ಈ ಐದು ಸೂಪರ್ ಹಿಟ್ ಫಿಲಂಗಳನ್ನು ತಿರಸ್ಕರಿಸಿದ ನಟ ನಟಿಯರು ಇವರೇ ..!

ಬೇರೆ ಬೇರೆ ಕಾರಣಗಳಿಂದ ಕಳೆದ ವರ್ಷಗಳಲ್ಲಿ ಬಾಲಿವುಡ್‌ನ ದೊಡ್ಡ ಹಿಟ್‌ಗಳನ್ನು ತಿರಸ್ಕರಿಸಿದ ನಟ ನಟಿಯರ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ಬೆಂಗಳೂರು : ಭಾರತದಲ್ಲಿ ಚಲನಚಿತ್ರಗಳು ಮತ್ತು ಚಲನಚಿತ್ರ ತಾರೆಯರ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಬಿಡುಗಡೆಯಾದ ಚಿತ್ರ ನಮಗೆ ಇಷ್ಟವಾದರೆ ಆ ಚಿತ್ರದ ಪ್ರಮುಖ ಪಾತ್ರದಲ್ಲಿ ಬೇರೆ  ನಟ- ನಟಿಯರನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ. ಬೇರೆ ಬೇರೆ ಕಾರಣಗಳಿಂದ ಕಳೆದ ವರ್ಷಗಳಲ್ಲಿ ಬಾಲಿವುಡ್‌ನ ದೊಡ್ಡ ಹಿಟ್‌ಗಳನ್ನು ತಿರಸ್ಕರಿಸಿದ ನಟ ನಟಿಯರ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ನಟ ನಟಿಯರು ಸೂಪರ್ ಹಿಟ್ ಚಿತ್ರಗಳನ್ನು ತಿರಸ್ಕರಿಸಿದ ಕಾರಣ ಆ ಅವಕಾಶ ಬೇರೆಯವರ ಪಾಲಾಗುವಂತಾಯಿತು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಯೇ ಜವಾನಿ ಹೈ ದೀವಾನಿ: ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಜೊತೆಗೆ ಅಯಾನ್ ಮುಖರ್ಜಿ ಅವರ ಚಲನಚಿತ್ರ ಯೇ ಜವಾನಿ ಹೈ ದೀವಾನಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಮೊದಲು ನೈನಾ ಪಾತ್ರವನ್ನು ಕತ್ರಿನಾ ಕೈಫ್‌ಗೆ ಆಫರ್ ಮಾಡಲಾಗಿತ್ತು. ವರದಿಗಳ ಪ್ರಕಾರ, ಕತ್ರಿನಾ ಮತ್ತು ರಣಬೀರ್ ಅವರ ಹದಗೆಡುತ್ತಿರುವ ಸಂಬಂಧ ಮತ್ತು ಡೇಟ್ಸ್ ಇಲ್ಲದ ಕಾರಣ ಕತ್ರಿನಾ ಈ ಚಿತ್ರವನ್ನು ಮಾಡುವುದು ಸಾಧ್ಯವಾಗಲಿಲ್ಲ.

2 /5

ಮುನ್ನಾಭಾಯ್ ಎಂಬಿಬಿಎಸ್: ಮುನ್ನಾಭಾಯ್ ಎಂಬಿಬಿಎಸ್  ಚಿತ್ರವನ್ನು ಕೂಡಾ ಮೊದಲು ಸಂಜಯ್ ದತ್ ಬದಲು ವಿವೇಕ್ ಒಬೆರಾಯ್ ಅವರಿಗೆ ಆಫರ್ ಮಾಡಲಾಗಿತ್ತು. ವಿವೇಕ್ ಒಬೆರಾಯ್ ಮುರಳಿ ಪ್ರಸಾದ್ ಶರ್ಮಾ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಮ್ಯಾಚ್ ಆಗದ ಕಾರಣ  ವಿವೇಕ್ ಒಬೆರಾಯ್ ಈ ಚಿತ್ರವನ್ನು ಕೈ ಬಿಡುವಂತಾಯಿತು.   

3 /5

ಅಂದಾಧುನ್: ಆಯುಷ್ಮಾನ್ ಖುರಾನಾ ಅವರ ಅತ್ಯಂತ ಅದ್ಭುತವಾದ ಚಿತ್ರವಾದ  ಅಂದಾಧುನ್ ಅನ್ನು ಮೊದಲು ಅನಿಲ್ ಕಪೂರ್ ಅವರ ಮಗ ಹರ್ಷವರ್ಧನ್ ಕಪೂರ್ ಅವರಿಗೆ ನೀಡಲಾಯಿತು. ಬೇರೆ ಯೋಜನೆಗಳಿಂದಾಗಿ ಅವರು ಈ ಚಿತ್ರವನ್ನು ತಿರಸ್ಕರಿಸಿದರು. 

4 /5

ಪಿಕು: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಪಿಕು ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರವನ್ನು ಮೊದಲು ಪರಿಣಿತಿ ಚೋಪ್ರಾಗೆ ನೀಡಲಾಯಿತು. ಕೆಲವು ಕಾರಣಗಳಿಂದ ಈ ಚಿತ್ರದಲ್ಲಿ ನಟಿಸುವುದು  ಪರಿಣಿತಿ ಚೋಪ್ರಾಗೆ   ಸಾಧ್ಯವಾಗಲಿಲ್ಲ.

5 /5

ರಾಮ್ ಲೀಲಾ: ಸಂಜಯ್ ಲೀಲಾ ಬನ್ಸಾಲಿಯವರ ಅತ್ಯುತ್ತಮ ಚಿತ್ರ, ರಾಮ್ ಲೀಲಾವನ್ನು ಮೊದಲು ರಣಬೀರ್ ಕಪೂರ್ ಗೆ ಆಫರ್ ಮಾಡಲಾಗಿತ್ತು. ಆದರೆ ನಂತರ ರಣವೀರ್ ಸಿಂಗ್ ಈ ಚಿತ್ರದಲ್ಲಿ ನಟಿಸಿದರು. ನಂತರ ಇದು ಬಹು ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿತು.