Festive Season Offer - ಹಬ್ಬದ ಸೀಸನ್ ಅಂದರೆ ಬಂಪರ್ ಶಾಪಿಂಗ್ ಅವಕಾಶ. ಫೆಸ್ಟಿವ್ ಸೀಸನ್ ಬಂತೆಂದರೆ ಸಾಕು ಅಟೋಮೊಬೈಲ್ ಕಂಪನಿಗಳು ಆರಂಭದಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯಲು ಅದ್ಭುತ ಕೊಡುಗೆಗಳನ್ನು ಹೊತ್ತುತರುತ್ತವೆ.
Festive Season Offer - ಹಬ್ಬದ ಸೀಸನ್ ಅಂದರೆ ಬಂಪರ್ ಶಾಪಿಂಗ್ ಅವಕಾಶ. ಫೆಸ್ಟಿವ್ ಸೀಸನ್ ಬಂತೆಂದರೆ ಸಾಕು ಅಟೋಮೊಬೈಲ್ ಕಂಪನಿಗಳು (Automobile Companies) ಆರಂಭದಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯಲು ಅದ್ಭುತ ಕೊಡುಗೆಗಳನ್ನು ಹೊತ್ತು ತರುತ್ತವೆ. ಹೀಗಿರುವಾಗ ಇದೀಗ ಟಾಟಾ ಮೋಟಾರ್ಸ್ ತನ್ನ ಉತ್ತಮ ಮಾರಾಟಗೊಳ್ಳುವ ಹಲವು ಕಾರುಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ಮತ್ತು ಉತ್ತಮ ಕೊಡುಗೆಗಳನ್ನು ಘೋಷಿಸಿದೆ. Tata Motors ಕಂಪನಿಯ ಸಬ್ ಕಾಂಪ್ಯಾಕ್ಟ್ SUV Tata Nexon ಮತ್ತುTata Nexon EV, ಹ್ಯಾಚ್ ಬ್ಯಾಕ್ Tata Tiago, ಸೆಡಾನ್ Tata Tigor ಮತ್ತು SUV Tata Harrier ಮೇಲೆ ರೂ.28,000 ವರೆಗೆ ರಿಯಾಯಿತಿ ಘೋಷಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. TATA ವತಿಯಿಂದ ಬಂಪರ್ ರಿಯಾಯಿತಿ - Diwali ಹಬ್ಬ ಆರಂಭವಾಗುವುದಕ್ಕು ಮುನ್ನವೇ Tata Motors ತನ್ನ Nexon, Tiago, Tigor ಹಾಗೂ Harrier ನಂತಹ ಜನಪ್ರಿಯ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ಈ ರಿಯಾಯಿತಿಗಳು Cash Discount, Exchange Bonus, Free Insurance ಮತ್ತು Extended Warrenty ರೂಪದಲ್ಲಿರುತ್ತವೆ. ಯಾವ ಟಾಟಾ ಮೋಟಾರ್ ವಾಹನಗಳ ಮೇಲೆ ಎಷ್ಟು ರಿಯಾಯಿತಿ ಸಿಗುತ್ತಿದೆ ತಿಳಿದುಕೊಳ್ಳೋಣ ಬನ್ನಿ.
2. Petrol-Diesel ಎರಡೂ ಆವೃತ್ತಿಗಳ ಮೇಲೆ ಸಿಗಲಿದೆ ಲಾಭ - ಟಾಟಾ ಟಿಗೋರ್ನ ಪೆಟ್ರೋಲ್ ಆವೃತ್ತಿಯ ಮೇಲೆ ರೂ. 10,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 3,000 ಸಿಗುತ್ತಿದೆ. ಅಂದರೆ ಟಿಗೋರ್ ಖರೀದಿಸುವ ಗ್ರಾಹಕರು ರೂ. 28,000 ವರೆಗೆ ಒಟ್ಟು ಲಾಭವನ್ನು ಪಡೆಯಬಹುದು. ಟಾಟಾ ನೆಕ್ಸಾನ್ನ ಪೆಟ್ರೋಲ್ ಆವೃತ್ತಿಯ ಮೇಲೆ ಕಾರ್ಪೊರೇಟ್ ರಿಯಾಯಿತಿ 3,000 ರೂ. ಸಿಗುತ್ತಿದೆ. ಇದರ ಹೊರತಾಗಿ, ಟಾಟಾ ನೆಕ್ಸಾನ್ನ ಡೀಸೆಲ್ ರೂಪಾಂತರಗಳ ಮೇಲೆ ರೂ.15,000 ವಿನಿಮಯ ಬೋನಸ್ ಮತ್ತು ರೂ .5000 ಕಾರ್ಪೊರೇಟ್ ರಿಯಾಯಿತಿಯನ್ನು ಸಹ ಕಂಪನಿಯು ನೀಡುತ್ತಿದೆ.
3. Tiago ಮೇಲೆ ರೂ.28,000ವರೆಗೆ ಲಾಭ - ಹಬ್ಬದ ಋತುವಿನಲ್ಲಿ ಟಾಟಾ ಟಿಯಾಗೊದ XE ಮತ್ತು XT (O) ವೇರಿಯಂಟ್ ಖರೀದಿದಾರರಿಗೆ ರೂ. 10,000 ನಗದು ರಿಯಾಯಿತಿ, ರೂ.15,000 ವಿನಿಮಯ ಬೋನಸ್ ಮತ್ತು ರೂ. 3,000 ದ ಕಾರ್ಪೊರೇಟ್ ರಿಯಾಯಿತಿ, ಅಂದರೆ ಕಂಪನಿಯಿಂದ ಒಟ್ಟು ರೂ.28,000 ಲಾಭ ನೀಡುತ್ತಿದೆ . ಇದಲ್ಲದೇ, ರೂ. 10,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಮತ್ತು ರೂ. 3,000 ಕಾರ್ಪೊರೇಟ್ ರಿಯಾಯಿತಿ ಟಾಟಾ ಟಿಯಾಗೊದ XT, XZ ಮತ್ತು XZ+ ವೇರಿಯಂಟ್ ಗಳ ಮೇಲೂ ಕೂಡ ಲಭ್ಯವಿರಲಿದೆ.
4. SUVಗಳ ಮೇಲೆ ಎಷ್ಗು ಲಾಭ - ಕಂಪನಿಯು ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸನ್ ಇವಿ XZ+ ಮೇಲೆ ರೂ. 10,000 ವಿನಿಮಯ ಬೋನಸ್ ಮತ್ತು ರೂ. 3,000 ಕಾರ್ಪೊರೇಟ್ ರಿಯಾಯಿತಿ ನೀಡುತ್ತಿದೆ, ಅಂದರೆ ನೆಕ್ಸಾನ್ XZ++ ಖರೀದಿದಾರರು ಒಟ್ಟು ರೂ ಕೇವಲ ರೂ.13,000 ಲಾಭ ಮಾತ್ರ ಪಡೆಯಲಿದ್ದಾರೆ. ಆದರೆ ಇನ್ನೊಂದೆಡೆ ಟಾಟಾ ನೆಕ್ಸಾನ್ ಇವಿ ಲಕ್ಸುರಿ ಆವೃತ್ತಿಯಾ ಮೇಲೆ ರೂ 15,000 ವಿನಿಮಯ ಬೋನಸ್ ಸಿಗುತ್ತಿದೆ. ಇದರ ಹೊರತಾಗಿ, ಕಂಪನಿಯು ತನ್ನ ಅತ್ಯುತ್ತಮ ಎಸ್ಯುವಿ ಟಾಟಾ ಹ್ಯಾರಿಯರ್ಗೆ ರೂ .15,000 ವಿನಿಮಯ ಬೋನಸ್ ನೀಡುತ್ತಿದೆ.