Diabetes ಕಾರಣ ಶರೀರದ ಈ ಅಂಗಗಳು ಹಾನಿಗೊಳಗಾಗಬಹುದು, ಈ ರೀತಿ ರಕ್ಷಿಸಿ

Diabetes Treatment: ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಮಧುಮೇಹದಿಂದ ದೇಹದ ಯಾವ ಭಾಗಗಳು ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
 

Diabetes Treatment: ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಜನರು ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ, ಆದರೆ, ಹೆಚ್ಚಿನ ಜನರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ, ಆದರೆ, ಇದು ಅವರಿಗೆ ಮಾರಣಾಂತಿಕ ಸಾಬೀತಾಗುವ ಸಾಧ್ಯತೆ ಇದೆ. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದೂ ಕರೆಯುತ್ತಾರೆ, ಇದು ತುಂಬಾ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ನಾವು ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಮಧುಮೇಹವನ್ನು ನಿರ್ಲಕ್ಷಿಸುವುದರಿಂದ ಯಾವ ಅಂಗಗಳು ಪರಿಣಾಮಕ್ಕೆ ಒಳಗಾಗುತ್ತವೆ? ನಾವು ಅದನ್ನು ಹೇಗೆ ತಡೆಯಬಹುದು ಎಂಬುದನ್ನು ತಿಳಿಯೋಣ.

 

ಇದನ್ನೂ ಓದಿ-Amla Seeds Benefits : ನೆಲ್ಲಿ ಕಾಯಿ ಬೀಜದಲ್ಲಿದೆ, ಅದ್ಭುತ ಆರೋಗ್ಯ ಪ್ರಯೋಜನಗಳು!

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /4

ಮಧುಮೇಹದಿಂದ ಈ ಅಂಗಗಳು ಹಾನಿಗೊಳಗಾಗಬಹುದು - ಕಣ್ಣುಗಳು: ಕಣ್ಣುಗಳು ಒಬ್ಬ ವ್ಯಕ್ತಿಯ ದೇಹದ ಮಹತ್ವದ ಅಂಗವಾಗಿದ್ದು, ತನ್ಮೂಲಕ ವ್ಯಕ್ತಿ ತನ್ನ ಸುತ್ತಲಿನ ಕೆಲಸ ಮತ್ತು ಇತರ ವಿಷಯಗಳನ್ನು ನೋಡಬಹುದು, ಆದರೆ ನಿಮಗೆ ಮಧುಮೇಹ ಇದ್ದರೆ ನೀವು ಜಾಗರೂಕರಾಗಿರಬೇಕು. ಏಕೆಂದರೆ ನೀವು ದೀರ್ಘಕಾಲದವರೆಗೆ ಮಧುಮೇಹವನ್ನು ನಿರ್ಲಕ್ಷಿಸಿದರೆ ಅದು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೃಷ್ಟಿಹೀನತೆಯಂತಹ ಗಂಭೀರ ಕಾಯಿಲೆ ನಿಮಗೆ ಎದುರಾಗುತ್ತದೆ.

2 /4

ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ - ದೀರ್ಘಕಾಲದವರೆಗೆ ಮಧುಮೇಹದಿಂದ ಬಳಲುತ್ತಿರುವವರು ಮೂತ್ರಪಿಂಡದ ಸಮಸ್ಯೆಗೆ ಗುರಿಯಾಗುತ್ತಾರೆ, ಇದರಿಂದ ಅವರು ಕಿಡ್ನಿಗೆ ಸಂಬಂಧಿತ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ರಕ್ತದಲ್ಲಿನ ಅಧಿಕ ಸಕ್ಕರೆಯಿಂದಾಗಿ, ಇದು ಮೂತ್ರಪಿಂಡದ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ,  ಇದರಿಂದಾಗಿ ಮೂತ್ರಪಿಂಡ ವೈಫಲ್ಯದ ಸಾಧ್ಯತೆಯೂ ಇರುತ್ತದೆ. ಮೂತ್ರಪಿಂಡದಲ್ಲಿ ಊತವೂ ಉಂಟಾಗಿ ಕಿಡ್ನಿ ಕೂಡ ಹಾನಿಗೊಳಗಾಗಬಹುದು.

3 /4

ಕಾಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ - ಮಧುಮೇಹದ ರೋಗಿಯು ಅನೇಕ ಅಂಗಗಳಲ್ಲಿ ಮಧುಮೇಹದ ಪರಿಣಾಮವನ್ನು ಅನುಭವಿಸುತ್ತಾನೆ, ಅವುಗಳಲ್ಲಿ ಕಾಲಿನ ನರಗಳೂ ಕೂಡ ಶಾಮೀಲಾಗಿವೆ. ದೇಹದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾಗುವುದರಿಂದ, ಕಾಲುಗಳ ನರಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ, ನಂತರ ಅವು ಹಾನಿಗೊಳಗಾಗುತ್ತವೆ. ಇದರಿಂದಾಗಿ ಹೆಚ್ಚಿನವರಿಗೆ ಪಾದಗಳ ಮರಗಟ್ಟುವಿಕೆ ಸಮಸ್ಯೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

4 /4

ಮಧುಮೇಹ ರೋಗಿಗಳು ಈ ರೀತಿ ತಮ್ಮ ಕಾಳಜಿಯನ್ನು ವಹಿಸಬೇಕು - ಮಧುಮೇಹಿಗಳು ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಮಧುಮೇಹ ರೋಗಿಯು ತನ್ನ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.. ಮಧುಮೇಹ ರೋಗಿಯು ಫಾಸ್ಟ್ ಫುಡ್ ಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು.