9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯು ಘಟನೆಯಲ್ಲಿ ಬದುಕುಳಿದಿರುವುದು ವೈದ್ಯರಿಗೆ ಅಚ್ಚರಿ ಮೂಡಿಸಿದೆ.
ದೇವರು ರಕ್ಷಿಸುವವನನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ ಎಂಬ ಗಾದೆ ಮಾತಿದೆ. ಈ ಮಾತು ಅಮೆರಿಕದ ನ್ಯೂಜೆರ್ಸಿಯ ಒಬ್ಬ ವ್ಯಕ್ತಿಯ ಜೀವನದಲ್ಲಿ ನಿಜವಾಗಿದೆ. ಇಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡದ 9 ನೇ ಮಹಡಿಯಿಂದ ಜಿಗಿದರೂ ಆತ ಸಾಯಲಿಲ್ಲ. ಆ ವ್ಯಕ್ತಿ ಬಿದ್ದ ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ ಆ ವ್ಯಕ್ತಿಯ ಜೀವಕ್ಕೆ ಮಾತ್ರ ಏನೂ ಆಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಈ ವ್ಯಕ್ತಿಯ ವಯಸ್ಸು 31 ವರ್ಷ. ಆದರೆ ಆತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆ ವ್ಯಕ್ತಿ ಕಟ್ಟಡದ ಕೆಳಗೆ ನಿಲ್ಲಿಸಿದ್ದ ಬಿಎಂಡಬ್ಲ್ಯು ಕಾರಿನ ಮೇಲೆ ಬಿದಿದ್ದಾನೆ. ಘಟನೆಯಲ್ಲಿ ಆತನಿಗೆ ಏನೂ ಆಗಿಲ್ಲ, ಆದರೆ ಐಷಾರಾಮಿ ಕಾರಿನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಯತ್ನದಲ್ಲಿ ವ್ಯಕ್ತಿಯು ಗಾಯಗೊಂಡಿದ್ದಾನೆ. 9ನೇ ಮಹಡಿಯಿಂದ ಜಿಗಿತ ಆತನ ಪ್ರಾಣಕ್ಕೆ ಏನೋ ತೊಂದರೆಯಾಗಿಲ್ಲ. ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವನಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಮೇಲಿಂದ ಬಿದ್ದರೂ ವ್ಯಕ್ತಿಯ ಜೀವ ಉಳಿದಿರುವುದು ವೈದ್ಯರಿಗೂ ಅಚ್ಚರಿ ಮೂಡಿಸಿದೆ.
ವ್ಯಕ್ತಿ ಕಟ್ಟಡದಿಂದ ಬಿದ್ದ ಹೊಡೆತಕ್ಕೆ ಐಷಾರಾಮಿ ಬಿಎಂಡಬ್ಲ್ಯು ಕಾರಿನ ಮೇಲ್ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನ ಗಾಜುಗಳು ಕೂಡ ಪುಡಿಪುಡಿಯಾಗಿವೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಬಲಗೈ ಕೂಡ ಮುರಿದಿದೆ.
ಘಟನೆ ನಡೆದ ಸ್ಥಳದಲ್ಲಿದ್ದ ಜನರಿಗೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೊಬ್ಬೆ ಹೊಡೆಯುವ ಸದ್ದು ಕೇಳಿಸಿದೆ. ಅವರು ಹತ್ತಿರ ಹೋಗಿ ನೋಡಿದಾಗ ಗಾಯಗೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಕಾರಿನ ಮೇಲೆ ಬಿದ್ದು ನರಳಾಡುತ್ತಿದ್ದ.
ಯಾವಾಗ ಆತ್ಮಹತ್ಯೆಗೆ ಯತ್ನಿಸಿ 9ನೇ ಮಹಡಿಯಿಂದ ಕಾರಿನ ಮೇಲೆ ಬಿದ್ದನೋ ಆಗ ದೊಡ್ಡದಾಗಿ ಸದ್ದಾಗಿದೆ. ಏನಾಯಿತು ಎಂದು ನೋಡುವಷ್ಟರಲ್ಲಿ ಈ ವ್ಯಕ್ತಿ ನರಳಾಡುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಮಹಿಳೆಯೊಬ್ಬರು ಆಘಾತಗೊಂಡ ಭಯದಿಂದ ಕಿರುಚಾಡಿದ್ದಾಳೆ. ಆರಂಭದಲ್ಲಿ ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ನಂತರ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.