Sun Transit 2021: ನಾಳೆ ಈ ದೊಡ್ಡ ರಾಶಿಗೆ ಸೂರ್ಯನ ಪ್ರವೇಶ, ಬೆಳಗಲಿದೆ ಈ ರಾಶಿಗಳ ಭಾಗ್ಯ, ನಿಮ್ಮ ರಾಶಿ ಇದರಲ್ಲಿದೆಯಾ?

Surya Rashi Parivartan 2021: ನವಗ್ರಹಗಳಿಗೆ ಸೂರ್ಯ ರಾಜ ಎಂದು ಹೇಳಲಾಗುತ್ತದೆ. ಸೂರ್ಯ ಕಾಲ-ಕಾಲಕ್ಕೆ ತನ್ನ ರಾಶಿಯನ್ನು (Astrology) ಕೂಡ ಪರಿವರ್ತಿಸುತ್ತಾನೆ. ಸೂರ್ಯನ ಈ ರಾಶಿ ಪರಿವರ್ತನೆ ಎಲ್ಲಾ ಜಾತಕದವರ (Zodiac Signs) ಮೇಲೆ ಪ್ರಭಾವ ಬೀರುತ್ತದೆ.

Sun Transit 2021: ಅಕ್ಟೋಬರ್ 17 ರಂದು, ಸೂರ್ಯನ ರಾಶಿ ಪರಿವರ್ತನೆಯಾಗಲಿದೆ. ಸೂರ್ಯನನ್ನು (Sun) ನವಗ್ರಹಗಳ  ರಾಜ (Planetary Transit 2021) ಎಂದು ಪರಿಗಣಿಸಲಾಗಿದೆ. ಸೂರ್ಯನು ಕಾಲಕಾಲಕ್ಕೆ ತನ್ನ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತಾನೆ. ಈ ಬಾರಿ ಸೂರ್ಯನು ತುಲಾ ರಾಶಿ ಪ್ರವೇಶಿಸಲಿದ್ದಾನೆ. 16 ನವೆಂಬರ್ 2021 ರವರೆಗೆ ಸೂರ್ಯನು ಈ ರಾಶಿಯಲ್ಲಿ ಇರಲಿದ್ದಾನೆ. ಸೂರ್ಯನ ಈ ತುಲಾ ಗೋಚರದಿಂದ ಮುಂಬರುವ 30 ದಿನಗಳವರೆಗೆ ಕೆಲ ರಾಶಿಗಳ (Sun Signs) ಜಾತಕದವರ ಭಾಗ್ಯ ಪರಿವರ್ತನೆಯಾಗಲಿದೆ. ಈ ಅವಧಿಯಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ ಸಮಯವು ತುಂಬಾ ಕಷ್ಟಕರವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವ ರಾಶಿಯವರಿಗೆ ಸೂರ್ಯನ ರಾಶಿ ಬದಲಾವಣೆಯಿಂದ ಲಾಭ ಸಿಗಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. 

 

ಇದನ್ನೂ ಓದಿ-Garuda Purana: ನಿಜವಾಗಲೂ ಭೂತ-ಪ್ರೇತಗಳು ಇರುತ್ತವೆಯೇ? ಗರುಡ ಪುರಾಣದಲ್ಲಿ ಅಡಗಿದೆ ಈ ಪ್ರಶ್ನೆಯ ರಹಸ್ಯ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ಅನುಸರಿಸುವ ಮೊದಲು ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ಓದಿ-3 ದಿನಗಳ ನಂತರ, ಲಕ್ಷ್ಮೀಗೆ ಸಂಬಂಧಿಸಿದ ವಿಶೇಷ ದಿನವಿದೆ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

1. ಧನು ರಾಶಿ - ಸೂರ್ಯನ ರಾಶಿ ಪಲ್ಲಟದಿಂದ ಧನು ರಾಶಿಯ ಜತಕದವರು ಲಾಭವನ್ನು ಪಡೆಯಲಿದ್ದಾರೆ. ಕೌಟುಂಬಿಕ ಪರಿಸ್ಥಿತಿ ಸುಖಕರವಾಗಿರಲಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಉದ್ಯೋಗದಲ್ಲಿರುವ ಜನರು ತಮ್ಮ ಪರಿಶ್ರಮದ ಫಲವನ್ನು ಪಡೆಯುತ್ತಾರೆ.

2 /6

2. ಮಕರ ರಾಶಿ: ಸೂರ್ಯನ ತುಲಾ ಗೋಚರ ಮಕರ ಜಾತಕದವರಿಯೂ ಕೂಡ ಲಾಭ ನೀಡಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ನಿಮ್ಮದಾಗಲಿದೆ. ತಂದೆಯ ಜೊತೆಗಿನ ಸಂಬಂಧ ಒತ್ತಡದಿಂದ ಕೂಡಿರುವ ಸಾಧ್ಯತೆ ಇದೆ. ಅದನ್ನು ಸರಿದಾರಿಗೆ ತರಲು ನೀವೇ ಪ್ರಯತ್ನಿಸಬೇಕು. ವೃತ್ತಿಜೀವನದಲ್ಲಿ ಮುಂದುವರೆಯಲು ಸಹಾಯ ಸಿಗಲಿದೆ.

3 /6

3. ಸಿಂಹ ರಾಶಿ - ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿವೆ. ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿರಲಿದೆ. ಸಂಗಾತಿಯ ಜೊತೆಗಿನ ಸಂಬಂಧ ಗಟ್ಟಿಯಾಗಲಿದೆ. ಸರ್ಕಾರಿ ನೌಕರಿಯಲ್ಲಿರುವವರ ಆದಾಯ ಹೆಚ್ಚಾಗಲಿದೆ.

4 /6

4. ಮೀನ ರಾಶಿ - ಕುಟುಂಬ ಸದಸ್ಯನಿಗೆ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಕೌಟುಂಬಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ಕಾರ್ಯಕ್ಷೇತ್ರದಲ್ಲಿ ಬಡ್ತಿಯ ಯೋಗ. ಸಹೋದರ-ಸಹೋದರಿಯರ ಜೊತೆಗಿನ ಸಂಭಾಧ ಸುಧಾರಣೆಯಾಗಲಿದೆ. ನೌಕರ ವರ್ಗದವರ ಆದಾಯ ವೃದ್ಧಿಯಾಗಲಿದೆ. 

5 /6

5. ತುಲಾ ರಾಶಿ - ಜೀವನದಲ್ಲಿ ಮುಂದುವರೆಯಲು ಹಲವು ಅವಕಾಶಗಳು ಲಭಿಸಲಿವೆ. ಲವ್ ಲೈಫ್ ಉತ್ತಮವಾಗಿರಲಿದೆ. ವಿದೇಶದಲ್ಲಿ ನೌಕರಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ವ್ಯಾಪಾರದಲ್ಲಿ ಲಾಭದ ಸಂಕೇತ.

6 /6

6. ಮಿಥುನ ರಾಶಿ - ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ನಡೆಸುವ ಯೋಗ ನಿರ್ಮಾಣಗೊಳ್ಳುತ್ತಿದೆ. ಪ್ರೇಮ ಸಂಬಂಧದಲ್ಲಿ ನಿಮಗೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಸಂಗಾತಿಯ ಜೊತೆಗೆ ಹಿಲ್ ಸ್ಟೇಷನ್ ಸುತ್ತಾಡುವ ಯೋಗ ಬರಲಿದೆ.