ಚಳಿಗಾಲದಲ್ಲಿ ಮಾಡುವ ಈ ತಪ್ಪಿನಿಂದ ಕುಗ್ಗಿ ಹೋಗುವುದು ತ್ವಚೆಯ ಕಾಂತಿ

ಹೆಚ್ಚಿನ ಜನರು ಬೇಸಿಗೆ ಅಥವಾ ಮಳೆಗಾಲದಲ್ಲಿ ಮಾಡುವ ವಿಧಾನಗಳನ್ನೇ ಚರ್ಮದ ಆರೈಕೆಗೆ  ಚಳಿಗಾಲದಲ್ಲಿಯೂ ಅನುಸರಿಸುತ್ತಾರೆ. ಇದರಿಂದಾಗಿ ಚರ್ಮವು ಪೋಷಣೆಯನ್ನು ಪಡೆಯುವುದಿಲ್ಲ ಮತ್ತು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ. 

Skin care Tips : ಚಳಿಗಾಲವು ನಿಮ್ಮ ತ್ವಚೆಯ ಸೌಂದರ್ಯವನ್ನು ಕುಗ್ಗಿಸುತ್ತದೆ. ತ್ವಚೆಯನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಒಣ ಚರ್ಮ, ತುರಿಕೆ ಅಥವಾ ಎಸ್ಜಿಮಾ, ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತ್ವಚೆಯ ಬಗ್ಗೆ ಸರಿಯಾದ ಕಾಳಜಿ ವಹಿಸದಿರುವುದು ಕೂಡಾ ಈ ಸಮಸ್ಯೆಗಳು ಉಲ್ಬಣವಾಗುವುದಕ್ಕೆ ಕಾರಣ. ಹೆಚ್ಚಿನ ಜನರು ಬೇಸಿಗೆ ಅಥವಾ ಮಳೆಗಾಲದಲ್ಲಿ ಮಾಡುವ ವಿಧಾನಗಳನ್ನೇ ಚರ್ಮದ ಆರೈಕೆಗೆ  ಚಳಿಗಾಲದಲ್ಲಿಯೂ ಅನುಸರಿಸುತ್ತಾರೆ. ಇದರಿಂದಾಗಿ ಚರ್ಮವು ಪೋಷಣೆಯನ್ನು ಪಡೆಯುವುದಿಲ್ಲ ಮತ್ತು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಚಳಿಯಲ್ಲಿ ಉಗುರುಬೆಚ್ಚಗಿನ ಅಥವಾ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು.  ಆದರೆ ಬಿಸಿ ನೀರಿನಿಂದ ಮುಖ ತೊಳೆದಾಗ ತ್ವಚೆಗೆ ಸಾಕಷ್ಟು ಹಾನಿಯಾಗುತ್ತದೆ. ಬಿಸಿ ನೀರಿನಿಂದ ಚರ್ಮದ ಶುಷ್ಕತೆ ಹೆಚ್ಚಾಗುತ್ತದೆ. ಅದೇ ರೀತಿ ಸೂಕ್ಷ್ಮ ತ್ವಚೆ ಇರುವವರು ಬಿಸಿ ನೀರಿನಿಂದ ಮುಖ ತೊಳೆದರೆ ಸ್ಕಿನ್ ಇನ್ ಫೆಕ್ಷನ್ ಆಗುವ ಸಾಧ್ಯತೆಯೂ ಹೆಚ್ಚುತ್ತದೆ.  

2 /4

ಸ್ನಾನದ ನಂತರ ಮುಖವನ್ನು ಸ್ವಚ್ಛಗೊಳಿಸಲು  ಫೇಸ್ ವಾಶ್ ಅಥವಾ ಕ್ಲೆನ್ಸರ್  ಬಳಸಿ ಸ್ವಚ್ಛಗೊಳಿಸಿ.

3 /4

ನಿಮ್ಮ ಚರ್ಮವನ್ನು ಮೃದು ಮತ್ತು ಆರೋಗ್ಯಕರವಾಗಿಡಲು ಸಾಕಷ್ಟು ಪೌಷ್ಟಿಕಾಂಶದ ಅಗತ್ಯವಿರುತ್ತದೆ. ಇದಕ್ಕಾಗಿ, ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಮಾಯಿಶ್ಚರೈಸರ್ ಹಚ್ಚಿ.   

4 /4

ಚರ್ಮಕ್ಕೆ ಹೆಚ್ಚಿನ ಪೋಷಣೆಯ ಅಗತ್ಯವಿರುವವರು ತಮ್ಮ ಮುಖದ ಮೇಲೆ ಸೀರಮ್ ಅನ್ನು  ಬಳಸಬಹುದು. ಮಾಯಿಶ್ಚರೈಸರ್ ಹಚ್ಚಿದ ನಂತರ ಫೇಸ್ ಸೀರಮ್ ಅನ್ನು ಬಳಸಬಹುದು. ಇದು ತೆರೆದ ರಂಧ್ರಗಳ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಮೊಡವೆಗಳಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ.