ಶುಕ್ರ ಗೋಚರದಿಂದ ಇನ್ನೆರಡು ದಿನಗಳಲ್ಲಿ ಬದಲಾಗಲಿದೆ ಈ ಐದುರಾಶಿಯವರ ಅದೃಷ್ಟ

ಡಿಸೆಂಬರ್ 30  2021 ರಂದು ಸಂಭವಿಸಲಿರುವ ಶುಕ್ರನ ಸಂಕ್ರಮಣವು ಈ  5 ರಾಶಿಚಕ್ರದವರ ಅದೃಷ್ಟವನ್ನು ಬೆಳಗಿಸುತ್ತದೆ. 

ನವದೆಹಲಿ : ಪ್ರತಿಯೊಬ್ಬರೂ ತಮ್ಮ ಅದೃಷ್ಟ ಯಾವಾಗ ಬದಲಾಗುತ್ತದೆ ಎಂದು ಎದುರು ನೋಡುತ್ತಿರುತ್ತಾರೆ. ಡಿಸೆಂಬರ್ 30  2021 ರಂದು ಸಂಭವಿಸಲಿರುವ ಶುಕ್ರನ ಸಂಕ್ರಮಣವು ಈ  5 ರಾಶಿಚಕ್ರದವರ ಅದೃಷ್ಟವನ್ನು ಬೆಳಗಿಸುತ್ತದೆ. ಈ ಮೂಲಕ ಉತ್ತಮ ಅದೃಷ್ಟಕ್ಕಾಗಿ ಕಾಯುತ್ತಿದ್ದ ಅವರ ನಿರೀಕ್ಷೆ ಕೂಡಾ ಕೊನೆಗೊಳ್ಳುತ್ತದೆ. ಧನು ರಾಶಿಯಲ್ಲಿರುವ ಶುಕ್ರನು ಈ ಜನರಿಗೆ ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತಾನೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ :ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ಗುರಿಗಳನ್ನು ಸಾಧಿಸುವುದರೊಂದಿಗೆ ನೀವು ತುಂಬಾ ಸಂತೋಷವಾಗಿರುತ್ತೀರಿ ಮತ್ತು ನೀವು ಮಾಡುವ ಕೆಲಸಕ್ಕೆ ಪ್ರಶಂಸೆಯನ್ನು ಪಡೆಯುತ್ತೀರಿ. ಹಣದ ಲಾಭದ ಅವಕಾಶಗಲು ಹೆಚ್ಚಿವೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. 

2 /5

ವೃಷಭ ರಾಶಿ : ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಆದರೂ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಇಲ್ಲದಿದ್ದರೆ ಬಜೆಟ್ ಹಾಳಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.  ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದೊಂದಿಗೆ ಸಮಯ ಕಳೆಯುವುದು ಸಂತೋಷ ಮತ್ತು ನೆಮ್ಮದಿಯನ್ನು ನೀಡುತ್ತದೆ.

3 /5

ಕಟಕ  :ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಪ್ರಗತಿಗಾಗಿ ಕಾಯುತ್ತಿರುವ ಜನರ ಕನಸು ಕೂಡ ನನಸಾಗಲಿದೆ. ಹಣದ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಒಟ್ಟಾರೆಯಾಗಿ ಜೀವನದಲ್ಲಿ ಸಂತೋಷವಿರುತ್ತದೆ.  

4 /5

ವೃಶ್ಚಿಕ ರಾಶಿ :ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದಾಯ ಹೆಚ್ಚಲಿದೆ. ಜೀವನದಲ್ಲಿ ಹೊಸ ಸೌಕರ್ಯಗಳನ್ನು ಪಡೆಯಲು ಖರ್ಚು ಮಾಡಬೇಕಾಗುತ್ತದೆ. ಕುಟುಂಬವು ಸಂತೋಷದಿಂದ ಕೂಡಿರುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. 

5 /5

ಮಕರ  :ಶುಕ್ರನ ಸಂಚಾರವು ಮಕರ ರಾಶಿಯವರಿಗೆ ಸಂಬಂಧಗಳ ವಿಷಯದಲ್ಲಿ ಪ್ರಯೋಜನವನ್ನು ನೀಡುತ್ತದೆ. ಸಂಬಂಧಗಳು ಗಟ್ಟಿಯಾಗಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಹಳೆಯ ವಿವಾದಗಳನ್ನು ಕೊನೆಗೊಳಿಸುವ ಮೂಲಕ ಸಮಾಧಾನವನ್ನು ಅನುಭವಿಸುವಿರಿ. ವಿವಾದಗಳು ಇತ್ಯರ್ಥವಾಗಲಿವೆ.