Weight Loss: ಜಿಮ್‌ಗೆ ಹೋಗದೆ ಈ ರೀತಿ ತೂಕ ಇಳಿಸಿಕೊಳ್ಳಿ

Weight Loss Simple Tips: ತೂಕ ಇಳಿಸಿಕೊಳ್ಳಲು ಇಂದು ಬಹುತೇಕರು ಹರಸಾಹಸ ಪಡುತ್ತಾರೆ. ತೂಕ ಇಳಿಸಿಕೊಂಡು ಚೆನ್ನಾಗಿ ಕಾಣಬೇಕು ಅನ್ನೋದು ಅನೇಕರ ಆಸೆಯಾಗಿರುತ್ತದೆ. ಹೀಗಾಗಿ ಸುಲಭವಾಗಿ ತೂಕ ಇಳಿಸುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ನವದಹಲಿ: ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವಿಕೆ ಪ್ರತಿಯೊಬ್ಬರ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕರು ತೂಕ ಇಳಿಸಿಕೊಳ್ಳಲು ಹಲವು ಗಂಟೆಗಳ ಕಾಲ ಜಿಮ್ ಮಾಡುತ್ತಾರೆ. ಆದರೆ ಇದೀಗ ನೀವು ಜಿಮ್‌ಗೆ ಹೋಗದೆ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ನಿಮ್ಮ ತೂಕವನ್ನು ಹೇಗೆ ಸುಲಭವಾಗಿ ಕಡಿಮೆ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತೂಕವನ್ನು ಕಳೆದುಕೊಳ್ಳಲು ಮೊದಲನೆಯದಾಗಿ ನೀವು ಸೇವಿಸುವ ಆಹಾರಗಳಲ್ಲಿ ಪೈಕಿ ಜಂಕ್ ಫುಡ್‍ ಗಳಿಂದ ದೂರವಿರಿ. ಕರಿದ ಪದಾರ್ಥಗಳಿಂದ ನೀವು ದೂರವಿದ್ದಷ್ಟು ಉತ್ತಮ.  

2 /5

ತೂಕ ಇಳಿಕೆಗೆ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡಿ. ಹೌದು, ನೀವು ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ನಿಮ್ಮ ಆಹಾರವನ್ನು ಅರ್ಧಕ್ಕೆ ಇಳಿಸಿ.

3 /5

ಸರಿಯಾಗಿ ನೀರು ಕುಡಿಯಲು ಪ್ರಾರಂಭಿಸಿ. ಇದರಿಂದ ತೂಕ ಅತ್ಯಂತ ವೇಗವಾಗಿ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ಪ್ರತಿದಿನ ಬಿಸಿನೀರನ್ನು ಕುಡಿಯಿರಿ. ಇದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು

4 /5

ನೀವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಫೈಬರ್ ಸೇರಿಸುವ ಮೂಲಕ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸಿ..

5 /5

ತೂಕ ಇಳಿಸಲು ನೀವು ಪ್ರತಿದಿನ ಹೆಚ್ಚು ನಡೆಯಲು ಪ್ರಯತ್ನಿಸಿ. ಇದಕ್ಕಾಗಿ ನೀವು ಮೆಟ್ಟಿಲುಗಳನ್ನು ಸಹ ಬಳಸಬಹುದು. ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ಆದಷ್ಟು ತಪ್ಪಿಸಿ.