Sunil Gavaskar Birthday: ಕ್ರಿಕೆಟ್ ಜಗತ್ತಿನಲ್ಲಿ ಹಲವು ಶ್ರೇಷ್ಠ ದಾಖಲೆಗಳನ್ನು ಸೃಷ್ಟಿ ಮಾಡಿದ ಟೀಂ ಇಂಡಿಯಾ ಸ್ಟಾರ್ ಆಟಗಾರ ಸುನಿಲ್ ಗವಾಸ್ಕರ್.. ಆದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.. ಇಂದು ನಾವು ಈ ಖ್ಯಾತ ಕ್ರಿಕೆಟಿಗನ ರೋಚಕ ಲವ್‌ಸ್ಟೋರಿ ಬಗ್ಗೆ ತಿಳಿದುಕೊಳ್ಳೋಣ..
10 ಜುಲೈ 1949 ರಂದು ಮುಂಬೈನಲ್ಲಿ ಜನಿಸಿದ ಸುನಿಲ್ ಗವಾಸ್ಕರ್ ಅವರು 71 ನೇ ವಯಸ್ಸಿನಲ್ಲಿಯೂ ಕ್ರಿಕೆಟ್ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಗವಾಸ್ಕರ್.. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್.. ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 33 ಶತಕಗಳು ಸೇರಿದಂತೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ..
ಇನ್ನು ಸುನೀಲ್ ಗವಾಸ್ಕರ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಅವರು ಪ್ರೀತಿಸಿ ಮದುವೆಯಾಗಿದ್ದು ಯಾವುದೇ ಸ್ಟಾರ್ ಅಥವಾ ಸೆಲೆಬ್ರಿಟಿಯನ್ನಲ್ಲ.. ತಮ್ಮ ಅಭಿಮಾನಿಯನ್ನು.. ಹೌದು ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕ್ರಿಕೆಟ್ ಪಂದ್ಯ ಮುಕ್ತಾಯದ ನಂತರ ತಮ್ಮಲ್ಲಿ ಆಟೋಗ್ರಾಫ್ ಕೇಳಲು ಬಂದಿದ್ದ ಅಭಿಮಾನಿಯೊಂದಿಗೆ ಪ್ರೀತಿಯಲ್ಲಿ ಬಿದ್ದು ಅವರನ್ನೇ ಮದುವೆಯಾದರು..
ಸುನೀಲ್ ಗವಾಸ್ಕರ್ ಪತ್ನಿ ಹೆಸರು ಮಾರ್ಷಲೀನ್ ಮಲ್ಹೋತ್ರಾ.. ಇವರು ಮೂಲತಃ ಕಾನ್ಪುರಿನವರು.. ತಂದೆ ಚರ್ಮದ ವ್ಯಾಪಾರಸ್ಥರು.. 1973 ರಲ್ಲಿ ಮಾರ್ಷಲೀನ್ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಓದುತ್ತಿದ್ದಾಗ ಗವಾಸ್ಕರ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು.. ಕಾಲೇಜಿನ ಬಿಡುವಿನ ವೇಳೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದಾಗ ಅಲ್ಲಿ ಆಟೋಗ್ರಾಫ್ ಕೇಳಲು ಗವಾಸ್ಕರ್ ಬಳಿಗೆ ಹೋಗುತ್ತಾರೆ.. ಆಗಲೇ ಗವಾಸ್ಕರ್ ಮಾರ್ಷಲೀನ್ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದಿದ್ದರಂತೆ..
ಬಳಿಕ ಮಾರ್ಷಲೀನ್ ಕಾನ್ಪುರದ ನಿವಾಸಿ ಎಂದು ತಿಳಿದ ಅವರು ಅಲ್ಲಿಗೂ ಹೋಗಿದ್ದರಂತೆ.. ಕುತೂಹಲಕಾರಿ ವಿಷಯವೆಂದರೆ ಮಾರ್ಷೆಲಿನ್ ಅವರನ್ನು ಗವಾಸ್ಕರ್ ಮಾಡುತ್ತಿರುವ ಪ್ರಯತ್ನಗಳು ಹೇಗಿದ್ದವೆಂದರೆ..ಯಾವುದೇ ಬೆಲೆ ತೆತ್ತಾದರೂ ಅವರನ್ನು ಪಡೆಯಲು ಮನಸ್ಸು ಮಾಡಿದ್ದರಂತೆ..
ಅದಕ್ಕಾಗಿಯೇ ಅವರು ಕಾನ್ಪುರ ಟೆಸ್ಟ್ ಸಮಯದಲ್ಲಿ ಮಾರ್ಸೆಲಿನ್ ಅವರ ಇಡೀ ಕುಟುಂಬವನ್ನು ಆಹ್ವಾನಿಸಿ.. ಪಂದ್ಯ ಮುಗಿದ ಕೂಡಲೇ ಮಾರ್ಷೆಲಿನ್ ಮತ್ತು ಅವರ ಕುಟುಂಬದವರ ಸಮ್ಮುಖದಲ್ಲಿ ಗವಾಸ್ಕರ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರಂತೆ.. ಬಳಿಕ ಅವರ ಕುಟುಂಬವು ಸಂಬಂಧವನ್ನು ಒಪ್ಪಿಕೊಂಡು.. 13 ಸೆಪ್ಟೆಂಬರ್ 1974 ರಂದು, ಗವಾಸ್ಕರ್ ಮತ್ತು ಮಾರ್ಚೆಲಿನ್ ವಿವಾಹವಾದರು. ಸುನೀಲ್ ಗವಾಸ್ಕರ್ ಹಾಗೂ ಮಾರ್ಷೆಲಿನ್ ದಂಪತಿಗೆ ರೋಹನ್ ಎಂಬ ಮಗನಿದ್ದಾನೆ..
ಗವಾಸ್ಕರ್ ಅವರ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಭಾರತಕ್ಕಾಗಿ 125 ಟೆಸ್ಟ್ ಮತ್ತು 108 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಗವಾಸ್ಕರ್, 125 ಟೆಸ್ಟ್‌ಗಳಲ್ಲಿ 10 ಸಾವಿರದ 122 ರನ್ ಗಳಿಸಿದ್ದಾರೆ.. ಇದರಲ್ಲಿ ಅವರು 34 ಶತಕಗಳು ಮತ್ತು 45 ಅರ್ಧ ಶತಕಗಳನ್ನು ಹೊಂದಿದ್ದಾರೆ.