ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮದುವೆಯಾಗಿ 20 ವರ್ಷಗಳಾಗಿವೆ. ಎರಡು ದಶಕಗಳ ನಂತರ, ಈ ಖಾಸಗಿ ಸಮಾರಂಭದ ಫೋಟೋಗಳು ವೈರಲ್ ಆಗಿವೆ..
ನವದೆಹಲಿ : ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮದುವೆಯಾಗಿ 20 ವರ್ಷಗಳಾಗಿವೆ. ಈ ಸ್ಟಾರ್ ದಂಪತಿಗಳು 2021 ರ ಜನವರಿ 17 ರಂದು ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಎರಡು ದಶಕಗಳ ನಂತರ, ಈ ಖಾಸಗಿ ಸಮಾರಂಭದ ಫೋಟೋಗಳು ವೈರಲ್ ಆಗಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್, ತಮ್ಮ ಯಶಸ್ವಿ ವೈವಾಹಿಕ ಜೀವನದ ರಹಸ್ಯವನ್ನು ಬಹಿರಂಗಪಡಿಸಿದ್ದರು. 'ನಾವು ಪರಸ್ಪರರಲ್ಲಿ ಹೊಸ ಹೊಸ ವಿಷಯಗಳನ್ನು ಕಂಡುಕೊಳ್ಳುತ್ತೇವೆ ಎಂದಿದ್ದರು.
ಟ್ವಿಂಕಲ್ ಬಗ್ಗೆ ಮಾತನಾಡಿದ್ದ, ಅಕ್ಷಯ್, ಪತ್ನಿ ಟ್ವಿಂಕಲ್ ನನ್ನ ಉತ್ತಮ ಸ್ನೇಹಿತೆ ಎಂದು ಹೇಳಿದ್ದರು. ನಾನು ಬಿದ್ದಾಗ, ನನ್ನನ್ನು ಕೈ ಹಿಡಿದು ನಿಲ್ಲಿಸುತ್ತಾಳೆ ಎಂದಿದ್ದರು. ಅಲ್ಲದೆ, ನಾನು ನೋವಿನಲ್ಲಿದ್ದಾಗ ಸದಾ ನನ್ನ ಮುಖದ ಮೇಲೆ ನಗು ತರಿಸುವ ಪ್ರಯತ್ನ ಮಾಡುತ್ತಾಳೆ ಎಂದಿದ್ದರು. ನನ್ನ ನೋವಿನಲ್ಲು ನಗುವಿನಲ್ಲೂಸದಾ ಜೊತೆಗಿರುವ ಪತ್ನಿಯೇ ನನಗೆ ಜೀವನದಲ್ಲಿ ಎಲ್ಲವೂ ಎಂದಿದ್ದರು.
ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಮುಂಬೈನ ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಮನೆಯಲ್ಲಿ ವಿವಾಹವಾಗಿದ್ದರು.
ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅವರ ವಿವಾಹ ಸಮಾರಂಭದಲ್ಲಿ ಕೇವಲ 50 ಜನ ಮಾತ್ರ ಪಾಲ್ಗೊಂಡಿದ್ದರು. ಇದರಲ್ಲಿ ಅಮೀರ್ ಖಾನ್, ಚಲನಚಿತ್ರ ನಿರ್ಮಾಪಕ ಧರ್ಮೇಶ್ ದರ್ಶನ್ ಕೂಡಾ ಇದ್ದರು.
ಟ್ವಿಂಕಲ್ ಖನ್ನಾ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ, ಅಮೀರ್ ಖಾನ್ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ವಿವಾಹ ಸಮಾರಂಭವನ್ನು ವಿವರಿಸಿದ್ದರು. ಈ ಸಂದರ್ಭದಲ್ಲಿ ಅವರು, ಟ್ವಿಂಕಲ್ ತನ್ನ ಮದುವೆಯ ಸಮಾರಂಭದಲ್ಲಿ ತನ್ನನ್ನು ವಿಡಿಯೋಗ್ರಾಫರ್ ನನ್ನಾಗಿ ಮಾಡಿದ್ದರು ಎಂದು ಹೇಳಿದ್ದರು.
ಪೋಷಕರಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಜೊತೆ ನವವಿವಾಹಿತ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಅಪರೂಪದ ಫೋಟೋ ಇದಾಗಿದೆ.