ಸಣ್ಣ ವಯಸ್ಸಿನಲ್ಲಿಯೇ ಈ ಜಗತ್ತಿಗೇ ವಿದಾಯ ಹೇಳಿದ ಬಿಗ್ ಬಾಸ್ ಸ್ಟಾರ್ ಗಳಿವರು

ಅತ್ಯಂತ ಸಣ್ಣ ವಯಸಿನಲ್ಲಿಯೇ ಈ ಜಗತ್ತು ಬಿಟ್ಟು ತೆರಳಿದ ಬಿಗ್ ಬಾಸ್ ಸ್ಟಾರ್ ಗಳು ಯಾರು ಯಾರು ನೋಡೋಣ. 

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಸಾವಿನ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸಿದೆ. ಅವರ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗಿದೆ. ಸೋನಾಲಿಗಿಂತ ಮೊದಲು, ಬಿಗ್ ಬಾಸ್‌ನ ಅನೇಕ ಸ್ಪರ್ಧಿಗಳು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಅತ್ಯಂತ ಸಣ್ಣ ವಯಸಿನಲ್ಲಿಯೇ ಈ ಜಗತ್ತು ಬಿಟ್ಟು ತೆರಳಿದ ಬಿಗ್ ಬಾಸ್ ಸ್ಟಾರ್ ಗಳು ಯಾರು ಯಾರು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಸೋನಾಲಿ ಫೋಗಟ್ ಬಿಗ್ ಬಾಸ್ 14 ರಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಸೀಸನ್‌ನಲ್ಲಿ ಸಾಕಷ್ಟು  ಸುದ್ದಿಯಲ್ಲಿದ್ದರು. ಬಿಗ್ ಬಾಸ್‌ಗೆ ಬರುವ ಮೊದಲೇ ಸೋನಾಲಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದರೂ, ಈ ಶೋ ಅವರಿಗೆ ವಿಶೇಷ ಗುರುತು ನೀಡಿತ್ತು. ಆದರೆ ಇಂದು ಸೋನಾಲಿ ಈ ಜಗತ್ತಿನಲ್ಲಿಲ್ಲ. ತಮ್ಮ ೪೨ನೆ ವಯಸ್ಸಿನಲ್ಲಿ ಸೋನಾಲಿ ಹೃದಯಾಘಾತದಿಂದ  ಇಹ ಲೋಹ ತ್ಯಜಿಸಿದ್ದಾರೆ. (ಫೋಟೋ - ಸಾಮಾಜಿಕ ಮಾಧ್ಯಮ)

2 /5

ಕಳೆದ ವರ್ಷ ಸೆಪ್ಟೆಂಬರ್ 2 ರಂದು, ಈ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಸಂಪೂರ್ಣ ಫಿಟ್ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದಾಗಿ 40 ನೇ ವಯಸ್ಸಿನಲ್ಲಿ ನಿಧನರಾದರು.  (ಫೋಟೋ - ಸಾಮಾಜಿಕ ಮಾಧ್ಯಮ)

3 /5

ಬಾಲಿಕಾ ವಧು ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಕೂಡ ಚಿಕ್ಕ ವಯಸ್ಸಿನಲ್ಲೇ ಜಗತ್ತಿಗೆ ವಿದಾಯ ಹೇಳಿದ್ದಾರೆ. ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದರು.  ಪ್ರತ್ಯೂಷಾ ನಿಧನರಾಗಿ 5 ವರ್ಷಗಳಾಗಿವೆ.  (ಫೋಟೋ - ಸಾಮಾಜಿಕ ಮಾಧ್ಯಮ)

4 /5

ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಯನ್ನು ನಿಂದಿಸಿದ್ದು ಇದೇ ಜೇಡ್ ಗುಡಿ. ಇಷ್ಟಾದರೂ ಕೂಡಾ ಜೇಡ್ ಭಾರತದ ಬಿಗ್ ಬಾಸ್‌ನಲ್ಲಿಯೂ ಭಾಗವಹಿಸಿದ್ದರು. ಅವರು ಕಾರ್ಯಕ್ರಮದ ವಿಜೇತರಾಗದಿದ್ದರೂ,  ಸದಾ ಚರ್ಚೆಯಲ್ಲಿದ್ದರು.  ಅವರು ಕ್ಯಾನ್ಸರ್ ನಿಂದಾಗಿ ತಮ್ಮ 27 ನೇ  ಅಸು ನೀಗಿದರು.  (ಫೋಟೋ - ಸಾಮಾಜಿಕ ಮಾಧ್ಯಮ) 

5 /5

ಬಿಗ್ ಬಾಸ್ ಮನೆಯ ಎಲ್ಲಾ ವಿವಾದಾತ್ಮಕ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ  ಸ್ವಾಮಿ ಓಂ ಹೆಸರು ಈ ಪಟ್ಟಿಯಲ್ಲಿ ಕೇಳಿಬರುತ್ತದೆ. ಅಸಭ್ಯ ವರ್ತನೆಗಳಿಂದಾಗಿ ಸ್ವಾಮೀಜಿ ಸಾಕಷ್ಟು ಚರ್ಚೆಯಲ್ಲಿದ್ದರು. (ಫೋಟೋ - ಸಾಮಾಜಿಕ ಮಾಧ್ಯಮ)