ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ನಟ-ನಟಿಯರಿಗೆ ಪ್ರಶಸ್ತಿ ವಿತರಿಸಿದರು. ರಜನಿಕಾಂತ್ ಅವರಿಗೆ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ನಟ-ನಟಿಯರಿಗೆ ಪ್ರಶಸ್ತಿ ವಿತರಿಸಿದರು. ರಜನಿಕಾಂತ್ ಅವರಿಗೆ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿ ಪರಾಕ್ : 'ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ' ("ತೇರಿ ಮಿಟ್ಟಿ" ಗಾಗಿ) ಮತ್ತು 'ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ' ("ರಾನ್ ಪೆಟಾಲಾ" ಗಾಗಿ) ವಿಭಾಗಗಳಲ್ಲಿ ಗಾಯಕರಾದ ಬಿ ಪರಾಕ್ ಮತ್ತು ಸವನಿ ರವೀಂದ್ರ ಪ್ರಶಸ್ತಿಗಳನ್ನು ಪಡೆದರು.
ಧನುಷ್ : "ಅಸುರನ್" ಚಿತ್ರಕ್ಕಾಗಿ ಧನುಷ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.
ಮನೋಜ್ ಬಾಜಪೇಯಿ : 'ಭೋಂಸ್ಲೆ' ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.
ಕಂಗನಾ ರನೌತ್ : 'ಮಣಿಕರ್ಣಿಕಾ' ಮತ್ತು 'ಪಂಗಾ' ಚಿತ್ರಗಳಿಗಾಗಿ ಬಾಲಿವುಡ್ ನಟಿ ಕಂಗನಾ ರನೌತ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ : ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗಾಗಿ ನೀಡಲಾಗಿದೆ.