Weird Tradition: ಈ ಮಹಿಳೆಯರು ಬಟ್ಟೆ ಒಗೆಯಲ್ಲ, ನೀರು ಮುಟ್ಟಲ್ಲ, ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ! ಕಾರಣವೇನು?

Weird Tradition: ಒಂದು ತಿಂಗಳು ಸ್ನಾನ ಮಾಡದೆ ಬದುಕಬೇಕು ಎಂದರೆ ಸಾಮಾನ್ಯವಾಗಿ ಯಾರೂ ಸಿದ್ಧರಿರಲಿಕ್ಕಿಲ್ಲ. ಇನ್ನು ಸ್ನಾನಕ್ಕೆ ಸಂಬಂಧಿಸಿದ ಕೆಲವು ಸಂಪ್ರದಾಯವಿದೆ ಎಂದರೆ ನೀವು ನಂಬಲೇಬೇಕು. ಪ್ರಪಂಚದಾದ್ಯಂತ ಅಂತಹ ಅನೇಕ ತರಹದ ಸಂಪ್ರದಾಯಗಳಿವೆ. ಅದರ ಬಗ್ಗೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ತಮ್ಮ ಸಂಪ್ರದಾಯಗಳು, ಪದ್ಧತಿಗಳು ಮತ್ತು ಆಚರಣೆಗಳಿಗಾಗಿ ಜೀವನವನ್ನು ಪಣಕ್ಕಿಡುವ ಇಂತಹ ಅನೇಕ ಬುಡಕಟ್ಟುಗಳು ಜಗತ್ತಿನಲ್ಲಿವೆ. ಬುಡಕಟ್ಟು ಜನಾಂಗದ ಮಹಿಳೆಯರು ತಮ್ಮ ಇಡೀ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಸಂಪ್ರದಾಯದ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ. ಅದು ಕೂಡ ಅವರ ಮದುವೆಯ ದಿನದಂದು ಮಾತ್ರ. ಇಲ್ಲಿನ ಹೆಂಗಸರು, ಹೆಣ್ಣುಮಕ್ಕಳು ಜೀವನ ಪರ್ಯಂತ ಸ್ನಾನ ಮಾಡದೇ ಬದುಕುತ್ತಾರೆ.

1 /5

ಜಗತ್ತಿನಲ್ಲಿ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಜೀವನದಲ್ಲಿ ಸ್ನಾನವೇ ಮಾಡದೆ ಬದುಕಲು ಸಾಧ್ಯವೇ? ಎಂಬ ಪ್ರಶ್ನೆ ನಮಗೆಲ್ಲರಿಗೂ ಮೂಡುತ್ತದೆ. ಹೀಗಿರುವಾಗ ಇದಕ್ಕೆ ಉತ್ತರ ಹೌದು. ಈ ವಿಚಾರ ಕೇಳಿದಾಗ ಶಾಕ್ ಆಗಬಹುದು. ಆದರೆ ಇದು ಸತ್ಯ.

2 /5

ಒಂದು ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಸಂಪ್ರದಾಯವಿದೆ. ಉತ್ತರ ನಮೀಬಿಯಾದಲ್ಲಿ ಹಿಂಬಾ ಬುಡಕಟ್ಟು ಇದ್ದು, ಸುಮಾರು 50,000 ಜನಸಂಖ್ಯೆಯನ್ನು ಹೊಂದಿದ ಜನಾಂಗವಾಗಿದೆ.  ಈ ಕುನೆನೆ ಪ್ರದೇಶವು (ಈಗಿನ ಕಾಕೋಲ್ಯಾಂಡ್) ಅಂಗೋಲಾದ ಕುನೆನೆ ನದಿಯ ಇನ್ನೊಂದು ಬದಿಯಲ್ಲಿದೆ.

3 /5

ಹಿಂಬಾ ಬುಡಕಟ್ಟಿನ ಮಹಿಳೆಯರು ಸ್ನಾನದ ಬದಲಿಗೆ ವಿಶೇಷ ಗಿಡಮೂಲಿಕೆಗಳನ್ನು ಬಳಸುತ್ತಾರೆ. ಅದರ ಹೊಗೆಯಿಂದ ತಮ್ಮ ದೇಹವನ್ನು ತಾಜಾವಾಗಿರಿಸಿಕೊಳ್ಳುತ್ತಾರೆ. ಈ ಗಿಡಮೂಲಿಕೆಯು ಅವರ ದೇಹಕ್ಕೆ ಉತ್ತಮ ವಾಸನೆಯನ್ನು ನೀಡುತ್ತದೆ. ಇದು ರೋಗಾಣುಗಳನ್ನು ನಾಶಪಡಿಸುತ್ತದೆ.

4 /5

ಈ ಮಹಿಳೆಯರು ಮದುವೆಯ ಸಮಯದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ವಾಸ್ತವವಾಗಿ, ಈ ಮಹಿಳೆಯರಿಗೆ ನೀರನ್ನು ಮುಟ್ಟುವುದನ್ನು ಸಹ ನಿಷೇಧಿಸಲಾಗಿದೆ. ಆದ್ದರಿಂದ ಅವರು ತಮ್ಮ ಬಟ್ಟೆಗಳನ್ನು ಸಹ ತೊಳೆಯುವುದಿಲ್ಲ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದೆ.

5 /5

ಇದಲ್ಲದೇ ಇಲ್ಲಿನ ಮಹಿಳೆಯರು ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ಪ್ರಾಣಿಗಳ ಕೊಬ್ಬು ಮತ್ತು ಹೆಮಟೈಟ್ ದ್ರಾವಣದಿಂದ ತಯಾರಿಸಿದ ವಿಶೇಷ ಲೋಷನ್ ಬಳಸುತ್ತಾರೆ. ಹೆಮಟೈಟ್ ಕಾರಣ, ಅವರ ಚರ್ಮದ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ವಿಶೇಷ ಲೋಷನ್ ಗಳು ಕೀಟಗಳ ಕಡಿತದಿಂದ ರಕ್ಷಿಸುತ್ತವೆ.