ಬಾಲಿವುಡ್ ನಲ್ಲಿಯೂ ತಮಗಿಂತ ಸಣ್ಣ ವಯಸ್ಸಿನವರ ಜೊತೆ ಸಪ್ತಪದಿ ತುಳಿದ ನಟಿಯರಿದ್ದಾರೆ.
ಬೆಂಗಳೂರು : Bollywood Couple Age Gap: ಪ್ರೀತಿ ಕುರುಡು ಎಂದು ಹೇಳುತ್ತಾರೆ. ಪ್ರೀತಿ ಒಂದಿದ್ದರೆ ಆಸ್ತಿ ಅಂತಸ್ತು ವಯಸ್ಸು ಇದ್ಯಾವುದೂ ಅಡ್ಡ ಬರುವುದೇ ಇಲ್ಲ. ಬಾಲಿವುಡ್ ನಲ್ಲಿಯೂ ತಮಗಿಂತ ಸಣ್ಣ ವಯಸ್ಸಿನವರ ಜೊತೆ ಸಪ್ತಪದಿ ತುಳಿದ ನಟಿಯರಿದ್ದಾರೆ. ಆದರೂ ವಯಸ್ಸಿನ ಅಂತರ ಈ ಜೋಡಿಗಳ ಪ್ರೀತಿ ಮೇಲೆ ಯಾವ ಪರಿಣಾಮವನ್ನು ಬೀರಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜನಪ್ರಿಯ ಜೋಡಿಗಳಲ್ಲಿ ಒಂದು. ಇಬ್ವರಿಬ್ಬರೂ ಡಿಸೆಂಬರ್ 2021 ರಲ್ಲಿ ಸತಿಪತಿಗಳಾಗಿದ್ದಾರೆ. ಆದರೆ ಇಬ್ಬರ ವಯಸ್ಸಿನ ನಡುವೆಯೂ ದೊಡ್ಡ ವ್ಯತ್ಯಾಸವಿದೆ. ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಅವರಿಗಿಂತ 5 ವರ್ಷ ಚಿಕ್ಕವರು. ಕತ್ರಿನಾ ಕೈಫ್ ಗೆ 38 ವರ್ಷವಾಗಿದ್ದರೆ, ವಿಕ್ಕಿ ಕೌಶಲ್ ಅವರ ವಯಸ್ಸು 33.
ಪ್ರಿಯಾಂಕಾ ಚೋಪ್ರಾ ತನ್ನ ಪತಿ ನಿಕ್ ಜೋನಾಸ್‌ಗಿಂತ ತುಂಬಾ ಹಿರಿಯಳು. ಇಬ್ಬರ ವಯಸ್ಸಿನಲ್ಲೂ ಒಂದಲ್ಲ ಎರಡಲ್ಲ ಪೂರ್ತಿ 10 ವರ್ಷಗಳ ಅಂತರವಿದೆ. ಪ್ರಿಯಾಂಕಾ 37 ನೇ ವಯಸ್ಸಿನಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ ನಿಕ್ ಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಸಂದರ್ಶನವೊಂದರಲ್ಲಿ, ಈ ದಂಪತಿ ತಮಗೆ ವಯಸ್ಸಿನ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಯಸ್ಸಿನಲ್ಲೂ ಮೂರು ವರ್ಷಗಳ ಅಂತರವಿದೆ. ಐಶ್ವರ್ಯಾ ರೈ ಮದುವೆಯಾದಾಗ ಅವರಿಗೆ 34 ವರ್ವಾಗಿದ್ದರೆ, ಅಭಿಷೇಕ್ ಬಚ್ಚನ್ ಅವರಿಗೆ 31 ವರ್ಷವಾಗಿತ್ತು. ಸುದೀರ್ಘ ಕಾಲ ಡೇಟಿಂಗ್ ಮಾಡಿದ ನಂತರ 2007 ರಲ್ಲಿ ಇವರ ವಿವಾಹ ನೆರವೇರಿತ್ತು.
ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ವಯಸ್ಸಿನಲ್ಲಿ 3 ವರ್ಷಗಳ ಅಂತರವಿದೆ. ನಟಿಬಿಪಾಶಾ ಪತಿ ಕರಣ್‌ಗಿಂತ 3 ವರ್ಷ ದೊಡ್ಡವರು. ಮದುವೆಯ ಸಮಯದಲ್ಲಿ ಬಿಪಾಶಾ ಬಸು ಅವರಿಗೆ 37 ವರ್ಷವಾಗಿತ್ತು. ಕರಣ್ ಅವರಿಗೆ ಆಗ 34 ವರ್ಷ
ಬಾಲಿವುಡ್ ನಟ ಕುನಾಲ್ ಖೇಮು ಅವರು ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಅವರನ್ನು ವಿವಾಹವಾಗಿದ್ದಾರೆ. ಸೋಹಾ ಕುನಾಲ್ ಖೇಮುಗಿಂತ 5 ವರ್ಷ ದೊಡ್ಡವಳು. ಕುನಾಲ್ ಅವರಿಗೆ 38 ವರ್ಷವಾಗಿದ್ದರೆ, ಸೋಹಾ ಅಲಿ ಖಾನ್ ಅವರಿಗೆ 43 ವರ್ಷ.
ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾ ಅವರ ಪ್ರೇಮಕಥೆಯು ಯಾವುದೇ ಸಿನಿಮಾಗಿಂತ ಕಡಿಮೆಯಿಲ್ಲ. ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿಯಾಗಿದ್ದರು. ಇದಾದ ನಂತರ ಇಬ್ಬರೂ ಮದುವೆಯಾದರು. ನೇಹಾ ಧೂಪಿಯಾ ಅವರಿಗೆ 41 ವರ್ಷ, ಅಂಗದ್ ಬೇಡಿ, ನೇಹಾಗಿಂತ ಎರಡು ವರ್ಷ ಚಿಕ್ಕವರು. ಈ ಜೋಡಿಯು 2018 ರಲ್ಲಿ ದೆಹಲಿಯಲ್ಲಿ ವಿವಾಹವಾಯಿತು.