ಸಮಂತಾ ʼಯಶೋದಾʼ ಟ್ರೈಲರ್‌ ರಿಲೀಸ್‌ ಮಾಡೋಕೆ ಇಷ್ಟೋಂದು ಹೀರೋಗಳಾ..!

Samantha Yashoda Trailer : ತೆಲುಗಿನ ಸ್ಟಾರ್ ಹೀರೋಯಿನ್ ಕ್ಯೂಟ್‌ ಡಾಲ್‌ ಸಮಂತಾ ಅಭಿನಯದ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ ʼಯಶೋದʼ ಟ್ರೈಲರ್‌ ಬಿಡುಗಡೆಗೆ ಮೂಹೂರ್ತ ಹತ್ತಿರವಾಗುತ್ತಿದೆ. ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಮಿಂಚಲಿರುವ ಯಶೋದಾಗೆ ಸ್ಟಾರ್‌ ನಟರು ಕೈ ಜೋಡಿಸಿದ್ದಾರೆ.

Samantha Yashoda Trailer : ತೆಲುಗಿನ ಸ್ಟಾರ್ ಹೀರೋಯಿನ್ ಕ್ಯೂಟ್‌ ಡಾಲ್‌ ಸಮಂತಾ ಅಭಿನಯದ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ ʼಯಶೋದʼ ಟ್ರೈಲರ್‌ ಬಿಡುಗಡೆಗೆ ಮೂಹೂರ್ತ ಹತ್ತಿರವಾಗುತ್ತಿದೆ. ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಮಿಂಚಲಿರುವ ಯಶೋದಾಗೆ ಸ್ಟಾರ್‌ ನಟರು ಕೈ ಜೋಡಿಸಿದ್ದಾರೆ.

1 /5

ಸಮಂತಾ ʼಯಶೋದʼ ಸಿನಿಮಾಗಾಗಿ ಅವರ ಕ್ಲೋಜ್ ಫ್ರೆಂಡ್ಸ್ ಕಮ್ ಸ್ಟಾರ್ ಹೀರೋಗಳು ಸಾಥ್‌ ನೀಡುತ್ತಿದ್ದಾರೆ. ಯಶೋದಾ ಸಿನಿಮಾ ಬಹುತೇಕ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. 

2 /5

ಈ ಸಿನಿಮಾದ ಟ್ರೈಲರ್‌ ಅನ್ನು ಒಂದೊಂದು ಭಾಷೆಯಲ್ಲಿ ಒಂದೊಂದು ಸ್ಟಾರ್ ಹೀರೋ ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಟಾಲಿವುಡ್‌ ಸ್ಟಾರ್‌ ಸೂರ್ಯ ತಮಿಳು ಟ್ರೇಲರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಸೂರ್ಯ ಅವರೊಂದಿಗೆ ಸಮಂತಾ ಒಳ್ಳೆ ಗೆಳೆತನ ಹೊಂದಿದ್ದಾರೆ.   

3 /5

ಅಲ್ಲದೆ, ಅವರ ಜೊತೆ ಹಲವಾರು ಸಿನಿಮಾಗಳಲ್ಲಿಯೂ ನಟಿಸಿದ್ದು, ಸದ್ಯ ಸಮಂತಾ ಸಿನಿಮಾಗೆ ಸೂರ್ಯ ಕೈ ಜೋಡಿಸಲಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಚಾರ್ಲಿ ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಹೀಗಾಗಿ ರಕ್ಷಿತ್‌ ಅವರು ಸಮಂತಾ ʼಯಶೋದಾʼ ಟ್ರೈಲರ್‌ ಬಿಡುಗಡೆ ಮಾಡಲಿದ್ದಾರೆ.

4 /5

ಇನ್ನು ಹಾಲಿವುಡ್‌ ಸ್ಟಾರ್‌ ವರುಣ್‌ ಧವನ್‌ ಜೊತೆ ಉತ್ತಮ ಸಮಂತಾ ಗುಡ್‌ ರಿಲೇಶನ್‌ಶಿಪ್‌ ಹೊಂದಿದ್ದು, ಹಿಂದಿ ಟ್ರೈಲರ್‌ನ್ನು ಅವರು ಬಿಡುಗಡೆ ಮಾಡುತ್ತಿದ್ದಾರೆ. ಮಲಯಾಳಂ ದುಲ್ಕರ್ ಸಲ್ಮಾನ್, ತೆಲುಗು ಟ್ರೈಲರ್‌ ಅನ್ನು ವಿಜಯ್ ದೇವರಕೊಂಡ ರಿಲೀಸ್‌ ಮಾಡ್ತಾರೆ.

5 /5

ಯಶೋದಾ ಟ್ರೈಲರ್‌ ಬರುವ ತಿಂಗಳು ಅಂದ್ರೆ ನವೆಂಬರ್‌ 11 ರಂದು ಬಿಡುಗಡೆಯಾಗಲಿದೆ. ಅಲ್ಲದೆ, ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದು, ಅವರ ಶಾಕುಂತಲ ಸಿನಿಮಾ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ವಿಜಯ ದೇವರಕೊಂಡ ಜೊತೆ ಸಿನಿಮಾ ಒಂದರಲ್ಲಿ ಸಮಂತಾ ನಟಿಸಲಿದ್ದಾರೆ.