Mercury Transit 2021: ನಾಳೆ ಬುಧನ ರಾಶಿ ಪರಿವರ್ತನೆ, ಈ ನಾಲ್ಕು ರಾಶಿಗಳಿಗೆ ಭಾಗ್ಯೋದಯದ ಸಂಕೇತ

Mercury Transit 2021 - ನಾಳೆ ಮೇ ತಿಂಗಳ ಮೊದಲ ದಿನ. ಈ ದಿನ ಬುಧ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ (Budh Grah Gochar 2021). ಈ ರಾಶಿಯಲ್ಲಿ ಬುಧ ಮೇ 26ರವರೆಗೆ ಇರಲಿದ್ದಾನೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಮಿಥುನ ಹಾಗೂ ಕನ್ಯಾ ರಾಶಿಗಳಿಗೆ ಅಧಿಪತಿ. 

ನವದೆಹಲಿ: Mercury Transit 2021 - ನಾಳೆ ಮೇ ತಿಂಗಳ ಮೊದಲ ದಿನ. ಈ ದಿನ ಬುಧ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ (Budh Grah Gochar 2021). ಈ ರಾಶಿಯಲ್ಲಿ ಬುಧ ಮೇ 26ರವರೆಗೆ ಇರಲಿದ್ದಾನೆ. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಮಿಥುನ ಹಾಗೂ ಕನ್ಯಾ ರಾಶಿಗಳಿಗೆ ಅಧಿಪತಿ. ಇದಲ್ಲದೆ ಮೀನ ಹಾಗೂ ಕನ್ಯಾ ರಾಶಿಯಲ್ಲಿ ಬುಧ ಉಚ್ಛ ಭಾವದಲ್ಲಿರುತ್ತಾನೆ. ಹೀಗಾಗಿ ಬುಧನ ವೃಷಭ ರಾಶಿ ಗೋಚರ ಎಲ್ಲಾ 12 ರಾಶಿಗಳ (Effect On Zodiac Signs) ಮೇಲೆ ಪ್ರಭಾವ ಬೀರುತ್ತದೆ. ಬುಧನ ಈ ನಡೆಯಿಂದ ಕೆಲ ರಾಶಿಗಳ (Rashifal Predictions)ಭಾಗ್ಯ ಉದಯಿಸಲಿದೆ.

 

ಇದನ್ನೂ ಓದಿ- ಹಣಕಾಸಿನ ಸಮಸ್ಯೆಯಾಗಲಿ, ಸಂಬಂಧದ ನಡುವಿನ ಬಿಕ್ಕಟ್ಟಾಗಲಿ ಚಿಟಿಕೆ ಅರಶಿನದಲ್ಲಿದೆ ಎಲ್ಲದಕ್ಕೂ ಪರಿಹಾರ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /7

1. ಮೇಷ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಧನಲಾಭದ ಯೋಗ ಇದೆ. ಕೌಟುಂಬಿಕ ಜೀವನದಲ್ಲಿ ಸಂಬಂಧಗಳಲ್ಲಿ ಮಧುರತೆ ಬರಲಿದೆ. ವಿಪರೀತ ಪರಿಸ್ಥಿತಿಯಲ್ಲಿ ಸುಲಭವಾಗಿ ನಿಯಂತ್ರಣ ಸಾಧಿಸುವಿರಿ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಒಂದು ವರದಾನವಾಗಿದೆ.

2 /7

2. ವೃಷಭ: ನೌಕರಿಯಲ್ಲಿ ಬಡ್ತಿಯ ಯೋಗ, ಗೌರವ-ಕೀರ್ತಿ ಹೆಚ್ಚಾಗಲಿದೆ, ಕಂಕಣಬಲ ಕೂಡಿ ಬರಲಿದೆ. ನಿರ್ಣಯ ತೆಗೆದುಕೊಳ್ಳುವಲ್ಲಿ ವಿಳಂಬ ಧೋರಣೆ ಉಚಿತವಲ್ಲ. ಏಕೆಂದರೆ ಇದರಿಂದ ನಿಮಗೆ ಹಾನಿಯಾಗುವ ಸಾಧ್ಯತೆ ಇದೆ.

3 /7

3. ಕರ್ಕ:  ಧನಲಾಭದ ಸಾಧ್ಯತೆ. ವ್ಯಾಪಾರ ಹಾಗೂ ನೌಕರಿಯಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿವೆ. ಹೊಸ ವ್ಯಾಪಾರ ಆರಂಭಿಸಲು ಈ ಸಮಯ ತುಂಬಾ ಉತ್ತಮವಾಗಿದೆ. ಕೌಟುಂಬಿಕ ಜೀವನದಲ್ಲಿ ಪ್ರೇಮ ತುಂಬಿಕೊಳ್ಳಲಿದೆ. ಕುಟುಂಬ ಸದಸ್ಯರ ಸಹಯೋಗ ಸಿಗಲಿದೆ.  

4 /7

4. ಸಿಂಹ: ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಮನೆ-ವಾಹನ ಖರೀದಿಸುವ ಯೋಗ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ತುಂಬಾ ಉತ್ತಮವಾಗಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

5 /7

5.ಕನ್ಯಾ: ಕನ್ಯಾ ರಾಶಿಯ ಜನರ ಭಾಗ್ಯ ಉದಯಿಸಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ದಾನ-ಪುಣ್ಯ ಪ್ರಾಪ್ತಿಯ ಅವಕಾಶ ಸಿಗಲಿದೆ. ನಿಮ್ಮಿಂದ ನೆರವೇರಿದ ಕಾರ್ಯಗಳ ಶ್ಲಾಘನೆಯಾಗಲಿದೆ. ಕಾರ್ಯಗಳಲ್ಲಿ ಸಫಲತೆಯ ಯೋಗ ಗೋಚರಿಸುತ್ತಿದೆ. ಈ ಸಮಯ ನಿಮ್ಮ ಪಾಲಿಗೆ ತುಂಬಾ ಶುಭವಿರಲಿದೆ.

6 /7

6. ವೃಶ್ಚಿಕ: ವೃಶ್ಚಿಕ ಜಾತಕದ ಜನರಿಗೆ ಬುಧನ ರಾಶಿ ಪರಿವರ್ತನೆ (Mercury Transit) ಯಾವುದೇ ವರದಾನಕ್ಕಿಂತ ಕಮ್ಮಿ ಇಲ್ಲ. ವ್ಯಾಪಾರದಲ್ಲಿ ಲಾಭದ ಸಂಕೇತ, ಹೊಸ ಕಾರ್ಯಾರಂಭಕ್ಕೆ ಉತ್ತಮ ಸಮಯ. ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ.

7 /7

7. ಮಕರ: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾಲಿಗೆ ಸಮಯ ಉತ್ತಮವಾಗಿರಲಿದೆ. ನಿಮ್ಮಿಂದ ನೆರವೇರಿದ ಕಾರ್ಯಗಳಿಗೆ ಶ್ಲಾಘನೆ ವ್ಯಕ್ತವಾಗಲಿದೆ. ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹೊಸ ಕಾರ್ಯ ಆರಂಭಿಸಲು ಸಮಯ ಉತ್ತಮವಾಗಿದೆ.