Aishwarya Rai-Abhishek Bachchan: ನಟಿ ಐಶ್ವರ್ಯ ರೈ ಇತ್ತೀಚೆನ ದಿನಗಳಲ್ಲಿ ತಮ್ಮ ವೈಯಕ್ತಿಕ ಕಾರಣದಿಂದ ಸುದ್ದಿಯಲ್ಲಿದ್ದಾರೆ.. ಅಭಿಷೇಕ್ ಹಾಗೂ ಐಶ್ವರ್ಯ ಅವರಿಬ್ಬರ ಸಮಭಂಧದ ಮಧ್ಯೆ ಬಿರುಕು ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇದಕ್ಕೆ ಪುಷ್ಟಿ ನೀಡುವಂತೆ ಐಶ್ವರ್ಯ ರೈ ಒಬ್ಬರೇ ನ್ಯೂಯಾರ್ಕ್ಗೆ ಹಾರಿದ್ದಾರೆ..
ಐಶ್ವರ್ಯಾ ರೈ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇವರ ವೈವಾಹಿಕ ಜೀವನದಲ್ಲಿ ಬಿಕ್ಕಟ್ಟು ಇದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದೀಗ ಐಶ್ವರ್ಯಾ ಶೀಘ್ರದಲ್ಲೇ ಅಭಿಷೇಕ್ ಬಚ್ಚನ್ ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಇದರಲ್ಲಿ ಎಷ್ಟು ಸತ್ಯವಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ..
ಇದೆಲ್ಲದರ ಮಧ್ಯವೇ ನಟಿ ಐಶ್ವರ್ಯ ಅವರ ಕೆಲವು ಫೋಟೋಗಳು ಮುನ್ನೆಲೆಗೆ ಬಂದಿವೆ. ಅಭಿಷೇಕ್ ಇಲ್ಲದೆ ಐಶ್ವರ್ಯಾ ಒಂಟಿಯಾಗಿ ರಜೆ ಕಳೆಯುತ್ತಿರುವ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
ಹೌದು ಐಶ್ವರ್ಯಾ ರೈ ಬಚ್ಚನ್ ಸದ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಬಚ್ಚನ್ ಹೊರತುಪಡಿಸಿ, ಅವರು ನ್ಯೂಯಾರ್ಕ್ ತಲುಪಿದ್ದಾರೆ.. ಅನ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ವಿಚ್ಛೇದನ ಪೋಸ್ಟ್ ಅನ್ನು ಲೈಕ್ ಮಾಡಿದಾಗಿನಿಂದ, ಅವರ ವಿಚ್ಛೇದನದ ಬಗ್ಗೆ ಚರ್ಚೆ ಹೆಚ್ಚುತ್ತಿದೆ. ಅದರ ನಂತರ, ಐಶ್ವರ್ಯಾ ರೈ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಅಮೆರಿಕದ ಪಾಡ್ಕಾಸ್ಟರ್ ಜೆರ್ರಿ ರೀನಾ ಅವರು ಐಶ್ವರ್ಯಾ ರೈ ಅವರೊಂದಿಗಿನ ಎರಡು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೆರ್ರಿ ಈ ಹಿಂದೆಯೂ ಐಶ್ವರ್ಯಾ ರೈ ಅವರನ್ನು ಭೇಟಿ ಮಾಡಿದ್ದರು.
ಐಶ್ವರ್ಯಾ ರೈ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡ ಅವರು, 'ಜೀವನದಲ್ಲಿ ಎರಡು ಬಾರಿ ನಿಮ್ಮನ್ನು ಭೇಟಿಯಾಗಿರುವುದು ನನಗೆ ದೊಡ್ಡ ವಿಷಯ' ಎಂದು ಬರೆದಿದ್ದಾರೆ. ಸದ್ಯ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ..
ಇತ್ತೀಚೆಗಷ್ಟೇ ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬ ರಾಧಿಕಾ ಮತ್ತು ಅನಂತ್ ಮದುವೆಯಲ್ಲಿ ಕಾಣಿಸಿಕೊಂಡಿತ್ತು. ಅಭಿಷೇಕ್ ಬಚ್ಚನ್ ತಮ್ಮ ಕುಟುಂಬದೊಂದಿಗೆ ಬಂದಿದ್ದರು..
ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ಪ್ರತ್ಯೇಕವಾಗಿ ಮದುವೆಗೆ ಹಾಜರಾಗಿದ್ದರು. ಅಂದಿನಿಂದ, ಅವರ ವಿಚ್ಛೇದನದ ಸುದ್ದಿ ವೇಗವನ್ನು ಪಡೆದುಕೊಂಡಿದೆ.