Party City - ಡೈವರ್ಗಳು ಸಮುದ್ರದಾಳದಲ್ಲಿ ಇರುವ ಸುಮಾರು 2000 ವರ್ಷಗಳಷ್ಟು ಹಳೆಯ ಪಾರ್ಟಿ ಸಿಟಿಯನ್ನು ಕಂಡುಹಿಡಿದಿದ್ದಾರೆ. ಈ ಪಾರ್ಟಿ ಸಿಟಿಯ ಬಗ್ಗೆ ತಿಳಿದ ವಿಜ್ಞಾನಿಗಳೂ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಸಮುದ್ರದ ಅಡಿಯಲ್ಲಿ ಕಂಡುಬರುವ ಈ ಪಾರ್ಟಿ ಸಿಟಿಯನ್ನು ರೋಮನ್ ಕಾಲದ ಪಾರ್ಟಿ ಸಿಟಿ (Roman Party City) ಎಂದು ಹೇಳಲಾಗುತಿದೆ.
Party City - ಡೈವರ್ಗಳು ಸಮುದ್ರದಾಳದಲ್ಲಿ ಇರುವ ಸುಮಾರು 2000 ವರ್ಷಗಳಷ್ಟು ಹಳೆಯ ಪಾರ್ಟಿ ಸಿಟಿಯನ್ನು ಕಂಡುಹಿಡಿದಿದ್ದಾರೆ. ಈ ಪಾರ್ಟಿ ಸಿಟಿಯ ಬಗ್ಗೆ ತಿಳಿದ ವಿಜ್ಞಾನಿಗಳೂ (Scientists) ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಸಮುದ್ರದ ಅಡಿಯಲ್ಲಿ ಕಂಡುಬರುವ ಈ ಪಾರ್ಟಿ ಸಿಟಿಯನ್ನು ರೋಮನ್ ಕಾಲದ ಪಾರ್ಟಿ ಸಿಟಿ (Roman Party City) ಎಂದು ಹೇಳಲಾಗುತಿದೆ. ಇಂತಹ ಹಲವು ಪುರಾವೆಗಳು ಈ ಪಾರ್ಟಿ ಸಿಟಿಯಲ್ಲಿ ದೊರೆತಿವೆ ಎಂದರೆ ಈ ಪಾರ್ಟಿ ಸಿಟಿಯು ಸಾವಿರಾರು ವರ್ಷಗಳಷ್ಟು ಹಳೆಯದಾಗಿದೆ. ಸಮುದ್ರದಡಿಯಲ್ಲಿ ಕಂಡುಬಂದಿರುವ ಈ ಪಾರ್ಟಿ ಸಿಟಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-Business Ideas: ಕೇವಲ ರೂ.5000 ಹೂಡಿಕೆ ಮಾಡಿ ಲಕ್ಷಾಂತರ ಆದಾಯ ನೀಡುವ ಬಿಸನೆಸ್! ಸರ್ಕಾರ ಕೂಡ ಸಹಾಯ ಮಾಡುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. Real Life Atlantis - ಸಮುದ್ರದಾಳದಲ್ಲಿ ದೊರೆತ ರೋಮನ್ ಕಾಲದ ಪಾರ್ಟಿ ಸಿಟಿ - ಡೈಲಿ ಸ್ಟಾರ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಮುದ್ರದಲ್ಲಿ ಮುಳುಗಿರುವ 2,000 ವರ್ಷಗಳಷ್ಟು ಹಳೆಯದಾದ ಪಾರ್ಟಿ ಸಿಟಿಯು ಯುರೋಪಿಯನ್ ದೇಶವಾದ ಇಟಲಿಯ (Italy) ಬೈಯೆ (Baiae) ಬಳಿ ಪತ್ತೆಯಾಗಿದೆ. ಈ ಪಾರ್ಟಿ ಸಿಟಿಯು ರೋಮನ್ ಕಾಲದ ನಗರ ಎಂದು ಹೇಳಲಾಗುತ್ತಿದೆ.
2. Viral News - ಈ ಪಾರ್ಟಿ ಸಿಟಿಯಲ್ಲಿ ಸಕಲ ವ್ಯವಸ್ಥೆಗಳಿದ್ದವು - ರೋಮನ್ ಕಾಲದ ಪ್ರಬಲ ವ್ಯಕ್ತಿಗಳು ಈ ಪಾರ್ಟಿ ಸಿಟಿಯಲ್ಲಿ ಪಾರ್ಟಿ ಮಾಡುತ್ತಿದ್ದರು ಎಂದು ನಂಬಲಾಗಿದೆ. ಅದರಲ್ಲಿ ಎಲ್ಲಾ ರೀತಿಯ ಐಷಾರಾಮಿ ವ್ಯವಸ್ಥೆಗಳಿವೆ.
3. Trending News - ಈ ಪಾರ್ಟಿ ಸಿಟಿಯಲ್ಲಿ ಸಾಮ್ರಾಟ ನಿರೋನ ಹತ್ಯೆಗೆ ಸಂಚು ರೂಪಿಸಲಾಗಿತ್ತು - ನೀರೋ ಚಕ್ರವರ್ತಿಯನ್ನು ಕೊಲ್ಲಲು ಸೆನೆಟರ್ ಗೈಸ್ ಕ್ಯಾಲ್ಪುರ್ನಿಯಸ್ ಪಿಸೊ ಸಂಚು ರೂಪಿಸಿದ್ದು ಇದೆ ಸಮುದ್ರದಾಳದ ಪಾರ್ಟಿ ಸಿಟಿಯಲ್ಲಿ ಎಂದು ಹೇಳಲಾಗುತ್ತದೆ.
4. World News - ಈ ಪಾರ್ಟಿ ಸಿಟಿಯ ಹತ್ತಿರ ಈ ಚಕ್ರವರ್ತಿಗಳ ಮನೆಗಳಿದ್ದವು - ಚಕ್ರವರ್ತಿ ಅಗಸ್ಟಸ್, ಚಕ್ರವರ್ತಿ ನೀರೋ, ಚಕ್ರವರ್ತಿ ಕ್ಯಾಲಿಗುಲಾ ಅವರ ಅರಮನೆಗಳು ಬೈಯೆಯಲ್ಲಿದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಬೈಯೇ ಹತ್ತಿರದಲ್ಲಿಯೇ ಈ ಪಾರ್ಟಿ ಸಿಟಿ ಸಮುದ್ರದಲ್ಲಿ ಕಂಡುಬಂದಿದೆ.
5. Weird News - ಪಾರ್ಟಿ ಸಿಟಿ ಏಕೆ ಹಾಳಾಯಿತು? - ಜ್ವಾಲಾಮುಖಿ ಸ್ಫೋಟದಿಂದಾಗಿ ಈ ಪಾರ್ಟಿ ಸಿಟಿ ಸಮುದ್ರದ ಆಳದಲ್ಲಿ ಮುಳುಗಿಹೋಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪಾರ್ಟಿ ಸಿಟಿಯಲ್ಲಿ ಅನೇಕ ಮುರಿದ ಗೋಡೆಗಳು ಮತ್ತು ಮನೆಗಳು ಕಂಡುಬಂದಿವೆ. ಇದಲ್ಲದೇ ಅನೇಕ ಶಿಲ್ಪಗಳೂ ದೊರೆತಿವೆ.