Beauty Tips: ಸುಂದರವಾದ ತ್ವಚೆ ನಿಮ್ಮದಾಗಲು ಎಲೆಕೋಸನ್ನು ಈ ರೀತಿ ಬಳಸಿ

                               

Beauty Tips:  ಇನ್ನೇನು ಕೆಲವೇ ತಿಂಗಳಲ್ಲಿ ಚಳಿಗಾಲ ಆರಂಭವಾಗಲಿದೆ. ಚಳಿಗಾಲದಲ್ಲಿ ಚರ್ಮ ಬೇಗ ಡ್ರೈ ಆಗುತ್ತದೆ. ಹಾಗಾಗಿ ಚರ್ಮದ ರಕ್ಷಣೆಗೆ ಒತ್ತು ನೀಡುವುದು ಅಗತ್ಯವಾಗಿದೆ. ಸಾಮಾನ್ಯವಾಗಿ, ಚಳಿಗಾಲದಲ್ಲಿ ಎಲೆಕೋಸನ್ನು ಹೆಚ್ಚು ಬಳಸಲಾಗುತ್ತದೆ. ಆದರೆ ನೀವು ಎಲೆಕೋಸನ್ನು ತಿನ್ನುವುದರ ಜೊತೆಗೆ ನಿಮ್ಮ ಸೌಂದರ್ಯ ವೃದ್ದಿಗಾಗಿ ಕೂಡ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಎಲೆಕೋಸು ಚರ್ಮಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಎಲೆಕೋಸು ಬಹಳಷ್ಟು ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಸುಂದರವಾದ ತ್ವಚೆ ಪಡೆಯಲು ಎಲೆಕೋಸನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸುಂದರ ತ್ವಚೆಗಾಗಿ ಎಲೆಕೋಸನ್ನು ಮಾಸ್ಕ್ ಆಗಿ ಬಳಸಿ: ಎಲೆ ಕೋಸಿನ ಸ್ಕಿನ್ ಕೇರ್ ಮಾಸ್ಕ್ (Skin Care Mask) ತಯಾರಿಸಲು ಮೊದಲು ಎಲೆಕೋಸಿನ ಪೇಸ್ಟ್ ತಯಾರಿಸಿ. ನಂತರ ಇದಕ್ಕೆ ಮೊಟ್ಟೆ, ಜೇನು, ಕಡಲೆಹಿಟ್ಟು, ನಿಂಬೆ ರಸ ಎಲ್ಲವನ್ನೂ ಮಿಶ್ರಣ ಮಾಡಿ. ಬಳಿಕ ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಚೆನ್ನಾಗಿ ಹಚ್ಚಿ. ಈ ಮಾಸ್ಕ್ ಅನ್ನು ಒಣಗಲು ಬಿಡಿ. ಸುಮಾರು 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ವಾರಕ್ಕೆ ಎರಡರಿಂದ ಮೂರು ಬಾರಿ ಎಲೆಕೋಸನ್ನು ಈ ರೀತಿ ಬಳಸಬಹುದು.  

2 /4

ಎಣ್ಣೆಯುಕ್ತ ಚರ್ಮಕ್ಕಾಗಿ ಎಲೆಕೋಸು ಬಹಳ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ಮೊದಲು ಎಲೆಕೋಸಿನ ಪೇಸ್ಟ್ ತಯಾರಿಸಿ. ನಂತರ ಇದಕ್ಕೆ ಮೊಟ್ಟೆಯ ಬಿಳಿಯ ಭಾಗ ಮತ್ತು ಕೆಲವು ಹನಿ ನಿಂಬೆ ಹಣ್ಣಿನ ರಸವನ್ನು (Lemon Juice) ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ. ಬಳಿಕ ಇದನ್ನು ಮುಖಕ್ಕೆ ಹಚ್ಚಿ. 15-20 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ. ನಂತರ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಇದನ್ನೂ ಓದಿ- Morning walk : ಬೆಳಗಿನ ವಾಕಿಂಗ್ ನಲ್ಲಿ ನೀವು ಈ ತಪ್ಪು ಮಾಡುತ್ತೀರಾ? ಹಾಗಿದ್ರೆ, ನಿಮಗೆ ಈ ಸಮಸ್ಯೆ ತಪ್ಪಿದಲ್ಲ!

3 /4

ಮೊಡವೆಗಳು, ಕಪ್ಪು ಕಲೆ ನಿವಾರಣೆಗೆ ಎಲೆಕೋಸಿನ ರಸ: ಎಲೆಕೋಸಿನ ರಸವು ಮುಖದ ಮೇಲೆ ಸಾಮಾನ್ಯವಾಗಿ ಮೂಡುವ ಮೊಡವೆ (Pimples), ಅದರಿಂದ ಉಂಟಾಗುವ ಕಪ್ಪು ಕಲೆಗಳ ನಿವಾರಣೆಗೆ ಬಹಳ ಪ್ರಯೋಜನಕಾರಿ ಆಗಿದೆ. ಎಲೆಕೋಸಿನ ರಸವನ್ನು ನಿಯಮಿತವಾಗಿ ಬಳಸುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಇದನ್ನೂ ಓದಿ- ದಿನಕ್ಕೆ ಎಷ್ಟು ಕಪ್ Green Tea ಕುಡಿಯಬೇಕು? ಕುಡಿಯಲು ಸರಿಯಾದ ಸಮಯ ಯಾವುದು? ಇಲ್ಲಿ ತಿಳಿಯಿರಿ

4 /4

ಎಲೆಕೋಸಿನ ರಸದ ಪ್ರಯೋಜನಗಳು (Benefits of Cabbage Juice): ಎಲೆಕೋಸಿನ ರಸವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಚರ್ಮದ ಸಮಸ್ಯೆಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)