ಸರ್ಕಾರಿ ನೌಕರರಿಗೆ ಭಾರಿ ಆಘಾತ ನೀಡಿದ ಕೇಂದ್ರ ಸರ್ಕಾರ..!

ಏಳನೇ ವೇತನ ಆಯೋಗದ ಹೆಚ್ಚಳದ ಲಾಭವನ್ನು ಈಗ ಎಲ್ಲಾ ಕೇಂದ್ರ ನೌಕರರು ಪಡೆಯುತ್ತಿದ್ದಾರೆ. ಅದರ ನಂತರ ಈಗ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಈಗ 8ನೇ ಕೇಂದ್ರ ವೇತನ ಆಯೋಗವನ್ನು ರಚಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವಾಲಯವು ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರನ್ನು ನಿರಾಶೆಗೊಳಿಸಿದೆ, ರಾಜ್ಯಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಹೊಸ ವೇತನದ ಸಾಧ್ಯತೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಾ ಮುಂದಿನ ವೇತನ ಆಯೋಗದ ಪ್ರಕ್ರಿಯೆ ಆರಂಭಿಸುವ ಪ್ರಸ್ತಾವನೆ ಇಲ್ಲ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

2 /5

7ನೇ ವೇತನ ಆಯೋಗದ ಶಿಫಾರಸುಗಳನ್ನು 2016ರ ಜನವರಿಯಲ್ಲಿ ಜಾರಿಗೊಳಿಸಲಾಗಿತ್ತು. ಹಿಂದಿನ ಟ್ರೆಂಡ್‌ಗಳ ಆಧಾರದ ಮೇಲೆ, ಸರ್ಕಾರವು ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗವನ್ನು ರಚಿಸುತ್ತದೆ, ಜನವರಿ 2026 ರಿಂದ ಅನುಷ್ಠಾನಕ್ಕೆ ಸಮಯಕ್ಕೆ ಅದರ ವರದಿಯನ್ನು ಸಲ್ಲಿಸಲು ಹೊಸ ಸಮಿತಿಯನ್ನು ಶೀಘ್ರದಲ್ಲೇ ರಚಿಸಬಹುದು ಎನ್ನುವ ನಿರೀಕ್ಷೆ ಇತ್ತು

3 /5

ವರದಿಗಳ ಪ್ರಕಾರ, ವೇತನ ಆಯೋಗದ ಬದಲಿಗೆ ವೇತನ ಪರಿಷ್ಕರಣೆಗೆ ಸರ್ಕಾರ ಹೊಸ ಕಾರ್ಯವಿಧಾನವನ್ನು ಜಾರಿಗೆ ತರಬಹುದು. ನೌಕರರ ಸಂಘದ ಮುಖಂಡರನ್ನು ಉಲ್ಲೇಖಿಸಿ, ಹೊಸ ವಿಧಾನದ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ. ಕೇಂದ್ರವು ವಿಭಿನ್ನ ಕಾರ್ಯವಿಧಾನವನ್ನು ಆಶ್ರಯಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಜಂಟಿ ಸಲಹಾ ಯಂತ್ರೋಪಕರಣ ಮಂಡಳಿಯ (ಎನ್‌ಸಿ-ಜೆಸಿಎಂ) ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರನ್ನು ವರದಿ ಉಲ್ಲೇಖಿಸಿದೆ.

4 /5

ಈಗ ನೌಕರರ ಈ ಕುತೂಹಲಕ್ಕೆ ಈಗ ಕೇಂದ್ರ ಸರ್ಕಾರ ತಣ್ಣೀರು ಎರೆಚಿದೆ.8 ನೇ ವೇತನ ಆಯೋಗದ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ, ಇತ್ತೀಚಿನ ವರದಿ ಪ್ರಕಾರ ಸರ್ಕಾರವು 8 ನೇ ವೇತನ ಆಯೋಗದ ರಚನೆಯನ್ನು ಸಂಪೂರ್ಣವಾಗಿ ಕೈಬಿಡಬಹುದು ಎಂದು ಸೂಚಿಸುತ್ತದೆ.ಇದಕ್ಕೆ ಕೇಂದ್ರ ಸಚಿವರ ಹೇಳಿಕೆಯೂ ಇದಕ್ಕೆ ಪೂರಕವಾಗಿದೆ.

5 /5

ಏಳನೇ ವೇತನ ಆಯೋಗದ ಹೆಚ್ಚಳದ ಲಾಭವನ್ನು ಈಗ ಎಲ್ಲಾ ಕೇಂದ್ರ ನೌಕರರು ಪಡೆಯುತ್ತಿದ್ದಾರೆ. ಅದರ ನಂತರ ಈಗ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.