ಮುಂದಿನ 43 ದಿನ ಶುಕ್ರ ದೆಸೆಯಿಂದ ಈ 4 ರಾಶಿಗಳ ಜನರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ ಯೋಗ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೈಭವ ಕರುಣಿಸುವಾತ ಶುಕ್ರ ಶೀಘ್ರದಲ್ಲಿಯೇ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿವೆ. 

ಬೆಂಗಳೂರು: ವೈದಿಕ ಪಂಚಾಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತನ್ನ ಮಾರ್ಗಗಳನ್ನು ಬದಲಾಯಿಸುವ ಮೂಲಕ ತನ್ನ ನಡೆಯನ್ನು ಮುಂದುವರೆಸುತ್ತವೆ. ಅವುಗಳ ಶುಭ-ಅಶುಭ ಫಲಿತಾಂಶಗಳು ಎಲ್ಲಾ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಪ್ರಸ್ತುತ ಬರುವ ಜುಲೈ 23 ರಂದು ವೈಭವದಾತ ಗುರು ಸಿಂಹ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಇದಲ್ಲದೆ ಆಗಸ್ಟ್ 7 ರಂದು ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ, ಕರ್ಕ ರಾಶಿಯಲ್ಲಿಯೂ ಕೂಡ ಆತ ವಕ್ರಾವಸ್ಥೆಯಲ್ಲಿಯೇ ಮುಂದುವರೆಯಲಿದ್ದಾನೆ. ಹೀಗಾಗಿ ಮುಂದಿನ 43 ದಿನಗಳು ಆತ ವರ್ಕ್ರಾವಸ್ಥೆಯಲ್ಲಿಯೇ ಇರಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲೆ ನೋಡಲು ಸಿಗಲಿದೆ. ಆದರೆ, 4 ರಾಶಿಗಳ ಜಾತಕದವರಿಗೆ ಧನಲಾಭ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತೆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ಶುಕ್ರ-ಚಂದಿರನ ಮೈತ್ರಿಯಿಂದ ನಿರ್ಮಾಣಗೊಂಡಿದೆ 'ಕಲಾತ್ಮಕ ಯೋಗ', ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೃಷಭ ರಾಶಿ: ಶುಕ್ರನ ವಕ್ರ ನಡೆ ವೃಷಭ ರಾಶಿಯ ಜಾತಕದವರಿಗೆ ತುಂಬಾ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಹಾಗೆ ನೋಡಿದರೆ ಶುಕ್ರ ನಿಮ್ಮ ರಾಶಿಗೆ ರಾಷ್ಯಾಧಿಪನಾಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿಯನ್ನು ನೀವು ಕಾಣಬಹುದು. ಕೇಳದ ವ್ಯವಹಾರಗಳು ಉತ್ತಮ ರೀತಿಯಲ್ಲಿ ಮುಂದುವರೆಯಲಿವೆ. ಇನ್ನೊಂದೆಡೆ ಶನಿ ದೇವ ಕೂಡ ವಕ್ರನಡೆಯಲ್ಲಿದ್ದಾನೆ. ವಾಹನ-ಆಸ್ತಿಪಾಸ್ತಿ ಖರೀದಿಗೆ ಇದೊಂದು ಉತ್ತಮ ಕಾಲ ಎಂದರೆ ತಪ್ಪಾಗಲಾರದು. ತಾಯಿಯ ಆರೋಗ್ಯ ಉತ್ತಮವಾಗಿರಲಿದ್ದು, ಸುಖ-ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ.   

2 /5

ಮಿಥುನ ರಾಶಿ: ಶುಕ್ರನ ವಕ್ರ ನಡೆ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ. ಒಂದು ವೇಳೆ ನೀವು ಚಲನಚಿತ್ರ, ಮಾಧ್ಯಮ, ಮಾಡೆಲಿಂಗ್ ಅಥವಾ ಕಲೆ ಕ್ಷೇತ್ರಕ್ಕೆ ಸಂಬಂಧಿಸಿದ್ದ್ವರಾಗಿದ್ದಾರೆ ಈ ಸಮಯ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರಲಿದೆ. ಹೀಗಾಗಿ ಮುಂದಿನ 43 ದಿನಗಳು ಅದೃಷ್ಟದ ಬೆಂಬಲ ನಿಮಗಿರಲಿದ್ದು, ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ.   

3 /5

ಕರ್ಕ ರಾಶಿ: ಶುಕ್ರನ ವಕ್ರ ನಡೆ ಕರ್ಕ ರಾಶಿಯ ಜಾತಕದವರ ಪಾಲಿಗೆ ಆರ್ಥಿಕವಾಗಿ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಆಗಸ್ಟ್ 7 ರಂದು ಶುಕ್ರ ನಿಮ್ಮ ರಾಶಿಯಲ್ಲಿಯೂ ಕೂಡ ತನ್ನ ವಕ್ರನಡೆಯನ್ನು ಮುಂದುವರೆಸಲಿದ್ದಾನೆ. ಇದರಿಂದ ನಿಮಗೆ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ಘನತೆ-ಗೌರವ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮಗೆ ಪ್ರಶಸ್ತಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅತ್ತೆ ಮನೆಯಲ್ಲಿ ಯಾವುದಾದರೊಂದು ಶುಭ ಕಾರ್ಯ ನೆರವೇರುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದ್ದು, ಕೆಲಸ ಕಾರ್ಯಗಳಲ್ಲಿ ವೃದ್ಧಿಯನ್ನು ನೀವು ಕಾಣುವಿರಿ.  

4 /5

ತುಲಾ ರಾಶಿ: ಶುಕ್ರನ ಈ ವಕ್ರ ನಡೆ ನಿಮ್ಮ ಪಾಲಿಗೂ ಕೂಡ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಶುಕ್ರ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ಕಾಣಬಹುದು. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಮದುವೆಯಾದವರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ನೌಕರ ವರ್ಗದ ಜನರಿಗೆ ಇಂಕ್ರಿಮೆಂಟ್, ಪ್ರಮೋಷನ್ ಭಾಗ್ಯ ಸಿಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)