Auspicious Navpancham Yog: 30 ವರ್ಷಗಳ ಬಳಿಕ ತ್ರಿವಳಿ 'ನವಪಂಚಮ ಯೋಗ' ನಿರ್ಮಾಣ, 3 ರಾಶಿಗಳ ಜನರು ಎರಡೂ ಕೈಗಳಿಂದ ಹಣ ಬಾಚಿಕೊಳ್ಳಲಿದ್ದಾರೆ!

Auspicious Navpancham Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಟ್ರಿಪಲ್ ನವಪಂಚಮ ಯೋಗ ನಿರ್ಮಾಣಗೊಳ್ಳುತ್ತಿದ್ದು, ಮೂರು ರಾಶಿಗಳ ಪಾಲಿಗೆ ಇದು ಭಾರಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಈ ಮೂರೂ ರಾಶಿಗಳ ಜನರಿಗೆ ಅಪಾರ ಧನ ಮತ್ತು ಸ್ಥಾನಮಾನ ಪ್ರಾಪ್ತಿಯಾಗಲಿದೆ. 
 

Auspicious Rajyog: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ನಿರ್ಮಿಸುತ್ತವೆ. ಅವುಗಳ ಪ್ರಭಾವವು ಭೂಮಿಯ ಮೇಲೆ ಇರುವ ಸಕಲ ಚರಾಚರಗಳ ಮೇಲೆ ಕಂಡು ಬರುತ್ತದೆ. 30 ವರ್ಷಗಳ ನಂತರ ತ್ರಿವಳಿ ನವಪಂಚಮ ಯೋಗವು ರೂಪುಗೊಳ್ಳಲಿದೆ. ಅಂದರೆ ಮಂಗಳ ಮತ್ತು ಕೇತುವಿನ ಈ ನವಪಂಚಮ ಯೋಗ, ಕೇತು ಮತ್ತು ಶನಿಯ ನವಪಂಚಮ ಯೋಗ ಮತ್ತು ಮಂಗಳ-ಶನಿಯ ನವಪಂಚಮ ಯೋಗವು ರೂಪುಗೊಳ್ಳುತ್ತಿದೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸಲಿದೆ. ಆದರೆ 3 ರಾಶಿಗಳ ಜನರಿಗೆ, ಈ ಅವಧಿಯಲ್ಲಿ ಅಪಾರ ಧನ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳನ್ನು ನಿರ್ಮಾಣಗೊಳ್ಳುತ್ತಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಶೀಘ್ರದಲ್ಲೇ ಬೃಹಸ್ಪತಿಯ ಮನೆಯಲ್ಲಿ 'ಪವರ್ಫುಲ್ ತ್ರಿಗ್ರಹಿ ಯೋಗ' ನಿರ್ಮಾಣ 3 ಜಾತಕದವರ ಮೇಲೆ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಸಿಂಹ ರಾಶಿ-ತ್ರಿವಳಿ  ನವಪಂಚಮಯೋಗವು ನಿಮಗೆ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ. ಏಕೆಂದರೆ ಕೇತುವು ನಿಮ್ಮ ಸಂಕ್ರಮಣದ ಜಾತಕದ ತೃತೀಯ ಭಾವದಲ್ಲಿದ್ದು,  ಮಂಗಳ ಶುಭ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಒಂದು ವೇಳೆ ನಿಮ್ಮ ವ್ಯಾಪಾರವು ವಿದೇಶ ಅಥವಾ ಆಮದು-ರಫ್ತಿಗೆ ಸಂಬಂಧಿಸಿದ್ದರೆ ನಿಮಗೆ ಉತ್ತಮ ಲಾಭ ಸಿಗಲಿದೆ. ಇನ್ನೊಂದೆಡೆ ಶನಿ ಹಾಗೂ  ಸೂರ್ಯ ನಿಮ್ಮ ಜಾತಕದ ಸಪ್ತಮೇಷನಾಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸುವ ಸಾಧ್ಯತೆಯಿದೆ. ಇದರೊಂದಿಗೆ ನಿಮ್ಮ ಬಾಲಸಂಗಾತಿಯ ಪ್ರಗತಿಯೂ ಸಾಧ್ಯವಾಗಲಿದೆ. ಪಾಲುದಾರಿಕೆಯ ಕೆಲಸವು ಪ್ರಯೋಜನಕಾರಿಯಾಗಲಿದೆ.  

2 /3

ಮಿಥುನ ರಾಶಿ-ತ್ರಿವಳಿ ನವಪಂಚಮಯೋಗವು ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ತ್ರಿಕೋನ ಭಾವದಲ್ಲಿ ಈ ಯೋಗವು ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ  ನೀವು ಹಠಾತ್ ಧನಲಾಭ ಪಡೆಯಬಹುದು. ಇದರೊಂದಿಗೆ ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ. ಇದೇ ವೇಳೆ, ನೀವು ಷೇರುಗಳಿಂದ, ಬೆಟ್ಟಿಂಗ್ ಮತ್ತು ಲಾಟರಿಗಳಿಂದ ಲಾಭವನ್ನು ಪಡೆಯಬಹುದು.  ನೀವು ಹಣ ಮತ್ತು ಆಸ್ತಿಗೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆಸೆಗಳನ್ನು ಈಡೇರಲಿವ್. ಹೊಸ ಕೆಲಸವನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿದೆ.  

3 /3

ಮೇಷ ರಾಶಿ-ತ್ರಿವಳಿ  ನವಪಂಚಮಯೋಗವು ನಿಮ್ಮ ಪಾಲಿಗೆ ಸಾಕಷ್ಟು ಮಂಗಳಕರ ಸಾಬೀತಾಗಲಿದೆ. ಏಕೆಂದರೆ ಮಂಗಳ ಮತ್ತು ಶನಿ ನಿಮ್ಮ ಜಾತಕದ ಶುಭ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಅಲ್ಲದೆ ಸೂರ್ಯ ಮತ್ತು ಬುಧನೊಂದಿಗೆ ನವಪಂಚಮ ಯೋಗವಿದೆ. ಹೀಗಾಗಿ  ಈ ಸಮಯದಲ್ಲಿ ದೈಹಿಕ ಶಕ್ತಿಯಿಂದ ಹಣ ಬರುತ್ತದೆ. ಇದರೊಂದಿಗೆ ಬಾಲಸಂಗಾತಿಯ ಕಡೆಯಿಂದಲೂ ಕೂಡ ನೀವು ಹಣ ಗಳಿಸಬಹುದು. ಕಂಪನಿಯನ್ನು ಹೊಂದಿರುವ ಜನರು ತಮಗೆ ದೀರ್ಘಾವಧಿಯಿಂದ ಸೇರಬೇಕಾದ ಹಣವನ್ನು ಪಡೆಯಬಹುದು. ಅಲ್ಲದೆ, ನಿರುದ್ಯೋಗಿಗಳು ಹೊಸ ಉದ್ಯೋಗದ ಕೊಡುಗೆ ಪಡೆಯಬಹುದು. ಮತ್ತೊಂದೆಡೆ, ನೌಕರ ವರ್ಗದ ಜನರು ಮಾರ್ಚ್‌ನೊಂದಿಗೆ ಬಡ್ತಿ ಅಥವಾ ಇನ್‌ಕ್ರಿಮೆಂಟ್ ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)