ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಮಧುಮೇಹವನ್ನು ನಿಯಂತ್ರಿಸಬಹುದು. ಅದರ ಸಹಾಯದಿಂದ ಮಧುಮೇಹಿಗಳು ಹಬ್ಬದ ಋತುವಿನಲ್ಲಿ ತಮ್ಮ ಕಾಳಜಿ ವಹಿಸಿಕೊಳ್ಳಬಹುದು.
ಬೆಂಗಳೂರು : ಹೊಸ ವರ್ಷದ ಪಾರ್ಟಿ ಮಾಡುವಾಗ ಮಧುಮೇಹದಂತಹ ಕಾಯಿಲೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೆ, ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ಸವಿಯುವುದನ್ನು ತಡೆಯಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು ಮತ್ತು ಇತರ ರೀತಿಯ ಸಮಸ್ಯೆಗಳು ಉಂಟಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವ ಮೂಲಕ, ಮಧುಮೇಹವನ್ನು ನಿಯಂತ್ರಿಸಬಹುದು. ಅದರ ಸಹಾಯದಿಂದ ಮಧುಮೇಹಿಗಳು ಹಬ್ಬದ ಋತುವಿನಲ್ಲಿ ತಮ್ಮ ಕಾಳಜಿ ವಹಿಸಿಕೊಳ್ಳಬಹುದು.
ನಿಮ್ಮ ಆಹಾರದ ಪ್ಲಾನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ಹಬ್ಬ ಹರಿದಿನಗಳ ಆಗಮನಕ್ಕೆ ಮುನ್ನ ನಿಮ್ಮ ಪೌಷ್ಟಿಕತಜ್ಞರ ಸಲಹೆಯಂತೆ ಡಯಟ್ ಪ್ಲಾನ್ ತಯಾರಿಸಿ.
ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಿ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಯಾವುದೇ ಬದಲಾವಣೆಯಾದರೆ ವೈದ್ಯರಿಗೆ ತಿಳಿಸಿ.
ಪಾರ್ಟಿ, ಊಟದ ನಂತರ ಸ್ವಲ್ಪ ಸಮಯ ನಡೆಯಿರಿ. ಹೀಗಾದಾಗ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ತೂಕ ನಷ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು, ಕಾಲಕಾಲಕ್ಕೆ ಆಹಾರವನ್ನು ಸೇವಿಸಬೇಕು.