ಕೇವಲ 25000 ರೂಪಾಯಿಗಳ ಬಂಡವಾಳ ಹಾಕಿ ತಿಂಗಳಿಗೆ 3 ಲಕ್ಷ ರೂ ಲಾಭ ಪಡೆಯಬಹುದು. ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕಾದರೆ ಕೇಂದ್ರ ಸರಕಾರದಿಂದ ಶೇ.50ರಷ್ಟು ಸಹಾಯಧನವೂ ದೊರೆಯುತ್ತದೆ.
ಬೆಂಗಳೂರು : ವ್ಯಾಪಾರ ಆರಂಭಿಸುವುದು ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ. ಅದಕ್ಕೆ ಬಂದವಾಲ್ ಬೇಕಾಗುತ್ತದೆ. ಆದರೆ ಕಡಿಮೆ ಬಂಡವಾಳ ಹೂಡಿ, ಅಧಿಕ ಲಾಭ ಗಳಿಸಲು ಸಾಧ್ಯವಾಗುವುದಾದರೆ ಅಂಥಹ ವ್ಯವಹಾರವನ್ನು ಆರಂಭಿಸಬಹುದು. ಇಲ್ಲಿ ನಾವು ಹೇಳುವ ವ್ಯವಹಾರವನ್ನು ಆರಂಭಿಸಿದರೆ ಕೇವಲ 25000 ರೂಪಾಯಿಗಳ ಬಂಡವಾಳ ಹಾಕಿ ತಿಂಗಳಿಗೆ 3 ಲಕ್ಷ ರೂ ಲಾಭ ಪಡೆಯಬಹುದು. ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕಾದರೆ ಕೇಂದ್ರ ಸರಕಾರದಿಂದ ಶೇ.50ರಷ್ಟು ಸಹಾಯಧನವೂ ದೊರೆಯುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮುತ್ತು ಕೃಷಿ ಬಹಳ ಆಸಕ್ತಿದಾಯಕ ವ್ಯವಹಾರವಾಗಿದೆ. ನಗರ ಪ್ರದೇಶಗಳಲ್ಲಿ, ಇದು ತುಂಬಾ ಜನರಿಗೆ ತಿಳಿದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರತ್ತ ಗಮನ ಹೆಚ್ಚುತ್ತಿದೆ. ಗುಜರಾತಿನ ಪ್ರದೇಶಗಳಲ್ಲಿ ಮುತ್ತಿನ ಕೃಷಿಯಿಂದಾಗಿ ಅನೇಕ ರೈತರು ಲಕ್ಷಾಧಿಪತಿಗಳಾಗಿದ್ದಾರೆ. ಒಡಿಶಾ ಮತ್ತು ಬೆಂಗಳೂರಿನಲ್ಲೂ ಈ ಉದ್ಯಮ ಉತ್ತಮ ವ್ಯಾಪ್ತಿಯನ್ನು ಹೊಂದಿದೆ
ಮುತ್ತುಗಳ ಕೃಷಿಗೆ ಕೊಳದ ಅಗತ್ಯವಿದೆ. ಮುತ್ತು ಕೃಷಿಗೆ ರಾಜ್ಯ ಮಟ್ಟದಲ್ಲೂ ತರಬೇತಿ ನೀಡಲಾಗುತ್ತದೆ. ಒಂದು ವೇಳೆ ಕೊಳ ಇಲ್ಲದೆ ಹೋದರೆ ಅದನ್ನು ಕೂಡ ವ್ಯವಸ್ಥೆಗೊಳಿಸಬಹುದು. ನಿಮ್ಮ ಹೂಡಿಕೆಯ ಮೇಲೆ ಸರ್ಕಾರದಿಂದ 50 ಪ್ರತಿಶತದಷ್ಟು ಸಬ್ಸಿಡಿ ಪಡೆಯಬಹುದು.
ಕೃಷಿ ಆರಂಭಿಸಲು ನುರಿತ ವಿಜ್ಞಾನಿಗಳಿಂದ ತರಬೇತಿ ಪಡೆಯುವುದು ಅಗತ್ಯ. ಸರ್ಕಾರ ಕೂಡಾ ಈ ಕೃಷಿ ಬಗ್ಗೆ ಉಚಿತ ತರಬೇತಿ ನೀಡುತ್ತದೆ. ಈ ಕೃಷಿ ಆರಂಭಿಸಲು ಸರ್ಕಾರಿ ಸಂಸ್ಥೆಗಳು ಅಥವಾ ಮೀನುಗಾರರಿಂದ ಸಿಂಪಿಯನ್ನು ಖರೀದಿಸಬೇಕು. ಹೀಗೆ ಖರೀದಿಸಿದ ಸಿಂಪಿಗಳನ್ನು ಎರಡು ದಿನಗಳ ಕಾಲ ಕೊಳದ ನೀರಿನಲ್ಲಿ ಇಡಲಾಗುತ್ತದೆ. ಸೂರ್ಯನ ಬೆಳಕು ಮತ್ತು ಗಾಳಿಗೆ ಒಡ್ಡಿಕೊಂಡ ನಂತರ, ಸಿಂಪಿಯ ಶೆಲ್ ಮತ್ತು ಸ್ನಾಯುಗಳು ಸಡಿಲವಾಗುತ್ತವೆ. ಸ್ನಾಯುಗಳು ಸಡಿಲವಾದಾಗ, ಸಿಂಪಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅದರೊಳಗೆ ಅಚ್ಚನ್ನು ಹಾಕಲಾಗುತ್ತದೆ. ಅಚ್ಚು ಸಿಂಪಿಯನ್ನು ಚುಚ್ಚಿದಾಗ, ಒಳಗಿನಿಂದ ಒಂದು ಪದಾರ್ಥ ಹೊರಬರುತ್ತದೆ. ಸ್ವಲ್ಪ ಸಮಯದ ನಂತರ, ಅಚ್ಚು ಮುತ್ತಿನ ಆಕಾರದಲ್ಲಿ ಸಿದ್ಧವಾಗುತ್ತದೆ. ಅಚ್ಚಿನಲ್ಲಿ ಯಾವ ಆಕಾರವನ್ನು ಹಾಕಲಾಗುತ್ತದೆಯೋ ಆ ವಿನ್ಯಾಸದ ಮುತ್ತು ಸಿದ್ಧವಾಗುತ್ತದೆ. ಡಿಸೈನರ್ ಮುತ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.
ಒಂದು ಸಿಂಪಿ ತಯಾರಿಸಲು ಸುಮಾರು 25 ರಿಂದ 35 ರೂ. ಬೀಳುತ್ತದೆ . ಒಂದು ಸಿಂಪಿಯಿಂದ 2 ಮುತ್ತುಗಳನ್ನು ತಯಾರಿಸಲಾಗುತ್ತದೆ. ಒಂದು ಮುತ್ತಿನ ಬೆಲೆ ಸುಮಾರು 120 ರೂಪಾಯಿಗಳು. ಗುಣಮಟ್ಟ ಉತ್ತಮವಾಗಿದ್ದರೆ, 200 ರೂಪಾಯಿಯನ್ನು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ. ಒಂದು ಎಕರೆ ಕೆರೆಯಲ್ಲಿ 25 ಸಾವಿರ ಸಿಂಪಿ ಹಾಕಬಹುದು. ಇದರ ಮೇಲೆ ನಿಮ್ಮ ಹೂಡಿಕೆ ಸುಮಾರು 8 ಲಕ್ಷ ರೂ. 50% ಸಿಂಪಿಗಳು ಉತ್ತಮವಾಗಿದ್ದು, ಅವುಗಳನ್ನು ಮಾರುಕಟ್ಟೆಗೆ ತಂದರೆ, ವಾರ್ಷಿಕ 30 ಲಕ್ಷದವರೆಗೆ ಆದಾಯವನ್ನು ಸುಲಭವಾಗಿ ಗಳಿಸಬಹುದು.