ಸ್!

Zudio vs Reliance: ರತನ್ ಟಾಟಾ ಅವರ ಟ್ರೆಂಟ್ ಝುಡಿಯೋ  ಅದರ ಟ್ರೆಂಡಿ ಮತ್ತು ಕೈಗೆಟುಕುವ ಉಡುಪುಗಳಿಗೆ ಹೆಸರುವಾಸಿಯಾಗಿದ್ದು ಮಧ್ಯಮ ವರ್ಗದ ಜನರ ನೆಚ್ಚಿನ ಶಾಪಿಂಗ್ ಸ್ಪಾಟ್ ಆಗಿದೆ. ಇದೀಗ ಫ್ಯಾಶನ್ ಲೋಕಕ್ಕೆ ಕಾಲಿಡಲು ಮುಂದಾಗುತ್ತಿರುವ ಅಂಬಾನಿ ಟಾಟಾ ಗ್ರೂಪ್‌ಗೆ ಟಕ್ಕರ್  ನೀಡಲು ಹೊಸ ಯೋಜನೆಯನ್ನು ರೂಪಿಸಿದ್ದಾರೆ.  

Zudio vs Reliance: ರತನ್ ಟಾಟಾ ಅವರ ಟ್ರೆಂಟ್‌ನ ಫ್ಯಾಶನ್ ಬ್ರ್ಯಾಂಡ್ ಝುಡಿಯೋ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಟಾಟಾ ಗ್ರೂಪ್‌ನ ಟ್ರೆಂಟ್ ಝುಡಿಯೋಗೆ ಟಕ್ಕರ್ ನೀಡಲು ಮುಂದಾಗಿರುವ ರಿಲಯನ್ಸ್ ಒಡೆಯ ಮುಖೇಶ್ ಅಂಬಾನಿ ಮೆಗಾ ಪ್ಲಾನ್ ರೂಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಫ್ಯಾಷನ್ ಜಗತ್ತಿನಲ್ಲಿ ರತನ್ ಟಾಟಾ ಅವರ ಟಾಟಾ ಗ್ರೂಪ್‌ನ ರಿಟೇಲ್ ಆರ್ಮ್, ಟ್ರೆಂಟ್ ಲಿಮಿಟೆಡ್‌ನಿಂದ ಕಠಿಣ ಸ್ಪರ್ಧೆ ಎದುರಿಸುತ್ತಿರುವ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಫಾಸ್ಟ್ ಫ್ಯಾಶನ್ ಮಾರುಕಟ್ಟೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.   

2 /8

ಟಾಟಾ ಇಂಡಸ್ಟ್ರೀಸ್ ಟ್ರೆಂಟ್‌ನ ಫ್ಯಾಶನ್ ಬ್ರ್ಯಾಂಡ್ "ಝುಡಿಯೋ" ಪ್ರವರ್ಧಮಾನಕ್ಕೆ ಬರುತ್ತಿದ್ದು, ಫ್ಯಾಷನ್ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ಶಾಪಿಂಗ್ ಸ್ಪಾಟ್ ಆಗಿದೆ. ಪ್ರಸ್ತುತ 164 ನಗರಗಳಲ್ಲಿ ಸುಮಾರು 560 ಮಳಿಗೆಗಳನ್ನು ಹೊಂದಿದೆ. 

3 /8

ಅತ್ಯಂತ ಕೈಗೆಟುಕುವ ಬೆಲೆಯಲ್ಲಿ  ಮಧ್ಯಮ ವರ್ಗದ ಜನರಿಗೆ ಫ್ಯಾಷನ್ ಬ್ರಾಂಡ್ ಉಡುಪುಗಳನ್ನು ಒದಗಿಸುವ "ಝುಡಿಯೋ" ಮಾರಾಟವು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೂ ಮೊದಲೇ  ಸುಮಾರು ಮೂರು ಪಟ್ಟು ಹೆಚ್ಚಾಗಿತ್ತು. ಇಂದಿಗೂ ಕೂಡ ಇದರ ನಿವ್ವಳ ಲಾಭ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. 

4 /8

ಇದೀಗ ರತನ್ ಟಾಟಾ ಅವರ ಝುಡಿಯೋಗೆ ಕಠಿಣ ಸ್ಪರ್ಧೆ ನೀಡಲು ಮುಂದಾಗಿರುವ ಮುಖೇಶ್ ಅಂಬಾನಿಯವರ ರಿಲಯನ್ಸ್ ರಿಟೇಲ್ 2020 ರಲ್ಲಿ ಗಡಿ ಉದ್ವಿಗ್ನತೆಯಿಂದಾಗಿ ಭಾರತವನ್ನು  ತೊರೆದಿದ್ದ ಜನಪ್ರಿಯ ಚೈನೀಸ್ ಫ್ಯಾಶನ್ ಬ್ರ್ಯಾಂಡ್ ಶೇನ್ ಅನ್ನು ಮರಳಿ ತರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. 

5 /8

ರಿಲಯನ್ಸ್‌ನಿಂದ ನಿಯಂತ್ರಿಸಲ್ಪಡುವ ಶೇನ್‌ನ ವಾಪಸಾತಿಯು ಫ್ಯಾಷನ್ ಜಗತ್ತಿನಲ್ಲಿ  ರತನ್ ಟಾಟಾ vs ಮುಕೇಶ್ ಅಂಬಾನಿ ನಡುವೆ ಗೇಮ್ ಚೇಂಜರ್ ಆಗಬಹುದು ಎಂದು ಹೇಳಲಾಗುತ್ತಿದೆ.   

6 /8

ಶೇನ್ ಅವರ ಮುಂಬರುವ IPO ಮತ್ತು ರಿಲಯನ್ಸ್‌ನೊಂದಿಗಿನ ಪಾಲುದಾರಿಕೆಯು ಟಾಟಾ ಅವರ ಝುಡಿಯೋಗೆ ಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. 

7 /8

ಲಭ್ಯವಿರುವ ಮಾಹಿತಿಯ ಪ್ರಕಾರ, ಟಾಟಾ ಜುಡಿಯೊಗೆ ಟಕ್ಕರ್ ನೀಡಲು ಮುಂದಾಗಿರುವ ಮುಖೇಶ್ ಅಂಬಾನಿ ಇದನ್ನು ತಮ್ಮ ಪ್ರೀತಿಯ ಪುತ್ರಿ ಇಶಾ ಅಂಬಾನಿಗೆ ಮುಂದಾಳತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. 

8 /8

ಫ್ಯಾಷನ್ ಮಾರುಕಟ್ಟೆಗಾಗಿ  ರತನ್ ಟಾಟಾ ಹಾಗೂ ಮುಖೇಶ್ ಅಂಬಾನಿ ಅವರ ಸಂಘಟಿತ ಸಂಸ್ಥೆಗಳ ಸ್ಪರ್ಧೆಯಿಂದಾಗಿ ಭಾರತದಲ್ಲಿನ ಗ್ರಾಹಕರು ಹೆಚ್ಚು ಕೈಗೆಟುಕುವ ಮತ್ತು ಟ್ರೆಂಡಿ ಆಯ್ಕೆಗಳ ಉಡುಪುಗಳನ್ನು ಎದುರುನೋಡಬಹುದು ಎಂತಲೇ ಹೇಳಲಾಗುತ್ತಿದೆ.