Viral News: ತಾಯಿ ತನ್ನ ಮಗುವಿಗೆ ಪ್ರತಿದಿನ ಇಂತಹ ಆಹಾರವನ್ನು ನೀಡುತ್ತಾಳೆ..!

ಬೆಲ್ಜಿಯಂನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಗುವನ್ನು ಆಹಾರದ ಕಡೆಗೆ ಆಕರ್ಷಿಸಲು ವಿಶೇಷ ವಿಧಾನವನ್ನು ಕಂಡುಕೊಂಡಿದ್ದಾರೆ.

ತಾಯಂದಿರು ತಮ್ಮ ಮಕ್ಕಳಿಗೆ ಸಂಪೂರ್ಣ ಪೌಷ್ಟಿಕಾಂಶವನ್ನು ನೀಡಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಇದರಿಂದ ಮಕ್ಕಳು ಹಸಿರು ತರಕಾರಿಗಳು, ಡೈರಿ ಉತ್ಪನ್ನ ಇತ್ಯಾದಿಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಸೇವಿಸುತ್ತಾರೆ. ಅನೇಕ ಬಾರಿ ಆಹಾರ ಸೇವಿಸಲು ಮಕ್ಕಳು ಹಠ ಮಾಡುತ್ತಾರೆ. ಈ ವೇಳೆ ಮಕ್ಕಳ ಮೇಲೆ ತಾಯಿ ಕೋಪಿಸಿಕೊಳ್ಳುತ್ತಾರೆ. ಹೇಗಾದರೂ ಮಾಡಿ ಮಕ್ಕಳಿಗೆ ಊಟ ಮಾಡಿಸಿದರೆ ಸಾಕಪ್ಪ ಅಂದುಕೊಳ್ಳುತ್ತಿರುತ್ತಾರೆ. ಬೆಲ್ಜಿಯಂನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ತಮ್ಮ ಮಗುವನ್ನು ಆಹಾರದ ಕಡೆಗೆ ಆಕರ್ಷಿಸಲು ವಿಶೇಷ ವಿಧಾನವನ್ನು ಕಂಡುಕೊಂಡಿದ್ದಾರೆ. ಇದು ಅನೇಕ ಜನರನ್ನು ಬೆರಗುಗೊಳಿಸುವಂತೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ದಿ ಸನ್ ವರದಿಯ ಪ್ರಕಾರ, ಜೋಲಾಂಡಾ ಸ್ಟೋಕರ್ಮನ್(Jolanda Stokerman) ಎಂಬುವರು ವೃತ್ತಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ಇವರು ಆಹಾರದ ತಟ್ಟೆಯನ್ನು ಕ್ಯಾನ್ವಾಸ್ ಆಗಿ ಬಳಸುತ್ತಾರೆ. ಮಕ್ಕಳಿಗೆ ಯಾವುದೇ ರೀತಿಯ ಆಹಾರ ನೀಡುವಾಗ ಅವರು ತಟ್ಟೆಯಲ್ಲಿರುವ ಊಟವನ್ನು ಡಿಸೈನ್ ಡಿಸೈನ್ ಆಗಿ ಮಾಡಿ ನೀಡುತ್ತಾರೆ. ಈ ಆಹಾರವನ್ನು ನೀವು ನೋಡಿದರೆ ನಿಜವಾದ ಕಾಡು ಪ್ರಾಣಿಗಳಂತೆ ಕಾಣುತ್ತವೆ.

2 /5

ನಿಜ ಜೀವನದಲ್ಲಿ ಅನೇಕ ಜನರು ಸಿಂಹದ ಹೆಸರನ್ನು ಕೇಳಿದರೆ ಸಾಕು ಹೆದರುತ್ತಾರೆ. ಸಿಂಹದ ಘರ್ಜನೆ ಕಂಡರೆ ಸಾಕು ಬೆಚ್ಚಿಬೀಳುವಂತಾಗುತ್ತದೆ. ಆದರೆ ಜೋಲಾಂಡಾ ಮಕ್ಕಳು ಸಿಂಹಕ್ಕೆ ಹೆದರುವುದೇ ಇಲ್ಲ. ಏಕೆಂದರೆ ಅವರು ತಮ್ಮ ಮಕ್ಕಳಿಗೆ ನೀಡುವ ಆಹಾರವನ್ನು ಸಿಂಹದ ರೂಪದಲ್ಲಿ ರೂಪಿಸಿ ನೀಡುತ್ತಾರೆ.

3 /5

ಜೋಲಾಂಡಾ ಅವರು ತಮ್ಮ ಮಕ್ಕಳಿಗೆ ಪ್ರತಿದಿನ ನೀಡುವ ಆಹಾರವನ್ನು ಪ್ರಾಣಿಗಳ ಚಿತ್ರಗಳಂತೆ ರೂಪಿಸುತ್ತಾರೆ. ಇಲ್ಲಿ ನೋಡಿ ಆಹಾರದ ತಟ್ಟೆಯಲ್ಲಿ ಕುದುರೆಯ ಚಿತ್ರ. ಇದನ್ನು ನೋಡಿದರೆ ಪ್ರತಿಯೊಬ್ಬರು ಇದು ಕುದುರೆ ಅಂತಾ ಹೇಳುತ್ತಾರೆ. ಆದರೆ ಇದು ಆಹಾರದಲ್ಲಿ ತಯಾರಿಸಿರುವ ಕುದುರೆ. ಈ ರೀತಿ ಮಕ್ಕಳಿಗೆ ಆಹಾರ ನೀಡಿದಾಗ ಅವರು ಯಾವುದೇ ರೀತಿ ಹಠ ಮಾಡದೆ ಊಟ ಮಾಡುತ್ತಾರೆ ಅಂತಾ ಜೋಲಾಂಡಾ ಅವರು ಅಭಿಪ್ರಾಯಪಟ್ಟಿದ್ದಾರೆ.

4 /5

ಜೋಲಾಂಡಾ ಅವರು ಅಕ್ಕಿ ಮತ್ತು ವಿವಿಧ ಬೀಜಗಳನ್ನು ಬಳಸಿ ಗೂಬೆಗಳನ್ನು ಸಹ ರೂಪಿಸಿದ್ದಾರೆ. ಇದು ನೋಡಲು ನಿಜವಾದ ಗೂಬೆಯಂತೆಯೇ ಕಾಣುತ್ತದೆ.

5 /5

ಮಕ್ಕಳು ಹೆಚ್ಚಾಗಿ ನೋಡಲು ಮುದ್ದು ಮುದ್ದಾಗಿ ಕಾಣುವ ‘ಕೋಲಾ’ (Koala)ಹಿಂದೆ ಓಡುವುದನ್ನು ಕಾಣಬಹುದು. ಆದರೆ ಜೋಲಾಂಡಾ ಅವರು ತಮ್ಮ ಮಕ್ಕಳಿಗೆ ಆಹಾರದ ತಟ್ಟೆಯಲ್ಲಿ ‘ಕೋಲಾ’ವನ್ನೇ ರೂಪಿಸಿದ್ದಾರೆ. ವಿವಿಧ ಬಣ್ಣಗಳ ಬ್ರೆಡ್ ಮತ್ತು ಕ್ರೀಮ್ ಅನ್ನು ಬಳಸಿ ಅವರು ‘ಕೋಲಾ’ದ ಆಹಾರವನ್ನು ಸಿದ್ಧಪಡಿಸಿದ್ದಾರೆ. ನೋಡಲು ನಿಜವಾದ ‘ಕೋಲಾ’ದಂತೆ ಕಾಣುವ ಇದನ್ನು ಮಕ್ಕಳು ತಡಮಾಡದೆ ಗುಳುಂ ಅನ್ನಿಸಿದ್ದಾರೆ.