ಶೀಘ್ರದಲ್ಲೇ ಛಾಯಾ ಗ್ರಹಗಳಾದ ರಾಹು-ಕೇತುಗಳ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

Rahu Ketu Transit 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಾಯಾವಿ ಗ್ರಹಗಳಾಗಿರುವ ರಾಹು-ಹಾಗೂ ಕೇತುಗಳ ರಾಶಿ ಪರಿವರ್ತನೆ ನಡೆಯಲಿದೆ. ಈ ಛಾಯಾಗ್ರಹಗಳ ರಾಶಿ ಪರಿವರ್ತನೆ 3 ರಾಶಿಗಳ ಜನರ ಅದೃಷ್ಟವನ್ನೇ ಬದಲಾಯಿಸಲಿದ್ದು, ಅವರ ಜೀವನದಲ್ಲಿ ಗೋಲ್ದನ ಟೈಮ್ ಆರಂಭಗೋಳ್ಳಲಿದೆ. ಬನ್ನಿ ತಿಳಿದುಕೊಳ್ಳೋಣ Spiritual News In Kannada
 

ಬೆಂಗಳೂರು: ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ನವಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸುತ್ತವೆ. ಗ್ರಹಗಳ ಈ ರಾಶಿ ಪರಿವರ್ತನೆಯ ಪ್ರಭಾವ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತವೆ. ಪ್ರಸ್ತುತ ಅಕ್ಟೋಬರ್ 30 ರಂದು ಮಾಯಾವಿ ಗ್ರಹಗಳಾಗಿರುವ ರಾಹು ಹಾಗೂ ಕೇತು ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸಲಿವೆ. ಒಂದೆಡೆ ರಾಹು ತನ್ನ ಹಿಮ್ಮುಖ ನಡೆಯನ್ನು ಅನುಸರಿಸುತ್ತ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಿದರೆ. ಕೇತು ತುಲಾ ರಾಶಿಯಿಂದ ಹೊರಬಂದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಎರಡೂ ಗ್ರಹಗಳ ಈ ಸ್ಥಿತಿಗತಿ ಮೂರು ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ನೀಡಲಿದ್ದು, ಅದೃಷ್ಟದ ಬಾಗಿಲನ್ನೇ ತೆರೆಯಲಿದೆ, ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, Spiritual News In Kannada

 

ಇದನ್ನೂ ಓದಿ-ಸ್ವರಾಶಿಗೆ ಮಂಗಳನ ಪ್ರವೇಶ, ಲಕ್ಷ್ಮಿ ನಾರಾಯಣ ಕೃಪೆಯಿಂದ ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಮಾಯಾವಿ ಗ್ರಹಗಳಾಗಿರುವ ರಾಹು-ಹಾಗೂ ಕೇತುಗಳ ರಾಶಿ ಪರಿವರ್ತನೆ ನಡೆಯಲಿದೆ. ಈ ಛಾಯಾಗ್ರಹಗಳ ರಾಶಿ ಪರಿವರ್ತನೆ 3 ರಾಶಿಗಳ ಜನರ ಅದೃಷ್ಟವನ್ನೇ ಬದಲಾಯಿಸಲಿದ್ದು, ಅವರ ಜೀವನದಲ್ಲಿ ಗೋಲ್ದನ ಟೈಮ್ ಆರಂಭಗೋಳ್ಳಲಿದೆ. ಬನ್ನಿ ತಿಳಿದುಕೊಳ್ಳೋಣ  

2 /5

ಮಕರ ರಾಶಿ: ನಿಮ್ಮ ರಾಶಿಗೆ ಶನಿ ಅಧಿಪತಿಯಾಗಿದ್ದಾನೆ, ರಾಹು-ಕೇತು ಹಾಗೂ ಶನಿಯ ಮಧ್ಯೆ ಸ್ನೇಹ ಭಾವದ ಸಂಬಂಧವಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಲಾಭ ಸಿಗಲಿದೆ. ಈ ಗ್ರಹಗಳ ಶುಭ ಪ್ರಭಾವದಿಂದ ನಿಮಗೆ ಲಾಟರಿ ಸಿಗುವ ಹೊಡೆಯುವ ಸಾಧ್ಯತೆ ಇದ್ದು, ನಿಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಸಾಕಷ್ಟು ಹಣ ಹರಿದುಬರಲಿದೆ. ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಲು ಬಯಸುವವರಿಗೆ ಇದು ಸಕಾಲ. ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ಕೌಟುಂಬಿಕ ವಾತಾವರಣ ಖುಷಿಗಳಿಂದ ತುಂಬಿರಲಿದೆ.   

3 /5

ಕನ್ಯಾ ರಾಶಿ: ರಾಹು ಕೇತುಗಳ ಈ ಗೋಚರ ಕನ್ಯಾ ರಾಶಿಯ ಜನರ ವ್ಯಾಪಾರಿಗಳಿಗೆ ಸಾಕಷ್ಟು ಧನಲಾಭವನ್ನು ತಂದು ಕೊಡಲಿದೆ. ನಿಂತುಹೋದ ಕೆಲಸಗಳು ಮತ್ತೆ ಆರಂಭವಾಗಲಿದ್ದು, ನೌಕರಿಯಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಯಾವ ಕೆಲಸಕ್ಕೆ ಕೈಹಾಕಿದರೂ ಕೂಡ ಯಶಸ್ಸು ನಿಮ್ಮದಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ.   

4 /5

ಕುಂಭ ರಾಶಿ: ರಾಹು-ಕೇತುಗಳ ಈ ಗೋಚರ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇದು ನಿಮಗೆ ಆಕಸ್ಮಿಕ ಧನಲಾಭವನ್ನು ತಂದು ಕೊಡಲಿದೆ. ಬಿಸ್ನೆಸ್ ನಲ್ಲಿ ನಿಮಗೆ ಮುಂದುವರೆಯುವ ಅವಕಾಶ ಸಿಯಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಯಶಸ್ಸು ಸಿಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ, ಬಾಳಸಂಗಾತಿಯ ಉನ್ನತಿಯ ಯೋಗ ಕೂಡ ಗೋಚರಿಸುತ್ತಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)