ಉತ್ತಮ ಸ್ನೇಹಿತರಾಗಿ ಸಾಬೀತಾಗುತ್ತಾರೆ ಈ ರಾಶಿಯವರು ..!

ಈ ರಾಶಿಯವರು ಸ್ನೇಹವನ್ನು ಉಳಿಸಲು ಏನು ಬೇಕಾದರೂ ಮಾಡುತ್ತಾರೆ. ಇಂಥವರ ಸ್ನೇಹವನ್ನು ಪಡೆಯುವು ಅದೃಷ್ಟವೆಂದೇ ಹೇಳಲಾಗುತ್ತದೆ.  
 

ಬೆಂಗಳೂರು : ಜೀವನದಲ್ಲಿ ಒಳ್ಳೆಯ ಸ್ನೇಹಿತರನ್ನು ಪಡೆಯುವುದು ಅದೃಷ್ಟವೇ ಸರಿ. ಕೆಲವು ಜನರು ತುಂಬಾ ಪ್ರಾಮಾಣಿಕವಾಗಿ ಮತ್ತು ಯಾವಾಗಲೂ ಸ್ನೇಹಪರರಾಗಿರುತ್ತಾರೆ.  ಜ್ಯೋತಿಷ್ಯದಲ್ಲಿ, 5 ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವವರು ಉತ್ತಮ ಸ್ನೇಹಿತರಾಗುವ ಗುಣವನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ.  ಈ ರಾಶಿಯವರು ಸ್ನೇಹವನ್ನು ಉಳಿಸಲು ಏನು ಬೇಕಾದರೂ ಮಾಡುತ್ತಾರೆ. ಇಂಥವರ ಸ್ನೇಹವನ್ನು ಪಡೆಯುವು ಅದೃಷ್ಟವೆಂದೇ ಹೇಳಲಾಗುತ್ತದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಮಕರ ರಾಶಿಯವರ ಸ್ನೇಹಿತರ ಸಂಖ್ಯೆ ತುಂಬಾ ಕಡಿಮೆ, ಆದರೆ ಯಾರೊಂದಿಗಾದರೂ ಇವ್ರು ಸ್ನೇಹ ಬೆಳೆಸಿದರೆ ಅವರನ್ನು ಅದೃಷ್ಟವಂತರೆಂದೇ ಹೇಳಬೇಕು.  ಈ ಜನರೊಂದಿಗೆ ಸ್ನೇಹ ಬೆಳೆಸುವುದು ತುಂಬಾ ಒಳ್ಳೆಯದು. ಈ ರಾಶಿಯವರು ಎಂಥ ಪರಿಸ್ಥಿತಿಯಲ್ಲಿಯೂ ತಮ್ ಸ್ನೇಹವನ್ನು ಬಿಟ್ಟುಕೊಡುವುದಿಲ್ಲ.  ವೃಷಭ, ಮಿಥುನ, ಕನ್ಯಾ, ತುಲಾ ಮತ್ತು ಕುಂಭ ರಾಶಿಯವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. 

2 /5

ಕರ್ಕಾಟಕ ರಾಶಿಯ ಜನರು ತಮ್ಮ  ಸ್ನೇಹಿತರನ್ನು ಅತಿಯಾಗಿ ಪ್ರೀತಿಸುತ್ತಾರೆ. ಅವರು ಬಹಳ ಶ್ರದ್ಧೆಯಿಂದ ಸ್ನೇಹವನ್ನು ನಿಭಾಯಿಸುತ್ತಾರೆ. ಇವರು ಭಾವನಾತ್ಮಕವಾಗಿರುತ್ತಾರೆ. 

3 /5

ಸಿಂಹ ರಾಶಿಯ ಜನರು ಬಹಳ ಮಂದಿ ಸ್ನೇಹಿತರನ್ನು ಹೊಂದಿರುತ್ತಾರೆ. ಅವರು ಸ್ನೇಹಿತರಿಗಾಗಿ ಸಾಕಷ್ಟು ಖರ್ಚು ಮಾಡುತ್ತಾರೆ.  ಸ್ನೇಹಿತನಿಗೆ ತೊಂದರೆಯಾಗದಂತೆ ತಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಸಿಂಹ ರಾಶಿಯವರು ಮೇಷ, ಕರ್ಕ, ಮಿಥುನ, ವೃಶ್ಚಿಕ, ಧನು, ಕನ್ಯಾ ಮತ್ತು ಮೀನ ರಾಶಿಯವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿರುತ್ತಾರೆ. 

4 /5

ಮಿಥುನ ರಾಶಿಯ ಜನರು ಅತ್ಯಂತ ವಿಶ್ವಾಸಾರ್ಹ ಸ್ನೇಹಿತರು. ನಿಮ್ಮ ಎಲ್ಲಾ ರಹಸ್ಯಗಳನ್ನು  ಅವರೊಂದಿಗೆ ಹಂಚಿಕೊಳ್ಳಬಹುದು. ಸ್ನೇಹಿತನಿಗೆ ಸ್ವಲ್ಪ ಕಷ್ಟವಾದರೂ ಇವರು ಸಹಿಸುವುದಿಲ್ಲ.ಕನ್ಯಾ, ಸಿಂಹ, ತುಲಾ, ವೃಶ್ಚಿಕ ಮತ್ತು ಮಿಥುನ ರಾಶಿಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇದಲ್ಲದೇ ವೃಷಭ ರಾಶಿಯವರೊಂದಿಗೂ ಚೆನ್ನಾಗಿ ಬೆರೆಯುತ್ತಾರೆ.   

5 /5

ವೃಷಭ ರಾಶಿಯ ಜನರು ಉತ್ತಮ ಸ್ನೇಹಿತರೆಂದು ಸಾಬೀತುಪಡಿಸುತ್ತಾರೆ. ಅವನು ತನ್ನ ಸ್ನೇಹಿತನ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಯಾವಾಗಲೂ ಅವನನ್ನು ಬೆಂಬಲಿಸುತ್ತಾನೆ.  ಸ್ನೇಹವನ್ನು ಕಾಪಾಡಿಕೊಳ್ಳಲು ಯಾವುದೇ ಹಂತಕ್ಕೆ ಹೋಗುತ್ತಾರೆ.  ಈ ಜನರು ಮಿಥುನ, ಕನ್ಯಾರಾಶಿ ಮತ್ತು ಮಕರ ರಾಶಿಯವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.  ( ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)