Vastu Tips: ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂಬುದರ ಸೂಚಕ ಈ 5 ಸಂಕೇತಗಳು

Goddess Lakshmi Indications: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಯನ್ನು ಧನ ಸಂಪತ್ತಿನ ಅಧಿದೇವತೆ ಎಂದು ಹೇಳಲಾಗಿದೆ. ಯಾವುದೇ ಓರ್ವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ತನ್ನ ಕೃಪಾ ದೃಷ್ಟಿಯನ್ನು ಬೀರಿದರೆ. ಆ ವ್ಯಕ್ತಿಗೆ ಧನವಂತನಾಗಲು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ.

Goddess Lakshmi Indications: ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಯನ್ನು ಧನ ಸಂಪತ್ತಿನ ಅಧಿದೇವತೆ ಎಂದು ಹೇಳಲಾಗಿದೆ. ಯಾವುದೇ ಓರ್ವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ತನ್ನ ಕೃಪಾ ದೃಷ್ಟಿಯನ್ನು ಬೀರಿದರೆ. ಆ ವ್ಯಕ್ತಿಗೆ ಧನವಂತನಾಗಲು ಸಮಯ ಬೇಕಾಗುವುದಿಲ್ಲ ಎನ್ನಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿ ಮನೆಗೆ ಆಗಮಿಸುವ ಮುನ್ನ ಹಲವು ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಸಮಯ ಇರುವಾಗಲೇ ನೀವು ಕೂಡ ಈ ಸಂಕೇತಗಳನ್ನು ತಿಳಿದುಕೊಂಡರೆ, ನಿಮಗೆ ಭಾರಿ ಲಾಭವಾಗಲಿದೆ.

 

ಇದನ್ನೂ ಓದಿ-December 2022 ರಲ್ಲಿ 6 ಬಾರಿ ಗ್ರಹಗಳ ಗೋಚರ, 3 ರಾಶಿಗಳ ಜನರಿಗೆ ಜಬರ್ದಸ್ತ್ ಲಾಭ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಕಪ್ಪು ಇರುವೆಗಳ ಆಗಮನ: ಜೋತಿಷ್ಯ ಶಾಸ್ತ್ರದಲ್ಲಿ ಕಪ್ಪು ಇರುವೆಗಳನ್ನು ಶುಭ ಎಂದು ಪರಿಗಣಿಸಲಾಗಿದೆ. ಯಾರೊಬ್ಬರ ಮನೆಯಲ್ಲಿ ಆಕಸ್ಮಿಕವಾಗಿ ಕಪ್ಪು ಇರುವೆಗಳ ದಂಡು ಆಗಮಿಸಿದರೆ, ಶೀಘ್ರದಲ್ಲಿಯೇ ಅವರ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗಲಿದೆ ಎಂದರ್ಥ. ಇದರರ್ಥ ಶೀಘ್ರದಲ್ಲಿಯೇ ನಿಮಗೆ ಧನಸಂಪತ್ತು ಪ್ರಾಪ್ತಿಯಾಗಲಿದೆ.  

2 /5

2. ಕಸಗೂಡಿಸುವವರು ಕಂಡರೆ: ಬೆಳಗ್ಗೆ ಮನೆಯಿಂದ ಹೊರಟು ನೀವು ಎಲ್ಲಿಗಾದರು ಹೊರಟಿರುವಾಗ, ಯಾರಾದರು ಕಸಗೂಡಿಸುವವರು ನಿಮ್ಮ ಕಣ್ಣಿಗೆ ಬಿದ್ದರೆ, ಅದೊಂದು ಶುಭ ಸಂಕೇತವಾಗಿದೆ. ಶೀಘ್ರದಲ್ಲಿಯೇ ನೀವು ಎದುರಿಸುತ್ತಿರುವ ನ್ಯಾಯಾಲಯ ಪ್ರಕರಣ ಇತ್ಯರ್ಥವಾಗಲಿದೆ ಎಂದರ್ಥ.  

3 /5

3. ನಿಮ್ಮ ಮನೆಗೆ ಹಕ್ಕಿ ಬಂದು ಗೂಡು ಕಟ್ಟಿದರೆ ಅದನ್ನು ಮುರಿಯಬೇಡಿ. ಏಕೆಂದರೆ ವಾಸ್ತುದಲ್ಲಿ ಇದನ್ನು ಲಕ್ಷ್ಮಿ ದೇವಿಯ ಆಗಮನದ ಸಂಕೇತವೆಂದು ಪರಿಗಣಿಸಲಾಗಿದೆ. ನಿಮ್ಮ ಮನೆಯಲ್ಲೂ ಹಕ್ಕಿ ಗೂಡು ಕಟ್ಟಿದ್ದರೆ ಅದನ್ನು ತೆಗೆಯುವ ಬದಲು ಮರಕ್ಕೆ ಹಾಕಿ. ತಾಯಿ ಲಕ್ಷ್ಮಿಯು ಇದರಿಂದ ಪ್ರಸನ್ನಳಾಗುತ್ತಾಳೆ ಮತ್ತು ನಿಮ್ಮ ಮನೆಯು ಸಂತೋಷದಿಂದ ತುಂಬಿರುತ್ತದೆ.  

4 /5

4. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳಗ್ಗೆ ಸ್ನಾನ ಮುಗಿಸಿಕೊಂಡು ಮನೆಯಿಂದ ಹೊರಡುವಾಗ ದಾರಿಯಲ್ಲಿ ನಾಯಿಯು ರೊಟ್ಟಿ ಅಥವಾ ಸಸ್ಯಾಹಾರವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದರೆ, ಶೀಘ್ರದಲ್ಲಿಯೇ ನಿಮ್ಮ ಮನೆಗೆ ತಾಯಿ ಲಕ್ಷ್ಮಿ ದೇವಿಯ ಆಗಮನವಾಗಲಿದೆ ಎಂದು ಅರ್ಥಮಾಡಿಕೊಳ್ಳಿ. ಇದರರ್ಥ ನಿಮಗೆ ಆಕಸ್ಮಿಕ ಧನಲಾಭವಾಗಲಿದೆ ಎಂದರ್ಥ. ಸಂಪತ್ತಿನ ಅಧಿದೇವತೆ ಸಸ್ಯಾಹಾರಿ ಆಹಾರವನ್ನು ನಾಯಿಯ ಬಾಯಿಯಲ್ಲಿ ಕಳುಹಿಸುವ ಮೂಲಕ ತನ್ನ ಆಗಮನವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.  

5 /5

5. ವಾಸ್ತು ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಮನೆಗೆ ಪ್ರವೇಶಿಸುವ ಮುನ್ನ ವ್ಯಕ್ತಿಗೆ ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಈ ಸಂಕೇತಗಳಲ್ಲಿ ಕೈಯಲ್ಲಿ ತುರಿಕೆ ಕೂಡ ಶಾಮೀಲಾಗಿದೆ. ವ್ಯಕ್ತಿಯ ಬಲಗೈಯಲ್ಲಿ ತುರಿಕೆ ಕಂಡುಬಂದರೆ, ವ್ಯಕ್ತಿಯ ಜೀವನದಲ್ಲಿ ಹಠಾತ್ ಧನಲಾಭ ಉಂಟಾಗಲಿದೆ ಎಂದರ್ಥ. ಮತ್ತೊಂದೆಡೆ, ಬೆಳಗ್ಗೆ ಕಣ್ಣು ತೆರೆದ ತಕ್ಷಣ ಶಂಖ ನಾದ ಕೇಳಿಬಂದರೆ, ಅದೂ ಕೂಡ ಸಂಪತ್ತಿನ ಆಗಮನದ ಸಂಕೇತವಾಗಿದೆ.