Anushka Sharma ಸೀರೆ ಬಾಡಿಗೆ ಪಡೆದ ಡು ಪ್ಲೆಸಿಸ್‌ ಪತ್ನಿ: ಇಲ್ಲಿದೆ ʼಇಮಾರಿʼ ಕ್ಯೂಟ್‌ ಫೋಟೋಸ್‌

ಆರ್‌ಸಿಬಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಇದು  ಅನುಷ್ಕಾ ಅವರ ಸೀರೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಇಮಾರಿ, "ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಅನುಷ್ಕಾ ಅವರ ಬಳಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ" ಎಂದು ಹೇಳಿದ್ದಾರೆ. 

ಆರ್​ಸಿಬಿ ಟೀಂ ಆಟಗಾರ ಮ್ಯಾಕ್ಸ್​ವೆಲ್​ ಭಾರತ ಮೂಲಕ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಟೀಂ ಆಟಗಾರರಿಗಾಗಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆರ್‌ಸಿಬಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ. 
 

1 /5

ಆರ್​ಸಿಬಿ ಆಟಗಾರ ಮ್ಯಾಕ್ಸ್​ವೆಲ್​  ಮದುವೆ ಪಾರ್ಟಿಯಲ್ಲಿ ಫಾಫ್‌ ಡು ಪ್ಲೆಸಿಸ್‌ ಅವರ ಪತ್ನಿಇಮಾರಿಯವರು ಅನುಷ್ಕಾ ಶರ್ಮಾ ಸೀರೆಯಲ್ಲಿ ಬಾಡಿಗೆ ಪಡೆದು ಉಟ್ಟಿಕೊಂಡಿದ್ದಾರೆ.

2 /5

ಈ ಪಾರ್ಟಿಯಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಆರ್‌ಸಿಬಿ ತಂಡದ ಆಟಗಾರರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ವಿರಾಟ್‌ ಕೊಹ್ಲಿ ಪಾರ್ಟಿಯಲ್ಲಿ ಡ್ಯಾನ್ಸ್‌ ಮಾಡಿದ್ದ ವಿಡಿಯೋ ಈ ಹಿಂದೆ ವೈರಲ್‌ ಆಗಿತ್ತು.

3 /5

ಈ ಪಾರ್ಟಿಯಲ್ಲಿ ಎಲ್ಲರೂ ಭಾರತೀಯ ಸಂಪ್ರದಾಯದ ಉಡುಗೆಯನ್ನು ತೊಟ್ಟಿದ್ದದ್ದು ವಿಶೇಷವಾಗಿ ಕಂಡುಬಂತು. ಪುರುಷರು ಜುಬ್ಬಾ ಪೈಜಾಮದಲ್ಲಿ ಮಿಂಚಿದರೆ, ಮಹಿಳೆಯರು ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಈ ವೇಳೆ ಇಮಾರಿ ತೊಟ್ಟಿದ್ದ ಹಸಿರು ಬಣ್ಣದ ಸೀರೆ ಎಲ್ಲರ ಗಮನ ಸೆಳೆದಿತ್ತು.

4 /5

ಈ ಸೀರೆಯನ್ನು 2018ರಲ್ಲಿ ಅನುಷ್ಕಾ ಶರ್ಮಾ ತೊಟ್ಟಿದ್ದರು ಎಂದು ಇಮಾರಿ ಪೋಸ್ಟ್‌ ಮಾಡಿದ ಫೋಟೋಗೆ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಇಮಾರಿ, "ಮದುವೆ ಪಾರ್ಟಿಯಲ್ಲಿ ಉಡುವುದಕ್ಕಾಗಿ ಅನುಷ್ಕಾ ಅವರ ಬಳಿ ಸೀರೆಯನ್ನು ಕೇಳಿ ಪಡೆದುಕೊಂಡಿದ್ದೆ" ಎಂದು ಹೇಳಿದ್ದಾರೆ.

5 /5

ಇನ್ನೂ ಕೆಲವರು ಇಮಾರಿ ಅವರ ದೇಸಿ ಲುಕ್​ಗೆ ಫಿದಾ ಆಗಿದ್ದು, ಕಮೆಂಟ್‌, ಲೈಕ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಅನುಷ್ಕಾ ಶರ್ಮಾರಂತೆ ಈ ಸೀರೆಯಲ್ಲಿ ನೀವು ಮುದ್ದಾಗಿ ಕಾಣುತ್ತೀರಾ ಎಂದು ಕಮೆಂಟ್‌ ಮೂಲಕ ಹೇಳಿದ್ದಾರೆ.